Author: editor.udayarashmi@gmail.com

ದೇವರಹಿಪ್ಪರಗಿ: ನಮ್ಮ ವರ್ತನೆ, ಬುದ್ಧಿಮತ್ತೆ, ಪ್ರಯತ್ನಗಳೇ ನಮ್ಮ ನಿಜವಾದ ಅಂತಃಶಕ್ತಿಗಳು ಇವುಗಳ ಮೂಲಕ ವಿದ್ಯಾರ್ಥಿಗಳು ಯಶಸ್ಸಿನತ್ತ ಸಾಗಲು ಮುಂದಾಗಬೇಕು ಎಂದು ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಿ.ಕೆ.ಕೊಣ್ಣೂರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಜರುಗಿದ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್, ಸ್ಕೌಟ್ ಮತ್ತು ಗೈಡ್ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಯಶಸ್ಸಿನ ಮೂಲವೇ ನಮ್ಮ ನಡುವಳಿಕೆ. ಆದ್ದರಿಂದ ನಾವೆಲ್ಲ ಉತ್ತಮ ಚಾರಿತ್ರ್ಯವನ್ನು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯೋಣ ಎಂದರು.ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಚಂದ್ರಕಾಂತ ಬಿ. ಹಾಗೂ ಇಂಡಿ ಜಿ.ಆರ್.ಜಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಆನಂದ ನಡುವಿನಮನಿ ಮಾತನಾಡಿದರು.ಪ್ರಾಂಶುಪಾಲ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮಮತಾ ಬನ್ನೂರ,…

Read More

ಮೋರಟಗಿ: ಗ್ರಾಮದ ಪ್ರತಿಷ್ಠಿತ ಕಲ್ಪವೃಕ್ಷ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ದಿನಾಂಕ ೨೧ ರಂದು ರವಿವಾರ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಸದ್ಗುರು ಶಂಕರಾನಂದ ಸ್ವಾಮಿಗಳು ಆರೂಢ ಮಠ ಅಸಂಗಿಹಾಳ ದಿವ್ಯ ಸಾನಿಧ್ಯ ವಹಿಸಲಿಸಲಿದ್ದು ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಅಧ್ಯಕ್ಷ ಸ್ಥಾನ ವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಇಸ್ರೋ ಹಿರಿಯ ವಿಜ್ಞಾನಿ ಸಂಜೀವ ಗೌರ ಆಗಮಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಡಾ, ಪಿ. ಕೆ. ಹೊಸಮನಿ ಪಿಯು ಡಿಡಿಪಿಐ ವಿಜಯಪುರ, ಬಿ. ಟಿ. ಗೊಂಗಡಿ, ಸಿ. ಎಂ. ಬಂಡಗಾರ, ಎಸ್. ಕೆ. ಬಿರಾದಾರ, ಪಾಲಕರ ಪ್ರತಿನಿಧಿಯಾಗಿ ಎಸ್. ಎಸ್. ಪೂಜಾರಿ, ಆಡಳಿತ ಅಧಿಕಾರಿ ಎಸ್. ಎಚ್. ದುಳಬಾ, ಸಮನ್ವಯ ಅಧಿಕಾರಿ ಎಸ್. ವ್ಹಿ. ಬಿರಾದಾರ, ಪ್ರಾಚಾರ್ಯ ಡಾ, ಎ. ಬಿ. ಸಿಂದಗಿ, ಎಲ್. ಎಸ್. ಸುಲ್ತಾನಪುರ, ಪ್ರಾಚಾರ್ಯ ಎಸ್. ಬಿ. ಬಿರಾದಾರ, ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಕುಮಾರಿ ಪಲ್ಲವಿ ಪಾರಗೊಂಡ, ಕುಮಾರ ದಾವಲಮಲಿಕ ಪಟೇಲ್ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಕಲ್ಪವೃಕ್ಷ ಆಡಳಿತ…

Read More

ವಿಜಯಪುರ: ಶ್ರೀ ರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಜ.೨೨ ಸೋಮವಾರ ಶ್ರೀ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಮಧ್ಯಾಹ್ನ ೧೨ ಗಂಟೆಯಿಂದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಮಹಾ ಆರತಿ, ಸಾಯಂಕಾಲ ೫:೦೦ ಗೆ ಶ್ರೀ ರಾಮನ ಸ್ತುತಿ ಭಕ್ತಿಗೀತೆಗಳು, ಸಂಗೀತ ಹಾಗೂ ಭಜನೆ ಕಾರ್ಯಕ್ರಮ, ನಂತರ ಸಹಸ್ರಾರು ದೀಪಾಲಂಕಾರದೊಂದಿಗೆ ವಿಶೇಷವಾಗಿ ರಂಗೋಲಿ ಚಿತ್ರದಲ್ಲಿ ಶ್ರೀ ರಾಮ ಮಂದಿರ ಹಾಗೂ ಶ್ರೀ ರಾಮನ ಭಾವಚಿತ್ರ ಮೂಡಿ ಬರಲಿದೆ,ಸದ್ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಗಳಿಗೆ ಶೋಭೆ ತರಬೇಕೆಂದು ಶಂಕರಲಿಂಗ ದೇವಸ್ಥಾನ ಕಮಿಟಿ ಕೋರಿದೆ.

