ಈವರೆಗೆ ೫೮೮.೦೬ ಕೋಟಿ ರೂ. ರೈತರಿಗೆ ಕಬ್ಬಿನ ಬಿಲ್ ಪಾವತಿ: ವಿನಯಕುಮಾರ
ವಿಜಯಪುರ: ಜಿಲ್ಲೆಯಲ್ಲಿ ೯ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಕ್ಕರೆ ಕಾರ್ಖಾನೆಗಳು ೨೦೨೩-೨೪ ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಿವೆ. ಈ ವರೆಗೆ ಜಿಲ್ಲೆಯಲ್ಲಿನ ಎಲ್ಲಾ ಸಕ್ಕರೆ ಕಾರ್ಖಾನೆಗಳು ಸುಮಾರು ೩೬.೫೧ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು ಈ ಪೈಕಿ ದಿನಾಂಕ ೧೬-೦೧-೨೦೨೪ ರವರೆಗೆ ೫೮೮.೦೬ ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಾಯಿಬಸವ ಮಲಘಾಣ ಸಕ್ಕರೆ ಕಾರ್ಖಾನೆಯವರು ೩೨.೯೬ ಕೋಟಿ ರೂ., ಇಂಡಿಯನ್ ಶುಗರ್ಸ ಹಾವಿನಾಳ ೫೮.೮೯ ಕೋಟಿ ರೂ., ಶ್ರೀ ಬಾಲಾಜಿ ಶುಗರ್ಸ ಯರಗಲ್ಲ ೮೮.೬೧ ಕೋಟಿ ರೂ., ಕೆಪಿಆರ್ ಶುಗರ್ಸ ಆಲಮೇಲ ೧೩೧.೯೭ ಕೋಟಿ ರೂ., ಜಮಖಂಡಿ ಶುಗರ್ಸ ಯುನಿಟ್-೨ ನಾದ ಕೆಡಿ ೭೦.೯೧ ಕೋಟಿ ರೂ., ಸಂಗಮನಾಥ ಶುಗರ್ಸ ಯರಗಲ್ಲ ಬಿಕೆ ೪೪.೫೮ ಕೋಟಿ ರೂ., ಭೀಮಾಶಂಕರ ಶುಗರ್ಸ ೨೬.೭೬ ಕೋಟಿ ರೂ., ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕಗಲಗಲಿ ೫೯.೧೧ ಕೋಟಿ ರೂ., ಹಾಗೂ ಶ್ರೀ ಬಸವೇಶ್ವರ ಶುಗರ್ಸ ಕಾರಜೋಳ ೭೪.೨೫ ಕೋಟಿ ರೂ. ಹಣವನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. ರೈತರಿಂದ ಕಬ್ಬು ಪಡೆದುಕೊಂಡು ಕಬ್ಬು ನುರಿಸಿದ ಕೂಡಲೇ ಆಯಾ ರೈತರಿಗೆ ಹಣ ನೀಡಲು ಎಲ್ಲಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
