ಸಿಂದಗಿ: ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೩ನೇ ಪುಣ್ಯ ಸ್ಮರಣೆಯ ನಿಮಿತ್ಯ ಪಟ್ಟಣದ ಮನಗೂಳಿ ಆಸ್ಪತ್ರೆ ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರವನ್ನು ಜ.೨೧ ರಂದು ರವಿವಾರ ಮುಂಜಾನೆ ೧೦ ಗಂಟೆಯಿಂದ ಮಧ್ಯಾನ್ಹ ೩ ಗಂಟೆಯ ವರೆಗೆ ಮನಗೂಳಿ ಆಸ್ಪತ್ರೆಯಲ್ಲಿಯೆ ಆಯೋಜಿಸಲಾಗಿದೆ ಎಂದು ಮನಗೂಳಿ ಆಸ್ಪತ್ರೆಯ ಡಾ.ಶಾಂತವೀರ ಮನಗೂಳಿ ಹೇಳಿದರು.
ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕಾ ಮೂಲಕ ತಿಳಿಸಿದ ಅವರು, ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಿಬಿರದಲ್ಲಿ ತಜ್ಞ ವೈದ್ಯರು ಆಗಮಿಸುವರು. ವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತತಪಾಷಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಸಣಾ ಕಾರ್ಯ ನಡೆಯುವದು.
ಶಿಬಿರದಲ್ಲಿ ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮಿ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಗೌತಮ ವಗ್ಗರ, ಡಾ.ಸುನೀಲ ಸಜ್ಜನ, ಡಾ.ಸೌಮ್ಯಾ ಮನಗೂಳಿ ಸೇರಿದಂತೆ ಅನೇಕ ನುರಿತ ವೈದ್ಯರು ಭಾಗವಹಿಸುವರು. ಶಿಬಿರದಲ್ಲಿ ಪಾಲ್ಗೋಳ್ಳುವವರು ಕೂಡಲೇ ಹೆಸರನ್ನು ನೊಂದಾಯಿಸಬೇಕು. ಮತ್ತು ಈ ಮೋಬೈಲ್ ಸಂಖ್ಯೆ ೯೧೪೧೧೬೩೩೮೭, ೯೭೪೦೬೭೩೬೧೩, ೬೩೬೬೬೭೬೪೦೦ಗೆ ಸಂಪರ್ಕಿಸಲು ಕೋರಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