Read More

ವಿಜಯಪುರ: ನಗರದಿಂದ ತಿರುಪತಿಗೆ ನೇರ ರೈಲುಸಂಚಾರ ಆರಂಭಿಸುವಂತೆ ಸಂಸದರಾದ ರಮೇಶ ಜಿಗಜಿಣಗಿ ಅವರು ಹುಬ್ಬಳ್ಳಿ ರೇಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದಾರೆ.ವಿಜಯಪುರದಿಂದ ತಿರುಪತಿಯ ಮಧ್ಯ ಸಂಚರಿಸುವ ರೈಲನ್ನು ಆರಂಭಿಸುವಂತೆ ಸಾರ್ವಜನಿಕರ ಬಹದಿನಗಳ ಬೇಡಿಕೆಯಾಗಿದ್ದು, ಈ ಕುರಿತು ಕೇಂದ್ರ ರೇಲ್ವೆ ಸಚಿವರೊಂದಿಗೂ ಚರ್ಚಿಸಲಾಗಿದೆ. ಜನರಿಗೆ ನೇರವಾದ ಮಾರ್ಗವಿಲ್ಲದೇ ಇರುವುದರಿಂದ ಪ್ರಯಾಣಕ್ಕೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಶೀಘ್ರವಾಗಿ ವಿಜಯಪುರ – ತಿರುಪತಿ ಮಧ್ಯ ರೈಲನ್ನು ಪ್ರಾರಂಭಿಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಅವರು ಪತ್ರ ಬರೆದು ಕೋರಿದ್ದಾರೆ.

Read More

ಸಿಂದಗಿ: ಮಕ್ಕಳ ತೂಕ ನಿರ್ವಹಣೆ, ಆರೋಗ್ಯ, ಶುಚಿತ್ವ, ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ವೈಯಕ್ತಿಕ ಸ್ವಚ್ಛತೆ, ಅಪೌಷ್ಟಿಕತೆ ಹೋಗಲಾಡಿಸುವ ಬಗ್ಗೆ ಎಚ್ಚರ ವಹಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಹೇಳಿದರು.ತಾಲೂಕಿನ ಗಣಿಹಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಮೋಬೈಲ್ ಗೀಳಿನಿಂದಾಗುವ ದುಷ್ಪರಿಣಾಮ ಹಾಗೂ ಅಪೌಷ್ಟಿಕ ಮಕ್ಕಳಿಗೆ ಎನ್.ಆರ್.ಸಿಯಲ್ಲಿ ದಾಖಲು ಮಾಡುವುದರ ಕುರಿತು ತಿಳಿಸಲಾಯಿತು. ಹಾಗೂ ಇಲಾಖೆಯ ವಿವಿಧ ಯೋಜನೆಗಳಾದ ಮಾತೃವಂದನಾ ಸುಕನ್ಯಾ ಸಮೃದ್ಧಿ, ಗೃಹಲಕ್ಷ್ಮಿ ಯೋಜನೆಗಳ ಬಗ್ಗೆ ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಂದ ಆನೆಕಾಲು ನಿಯಂತ್ರಣ ಮಾತ್ರೆಗಳನ್ನು ನುಂಗಿಸಲಾಯಿತು.ಈ ವೇಳೆ ವಲಯ ಮೇಲ್ವಿಚಾರಕಿ ಸುನಿತಾ ಕಪ್ಪೆನವರ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಆರೋಗ್ಯ ಇಲಾಖೆ ಸಿಬ್ಬಂದಿ ಸಿಎಚ್ಒ ಬಸವರಾಜ ಶಹಾಪುರ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಹಾಗೂ ಮಕ್ಕಳು ಇದ್ದರು.

