ಸಿಂದಗಿ: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮೋಬೈಲ್ ಬಳಕೆ ಹೆಚ್ಚಾಗಿ ಸಾಮಾಜಿಕ ನಾಟಕಗಳು, ಸಂಗೀತ, ಪುರಾಣ ಪ್ರವಚನಗಳು, ನಶಿಸಿ ಹೋಗುತ್ತಿವೆ ಎಂದು ಬಿಜೆಪಿ ಓಬಿಸಿ ತಾಲೂಕಾಧ್ಯಕ್ಷ ರವಿಕಾಂತ ನಾಯ್ಕೋಡಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಸಮೀಪವಿರುವ ಬಗಲೂರ ಗ್ರಾಮದಲ್ಲಿ ಶ್ರೀ ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ರೈತನ ಹೆಸರು ನಾಡಿಗೆ ಉಸಿರು ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ರಂಗಭೂಮಿ ಉಳಿವಿಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು. ನಮ್ಮ ಸಂಸ್ಕೃತಿ, ಕಲೆ, ಸಾಮಾಜಿಕ ಸಂದೇಶಗಳನ್ನು ಸಾರುವ ನಾಟಕಗಳು, ಜನರ ಮನಸ್ಸನ್ನು ಸೆಳೆಯುತ್ತಿವೆ. ನಾಟಕ ಮತ್ತು ಸಂಗೀತಕ್ಕೆ ದಣಿದ ವ್ಯಕ್ತಿಗೆ ನೆಮ್ಮದಿ ಕೊಡುವ ಸಾಮರ್ಥ್ಯವಿದೆ ಎಂದರು.
ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ ಗುರುಲಿಂಗಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.
ಶಿವು ಮಾಗಣಗೇರಿ, ರುದ್ರಗೌಡ ಕಿರಣಗಿ, ಮಡಿವಾಳ ಹೂನ್ನಳಿ, ಅಶೋಕ ನಾರಾಯಣಪೂರ, ರಾಜು ಸಾಂಬಾ, ರಾಜುಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

