ಸಿಂದಗಿ: ಪರೀಕ್ಷೆಗಳು ಭಯವಲ್ಲ ಅವುಗಳು ನಮ್ಮ ಜ್ಞಾನ, ಸೃಜನಶೀಲತೆಯನ್ನು ಅಳೆಯುವ ಮಾಪನಗಳು ಅಷ್ಟೇ. ಪರೀಕ್ಷೆಗಳನ್ನು ಭಯದಿಂದ ಕಾಣದೆ ಅವುಗಳನ್ನು ಸವಾಲಾಗಿ ಸ್ವೀಕರಿಬೇಕು ಎಂದು ಹುಮನಾಬಾದಿನ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಸಿ.ಎಸ್.ಆನಂದ ಹೇಳಿದರು.
ಅವರು ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಆಂಗ್ಲಭಾಷಾ ವಿಷಯದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿಯನ್ನು ಹೊತ್ತುಕೊಂಡಿರಬೇಕು. ಯುವಶಕ್ತಿ ಈ ದೇಶದ ಶಕ್ತಿ ಈ ದೇಶದ ಅವಿಭಾಜ್ಯ ಅಂಗ. ನಮ್ಮನ್ನು ಹೆತ್ತವರು ನಮ್ಮ ಮೇಲೆ ಅಗಾದ ಕನಸುಗಳನ್ನು ಇಟ್ಟಿಕೊಂಡು ಬದುಕುತ್ತಿದ್ದಾರೆ ಅವರ ಆಸೆಗೆ ನಾವು ನಿರಾಸೆ ಮಾಡದೆ ನಿರಂತರ ಪ್ರಯತ್ನದ ಅಧ್ಯಯನಶೀಲತೆ ನಮ್ಮ ರಕ್ತದಲ್ಲಿ ಮೂಡಬೇಕು ಆಗ ನಾವು ಸಾಧಕರ ಸಾಲಿಗೆ ಸೇರುತ್ತೇವೆ ಎಂದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಅವರು ಮಾತನಾಡಿದರು.
ಈ ವೇಳೆ ಆಂಗ್ಲಭಾಷಾ ಉಪನ್ಯಾಸಕ ಎಸ್.ಎ.ಪಾಟೀಲ, ಎ.ಬಿ.ಪಾಟೀಲ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಆರ್.ಬಿ.ಹೊಸಮನಿ, ಎಸ್.ಪಿ.ಬಿರಾದಾರ, ಎಮ್.ಎನ್.ಅಜ್ಜಪ್ಪ, ಮುಕ್ತಾಯಕ್ಕ ಕತ್ತಿ, ಸಿದ್ದಲಿಂಗ ಕಿಣಗಿ, ಡಾ.ಶಾಂತುಲಾಲ ಚವ್ಹಾಣ, ಸತೀಶ ಬಸರಕೋಡ, ಆರ್.ವಾಯ್.ಪರೀಟ, ಗಂಗಾರಾಮ ಪವಾರ, ಸಚಿನ ಕನ್ನಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