Read More

ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ದೇವಾಸ್ಥಾನ ಸ್ವಚ್ಛತೆ ಚಡಚಣ: ಇದೇ ೨೨ರಂದು ಅಯೋಧ್ಯಯ ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಎಂಇಎಸ್ ಶಿಕ್ಷಣ ಸಂಸ್ಥೆಯ ಪ್ರೌಢ ಹಾಗೂ ಐಟಿಐ ವಿದ್ಯಾರ್ಥಿಗಳ ವತಿಯಿಂದ ಪಟ್ಟಣದ ಹಲವಾರು ದೇವಾಲಯಗಳ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.ಈ ವೇಳೆಯಲ್ಲಿ ಮಾತನಾಡಿದ ಶಿಕ್ಷಕ ಮಲ್ಲು ಮಾನೆಯವರು, ಪರಿಸರದ ಸ್ವಚ್ಛತೆ ಅರಿವು ನಮಗೆ ಇಂದು ಅಗತ್ಯವಾಗಿದೆ. ಅದರಲ್ಲೂ ಇಂಥ ಸ್ಥಳಗಳು ಸ್ವಚ್ಛತೆಯಿಂದ ಕೂಡಿರಬೇಕು. ನಮ್ಮ ಪ್ರಾಚೀನ ಪರಂಪರೆಯ ದೇಗುಲಗಳು, ಶಿಲ್ಪಗಳನ್ನು ಹಾಳಾಗದಂತೆ ರಕ್ಷಿಸುವ ಜವಾಬ್ದಾರಿ ಕೂಡ ವಿದ್ಯಾರ್ಥಿಗಳು ಮಾಡಬೇಕು. ಹಿಂದಿನ ಪರಂಪರೆ ಮುಂದಿನ ಪೀಳಿಗೆಯವರೆಗೆ ಮುಟ್ಟಿಸುವ ಹೊಣೆ ನಿಮ್ಮದಾಗಬೇಕು ಎಂದರು.ಈ ಸಂದರ್ಭದಲ್ಲಿ ಹನುಮಾನ, ಲಕ್ಷ್ಮೀ, ನವಗ್ರಹ ಹಾಗೂ ಸಂಗಮೇಶ್ವರ ದೇವಾಲಯಗಳು ಸೇರಿದಂತೆ ಪ್ರಮುಖ ದೇವಾಲಯಗಳ ಆವರಣಗಳನ್ನು ಸ್ವಚ್ಛತೆ ಮಾಡಲಾಯಿತು.ಈ ವೇಳೆ ಅನಿಲ ಬಿಳೂರ, ಸಿ.ಕೆ.ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಬಸವನಬಾಗೇವಾಡಿ: ಜೀವನದಲ್ಲಿ ಯಾರು ಕೆಲಸದಲ್ಲಿ ಯಶಸ್ಸು ಪಡೆಯಲು ಹೆಚ್ಚು ಪ್ರಯತ್ನ ಪಡುತ್ತಾರೋ ಅವರು ಖಂಡಿತ ಅವರು ಕೈಗೊಳ್ಳುವ ಕೆಲಸದಲ್ಲಿ ಖಂಡಿತ ಯಶಸ್ಸು ಪಡೆಯುತ್ತಾರೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಫೆ 2 ರಿಂದ 4 ರವರೆಗೆ ವಿವಿಧ ಕಾರ್ಯಕ್ರಮದಂಗವಾಗಿ ಹಮ್ಮಿಕೊಂಡಿರುವ ಕಲಬುರಗಿಯ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಮಠದ ಸದ್ಭಕ್ತರ ಸಹಕಾರದಿಂದ ಶ್ರೀಮಠದ ಅಭಿವೃದ್ಧಿಯಾಗುತ್ತಿದೆ. ಶ್ರೀಮಠದಿಂದ ಮುಂಬರುವ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಆಲೋಚನೆ ನಮ್ಮ ಮುಂದಿದೆ. ಫೆ.2 ರಿಂದ 4 ರವರೆಗೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮದ ಯಶಸ್ವಿಗೊಳಿಸಲು ಎಲ್ಲರೂ ತನು-ಮನ-ಧನದಿಂದ ಸಹಕಾರ ಮಾಡಬೇಕೆಂದರು.ಕಲಬುರಗಿಯ ಶರಣಬಸವೇಶ್ವರ ಪುರಾಣವನ್ನು ಮಸೂತಿಯ ಡಾ.ಶಿವಲಿಂಗಯ್ಯ ಶರಣರು ನಡೆಸಿಕೊಡುತ್ತಿದ್ದಾರೆ. ಸಂಗೀತ ಸೇವೆಯನ್ನು ಪರಶುರಾಮ ಚಟ್ನಳ್ಳಿ, ಬಸನಗೌಡ ಬಿರಾದಾರ ಸಲ್ಲಿಸುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಶಿವನಗೌಡ ಗುಜಗೊಂಡ ಅವರು ತಮ್ಮ ಪರಿವಾರದಿಂದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರಿಗೆ ನಾಣ್ಯಗಳಿಂದ ತುಲಾಭಾರ…

