Author: editor.udayarashmi@gmail.com

ಸಿಂದಗಿ: ಪರೀಕ್ಷೆಗಳು ಭಯವಲ್ಲ ಅವುಗಳು ನಮ್ಮ ಜ್ಞಾನ, ಸೃಜನಶೀಲತೆಯನ್ನು ಅಳೆಯುವ ಮಾಪನಗಳು ಅಷ್ಟೇ. ಪರೀಕ್ಷೆಗಳನ್ನು ಭಯದಿಂದ ಕಾಣದೆ ಅವುಗಳನ್ನು ಸವಾಲಾಗಿ ಸ್ವೀಕರಿಬೇಕು ಎಂದು ಹುಮನಾಬಾದಿನ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಸಿ.ಎಸ್.ಆನಂದ ಹೇಳಿದರು.ಅವರು ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಆಂಗ್ಲಭಾಷಾ ವಿಷಯದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿಯನ್ನು ಹೊತ್ತುಕೊಂಡಿರಬೇಕು. ಯುವಶಕ್ತಿ ಈ ದೇಶದ ಶಕ್ತಿ ಈ ದೇಶದ ಅವಿಭಾಜ್ಯ ಅಂಗ. ನಮ್ಮನ್ನು ಹೆತ್ತವರು ನಮ್ಮ ಮೇಲೆ ಅಗಾದ ಕನಸುಗಳನ್ನು ಇಟ್ಟಿಕೊಂಡು ಬದುಕುತ್ತಿದ್ದಾರೆ ಅವರ ಆಸೆಗೆ ನಾವು ನಿರಾಸೆ ಮಾಡದೆ ನಿರಂತರ ಪ್ರಯತ್ನದ ಅಧ್ಯಯನಶೀಲತೆ ನಮ್ಮ ರಕ್ತದಲ್ಲಿ ಮೂಡಬೇಕು ಆಗ ನಾವು ಸಾಧಕರ ಸಾಲಿಗೆ ಸೇರುತ್ತೇವೆ ಎಂದರು.ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಅವರು ಮಾತನಾಡಿದರು.ಈ ವೇಳೆ ಆಂಗ್ಲಭಾಷಾ ಉಪನ್ಯಾಸಕ ಎಸ್.ಎ.ಪಾಟೀಲ, ಎ.ಬಿ.ಪಾಟೀಲ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ…

Read More

ಸಿಂದಗಿ: ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೩ನೇ ಪುಣ್ಯ ಸ್ಮರಣೆಯ ನಿಮಿತ್ಯ ಪಟ್ಟಣದ ಮನಗೂಳಿ ಆಸ್ಪತ್ರೆ ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರವನ್ನು ಜ.೨೧ ರಂದು ರವಿವಾರ ಮುಂಜಾನೆ ೧೦ ಗಂಟೆಯಿಂದ ಮಧ್ಯಾನ್ಹ ೩ ಗಂಟೆಯ ವರೆಗೆ ಮನಗೂಳಿ ಆಸ್ಪತ್ರೆಯಲ್ಲಿಯೆ ಆಯೋಜಿಸಲಾಗಿದೆ ಎಂದು ಮನಗೂಳಿ ಆಸ್ಪತ್ರೆಯ ಡಾ.ಶಾಂತವೀರ ಮನಗೂಳಿ ಹೇಳಿದರು.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕಾ ಮೂಲಕ ತಿಳಿಸಿದ ಅವರು, ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಿಬಿರದಲ್ಲಿ ತಜ್ಞ ವೈದ್ಯರು ಆಗಮಿಸುವರು. ವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತತಪಾಷಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಸಣಾ ಕಾರ್ಯ ನಡೆಯುವದು.ಶಿಬಿರದಲ್ಲಿ ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮಿ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಗೌತಮ ವಗ್ಗರ, ಡಾ.ಸುನೀಲ ಸಜ್ಜನ,…

