ಮುದ್ದೇಬಿಹಾಳ: ಫೆಬ್ರವರಿ.೪ ರಂದು ಪಟ್ಟಣದ ಎಪಿಎಂಸಿಯಲ್ಲಿರುವ ದಿ-ಕರ್ನಾಟಕ ಕೋ ಅಪ್ ಬ್ಯಾಂಕ್ ಸಭಾಭವನದಲ್ಲಿ ೩ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕುರಿತು ಚರ್ಚಿಸಲು ದಿ.೨೦ ರಂದು ಸಂಜೆ ೫.೩೦ ಕ್ಕೆ ದಿ ಕರ್ನಾಟಕ ಬ್ಯಾಂಕ್ ನ ಸಭಾಭವನದ ಮೊದಲನೇ ಮಹಡಿಯಲ್ಲಿ ಗಣ್ಯರ, ವಿವಿಧ ಸಂಘಟನೆಗಳ ಅಧ್ಯಕ್ಷರ ಹಾಗೂ ಆಸಕ್ತರ ಸಭೆ ಕರೆಯಲಾಗಿದೆ. ಸರ್ವರೂ ಹಾಜರಾಗಿ ಸಮ್ಮೇಳನ ಆಚರಣೆಯ ಕುರಿತು ಸಲಹೆ ಸೂಚನೆ ನೀಡಲು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