Read More

ಬಸವನಬಾಗೇವಾಡಿ: ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಸರ್ಕಾರ ಜಾರಿಗೆ ತರುವ ಎಲ್ಲ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಮೂಲಕ ಜನರಿಗೆ ತಲುಪಿಸುವ ಕಡೆಗೆ ಗಮನ ಹರಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ-೧ ಎಸ್ಎಲ್ಎಓ, ತಾಲೂಕು ಉಸ್ತುವಾರಿ ಅಧಿಕಾರಿ ಬಲರಾಮ ಚೌವ್ಹಾಣ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜರುಗಿದ ತಾಲೂಕಿನ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಅನುದಾನ ಸರಿಯಾಗಿ ಬಳಕೆ ಮಾಡಬೇಕು. ಯಾವುದೇ ಸಮಸ್ಯೆ ಬಾರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾವುದಾದರೂ ಸಮಸ್ಯೆಗಳು ಬಂದರೆ ನಮ್ಮ ಗಮನಕ್ಕೆ ತಂದರೆ ತಾವು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವುವದಾಗಿ ಹೇಳಿದರು.ಮುಂಬರುವ ಬೇಸಿಗೆ ಕಾಲದಲ್ಲಿ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರು ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ರೇಷ್ಮೆ ಇಲಾಖೆಯಿಂದ ರೈತ ಬಾಂಧವರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ತಲುಪಿಸಬೇಕು. ಅರಣ್ಯ ಇಲಾಖೆಯಿಂದ ಕೆರೆ, ಸ್ಮಶಾನ, ಗುಡ್ಡ-ಗಾಡು ಪ್ರದೇಶ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ…

Read More

ವಿಜಯಪುರ: ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ೨೦೨೩-೨೪ನೇ ಸಾಲಿನಲ್ಲಿ ಲಿಂಬೆ ಬೆಳೆಗಾರರಿಗೆ ಯಂತ್ರಗಳನ್ನು ಖರೀದಿಸಲು ಯಾಂತ್ರಿಕರಣ ಯೋಜನೆಯ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ಕಚೇರಿಯ ಸಹಾಯಕ ನಿರ್ದೇಶಕರಾದ ಆನಂದ ಬಿರಾದಾರ (ಮೊ:೯೬೧೧೦೭೧೦೭೧) ಇವರನ್ನು ಸಂಪರ್ಕಿಸಬಹುದು ಎಂದು ಇಂಡಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರ ಜಿಲ್ಲೆಯಲ್ಲೆಡೆ ಸಂಚಾರ ವಿಜಯಪುರ: ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ ಜಿಲ್ಲೆಯಲ್ಲಿ ಜನವರಿ ೨೬ ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿರುವ ಸ್ತಬ್ಧಚಿತ್ರ ವಾಹನಕ್ಕೆ ಮಾರ್ಗನಕ್ಷೆ (ರೂಟ್ ಮ್ಯಾಪ್) ಸಿದ್ಧಪಡಿಸಲಾಗಿದ್ದು, ಮಾರ್ಗನಕ್ಷೆಯಂತೆ ಸ್ತಬ್ಧಚಿತ್ರ ವಾಹನ ಸಂಚರಿಸಲು ಎಲ್ಲ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾದ ಎರಡೂ ಸ್ತಬ್ಧಚಿತ್ರಗಳು ಜಿಲ್ಲೆಯಾದ್ಯಂತ ೨೭ ದಿನಗಳ ಕಾಲ ಸಂಚರಿಸಲಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳು ಒಳ್ಳಗೊಳ್ಳಬೇಕು. ತಾಲೂಕಾ ಕೇಂದ್ರದಲ್ಲಿ ಸ್ತಬ್ಧಚಿತ್ರ ಆಗಮಿಸುವ ಸಂದರ್ಭದಲ್ಲಿ ಎಲ್ಲ ತಹಶೀಲ್ದಾರರು, ನೋಡಲ್ ಅಧಿಕಾರಿಗಳು ಸ್ಥಳದಲ್ಲಿದ್ದು, ಭವ್ಯವಾಗಿ ಸ್ವಾಗತಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.ವಿಜಯಪುರದಿಂದ ಹಾಗೂ ಇನ್ನೊಂದು ಇಂಡಿಯಿಂದ ಸ್ತಬ್ಧಚಿತ್ರ ಸಂಚರಿಸಲಿದೆ. ಜಿಲ್ಲೆಯ ೧೩…

Read More