Read More

ಸಿಂದಗಿ: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮೋಬೈಲ್ ಬಳಕೆ ಹೆಚ್ಚಾಗಿ ಸಾಮಾಜಿಕ ನಾಟಕಗಳು, ಸಂಗೀತ, ಪುರಾಣ ಪ್ರವಚನಗಳು, ನಶಿಸಿ ಹೋಗುತ್ತಿವೆ ಎಂದು ಬಿಜೆಪಿ ಓಬಿಸಿ ತಾಲೂಕಾಧ್ಯಕ್ಷ ರವಿಕಾಂತ ನಾಯ್ಕೋಡಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಸಮೀಪವಿರುವ ಬಗಲೂರ ಗ್ರಾಮದಲ್ಲಿ ಶ್ರೀ ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ರೈತನ ಹೆಸರು ನಾಡಿಗೆ ಉಸಿರು ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ರಂಗಭೂಮಿ ಉಳಿವಿಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು. ನಮ್ಮ ಸಂಸ್ಕೃತಿ, ಕಲೆ, ಸಾಮಾಜಿಕ ಸಂದೇಶಗಳನ್ನು ಸಾರುವ ನಾಟಕಗಳು, ಜನರ ಮನಸ್ಸನ್ನು ಸೆಳೆಯುತ್ತಿವೆ. ನಾಟಕ ಮತ್ತು ಸಂಗೀತಕ್ಕೆ ದಣಿದ ವ್ಯಕ್ತಿಗೆ ನೆಮ್ಮದಿ ಕೊಡುವ ಸಾಮರ್ಥ್ಯವಿದೆ ಎಂದರು.ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ ಗುರುಲಿಂಗಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.ಶಿವು ಮಾಗಣಗೇರಿ, ರುದ್ರಗೌಡ ಕಿರಣಗಿ, ಮಡಿವಾಳ ಹೂನ್ನಳಿ, ಅಶೋಕ ನಾರಾಯಣಪೂರ, ರಾಜು ಸಾಂಬಾ, ರಾಜುಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More

ಸಿಂದಗಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಭಕ್ತ ಸಮೂಹದೊಂದಿಗೆ ದೇವಸ್ಥಾನದಿಂದ ನಂದಿಕೋಲ ಹಾಗೂ ಸಕಲವಾದ್ಯಗಳೊಂದಿಗೆ ಪ್ರಾರಂಭವಾಯಿತು. ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಭಿಕಾ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮತ್ತು ರಥೋತ್ಸವ ನೀಲಗಂಗಾದೇವಸ್ಥಾನದ ಮಾರ್ಗವಾಗಿ ಹಳೆ ಬಜಾರದಲ್ಲಿನ ಶ್ರೀಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು. ದೇವಸ್ಥಾನದಲ್ಲಿ ಮತ್ತು ಮಾರ್ಗ ಮಧ್ಯ ನೀಲಗಂಗಾ ದೇವಸ್ಥಾನ ಹಾಗೂ ಹಳೆ ಬಜಾರದ ಮಧ್ಯದಲ್ಲಿ ವಿಶ್ವನಾಥ ಬಡಿಗೇರ ಹಾಗೂ ಸಂಗಡಿಗರು ಪುರವಂತರ ಸೇವೆ ಸಲ್ಲಿಸಿದರು. ಪುರವಂತರ ಸೇವೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಾರ್ಗದುದ್ದಕ್ಕೂ ಭಕ್ತಾಧಿಗಳು ಉತ್ಸವ ಪಲ್ಲಕ್ಕಿಯಲ್ಲಿರುವ ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಭಿಕಾ ಉತ್ಸವ ಮೂರ್ತಿಗಳಿಗೆ ಆರತಿ ಮತ್ತು ಪೂಜೆ ಸಲ್ಲಿಸೂವ ಮೂಲಕ ದೇವರ ಕೃಪೆಗೆ ಪಾತ್ರರಾದರು.ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಭೀಮಾಶಂಕರಮಠದ ಸದ್ಗುರು ದತ್ತಪ್ಪಯ್ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.ಪಂಡಿತ ಕುಲಕರ್ಣಿ, ವಿಜಯ ಕುಲಕರ್ಣಿ, ನೀಲಗಂಗಾದೇವಿ ದೇವಸ್ಥಾನದ ಧರ್ಮದರ್ಶಿ ಸುನೀಲ ದೇವರಮನಿ, ಶ್ರೀಶೈಲ ನಂದಿಕೋಲ,…

Read More

ವಿಜಯಪುರ: ಶೈಕ್ಷಣಿಕ ಸಂಸ್ಥೆಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಆಗಾಗ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮೌಲ್ಯಮಾಪನ ಕಾರ್ಯವೈಖರಿಯನ್ನು ವಿಶ್ಲೇಷಿಸುವುದು ಅವಶ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಇಂದು ಶುಕ್ರವಾರ ನಡೆದ ಬಿ.ಎಲ್.ಡಿ.ಇ ಅಂಗ ಸಂಸ್ಥೆಗಳ ವಾರ್ಷಿಕ ಆಡಳಿತ ಮತ್ತು ಶೈಕ್ಷಣಿಕ ಮೌಲ್ಯಮಾಪನ ಮಂಥನ-3 ಉದ್ಘಾಟಿಸಿ ಅವರು ಮಾತನಾಡಿದರು.ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಬಿ.ಎಲ್.ಡಿ.ಇ ಸಂಸ್ಥೆ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಜಾರಿಗೆ ತಂದಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ.ಕೊಟ್ನಾಳ ಮಾತನಾಡಿ, ಬಿ.ಎಲ್.ಡಿ.ಇ ಅಂಗ ಸಂಸ್ಥೆಗಳಲ್ಲಿ ಎಸ್ಒಪಿ ಕಾರ್ಯವೈಖರಿಯ ಆಳವಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಶಿಕ್ಷಣದ ಧ್ಯೇಯೋದ್ದೇಶಗಳು, ಸಂಸ್ಥೆ ಹೊಂದಿರುವ ದೃಷ್ಟಿಕೋನ, ಶೈಕ್ಷಣಿಕ ಗುಣಮಟ್ಟ ಹಾಗೂ ಆಡಳಿತಾತ್ಮಕ ಸುಧಾರಣೆಯನ್ನು ಅವಲೋಕನ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.ಎ.ವಿ.ಎಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ…

Read More

ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನ | ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ | ಮಠಾಧೀಶರ ಮನವಿಗೆ ಸ್ಪಂದನೆ ಬೆಂಗಳೂರು: ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಅವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.“ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ತೀರ್ಮಾನಿಸಿದೆ. ನಮ್ಮ ಸರ್ಕಾರದ ಈ ತೀರ್ಮಾನ ಮುಖ್ಯಮಂತ್ರಿಯಾದ ನನಗೆ ಅತೀವ ಹೆಮ್ಮೆ ಮತ್ತು ತೃಪ್ತಿಯನ್ನು ಉಂಟು ಮಾಡಿದೆ. ಇದು ಕೇವಲ ಘೋಷಣೆ ಅಲ್ಲ, ಬಸವ ತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ದತೆ” ಎಂದು ಸಿಎಂ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂದು ನಾಡಿನ ಲಿಂಗಾಯತ ಮಠಗಳ ಸ್ವಾಮಿಗಳು ನನ್ನ ಬಳಿ ಬಂದು ಮನವಿ ಮಾಡಿದ್ದರು. ಇದು ವೈಯಕ್ತಿಕವಾಗಿ ನನ್ನ ಅಪೇಕ್ಷೆಯೂ ಆಗಿತ್ತು. ಸ್ವಾಮಿಗಳ ಈ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮ್ಮ…

Read More

ಮುದ್ದೇಬಿಹಾಳ: ಫೆಬ್ರವರಿ.೪ ರಂದು ಪಟ್ಟಣದ ಎಪಿಎಂಸಿಯಲ್ಲಿರುವ ದಿ-ಕರ್ನಾಟಕ ಕೋ ಅಪ್ ಬ್ಯಾಂಕ್ ಸಭಾಭವನದಲ್ಲಿ ೩ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ಈ ಕುರಿತು ಚರ್ಚಿಸಲು ದಿ.೨೦ ರಂದು ಸಂಜೆ ೫.೩೦ ಕ್ಕೆ ದಿ ಕರ್ನಾಟಕ ಬ್ಯಾಂಕ್ ನ ಸಭಾಭವನದ ಮೊದಲನೇ ಮಹಡಿಯಲ್ಲಿ ಗಣ್ಯರ, ವಿವಿಧ ಸಂಘಟನೆಗಳ ಅಧ್ಯಕ್ಷರ ಹಾಗೂ ಆಸಕ್ತರ ಸಭೆ ಕರೆಯಲಾಗಿದೆ. ಸರ್ವರೂ ಹಾಜರಾಗಿ ಸಮ್ಮೇಳನ ಆಚರಣೆಯ ಕುರಿತು ಸಲಹೆ ಸೂಚನೆ ನೀಡಲು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಈವರೆಗೆ ೫೮೮.೦೬ ಕೋಟಿ ರೂ. ರೈತರಿಗೆ ಕಬ್ಬಿನ ಬಿಲ್ ಪಾವತಿ: ವಿನಯಕುಮಾರ ವಿಜಯಪುರ: ಜಿಲ್ಲೆಯಲ್ಲಿ ೯ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಕ್ಕರೆ ಕಾರ್ಖಾನೆಗಳು ೨೦೨೩-೨೪ ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಿವೆ. ಈ ವರೆಗೆ ಜಿಲ್ಲೆಯಲ್ಲಿನ ಎಲ್ಲಾ ಸಕ್ಕರೆ ಕಾರ್ಖಾನೆಗಳು ಸುಮಾರು ೩೬.೫೧ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು ಈ ಪೈಕಿ ದಿನಾಂಕ ೧೬-೦೧-೨೦೨೪ ರವರೆಗೆ ೫೮೮.೦೬ ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಅವರು ತಿಳಿಸಿದ್ದಾರೆ.ಜಿಲ್ಲೆಯ ಸಾಯಿಬಸವ ಮಲಘಾಣ ಸಕ್ಕರೆ ಕಾರ್ಖಾನೆಯವರು ೩೨.೯೬ ಕೋಟಿ ರೂ., ಇಂಡಿಯನ್ ಶುಗರ್ಸ ಹಾವಿನಾಳ ೫೮.೮೯ ಕೋಟಿ ರೂ., ಶ್ರೀ ಬಾಲಾಜಿ ಶುಗರ್ಸ ಯರಗಲ್ಲ ೮೮.೬೧ ಕೋಟಿ ರೂ., ಕೆಪಿಆರ್ ಶುಗರ್ಸ ಆಲಮೇಲ ೧೩೧.೯೭ ಕೋಟಿ ರೂ., ಜಮಖಂಡಿ ಶುಗರ್ಸ ಯುನಿಟ್-೨ ನಾದ ಕೆಡಿ ೭೦.೯೧ ಕೋಟಿ ರೂ., ಸಂಗಮನಾಥ ಶುಗರ್ಸ ಯರಗಲ್ಲ ಬಿಕೆ…

Read More

ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆ-೨೦೨೪ ರ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಜನವರಿ ೨೧ ರಂದು ಬೆಳಗ್ಗೆ ೯ ಗಂಟೆಯಿಂದ ಕಲಾವಿದರಿಗಾಗಿ ‘ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಕಾರ್ಯಾಗಾರ’ವನ್ನು ವಿಧಾನಸೌಧ ಪೂರ್ವದಿಕ್ಕಿನ ಬಸವಣ್ಣನ ಪ್ರತಿಮೆ ಎದುರುಗಡೆಯಲ್ಲಿ ಏರ್ಪಡಿಸಲಾಗಿದೆ.ವೃತ್ತಿಪರ ಮತ್ತು ಹವ್ಯಾಸಿ ವ್ಯಂಗ್ಯಚಿತ್ರಕಾರರು, ಹವ್ಯಾಸಿ ಕಲಾವಿದರು, ಕಲಾ ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ.ಚುನಾವಣೆ, ಮತದಾನದ ಮಹತ್ವ ಸಾರುವ, ಮತದಾನ ಪ್ರಕ್ರಿಯೆಯಲ್ಲಿ ನಾಗರಿಕರು ಭಾಗವಹಿಸುವುದನ್ನು ಪ್ರೋತ್ಸಾಹಿಸುವಂತಹ ವ್ಯಂಗ್ಯಚಿತ್ರಗಳನ್ನು ರಚಿಸಬೇಕು. ಆಯ್ಕೆಯಾದ ೧೦೦ ವ್ಯಂಗ್ಯಚಿತ್ರಗಳನ್ನು ಜ.೨೧ರಂದು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅತ್ಯುತ್ತಮ ೨೫ ಚಿತ್ರಗಳನ್ನು ಮತದಾನ ಜಾಗೃತಿ, ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಹಾಗೂ ಆ ವ್ಯಂಗ್ಯಚಿತ್ರಗಳಿಗೆ ಗೌರವಧನವನ್ನು ಸಹ ನೀಡಲಾಗುತ್ತದೆ.ಷರತ್ತು ಹಾಗೂ ನಿಬಂಧನೆಗಳು

Read More