ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ದೇವಾಸ್ಥಾನ ಸ್ವಚ್ಛತೆ
ಚಡಚಣ: ಇದೇ ೨೨ರಂದು ಅಯೋಧ್ಯಯ ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಎಂಇಎಸ್ ಶಿಕ್ಷಣ ಸಂಸ್ಥೆಯ ಪ್ರೌಢ ಹಾಗೂ ಐಟಿಐ ವಿದ್ಯಾರ್ಥಿಗಳ ವತಿಯಿಂದ ಪಟ್ಟಣದ ಹಲವಾರು ದೇವಾಲಯಗಳ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಮಾತನಾಡಿದ ಶಿಕ್ಷಕ ಮಲ್ಲು ಮಾನೆಯವರು, ಪರಿಸರದ ಸ್ವಚ್ಛತೆ ಅರಿವು ನಮಗೆ ಇಂದು ಅಗತ್ಯವಾಗಿದೆ. ಅದರಲ್ಲೂ ಇಂಥ ಸ್ಥಳಗಳು ಸ್ವಚ್ಛತೆಯಿಂದ ಕೂಡಿರಬೇಕು. ನಮ್ಮ ಪ್ರಾಚೀನ ಪರಂಪರೆಯ ದೇಗುಲಗಳು, ಶಿಲ್ಪಗಳನ್ನು ಹಾಳಾಗದಂತೆ ರಕ್ಷಿಸುವ ಜವಾಬ್ದಾರಿ ಕೂಡ ವಿದ್ಯಾರ್ಥಿಗಳು ಮಾಡಬೇಕು. ಹಿಂದಿನ ಪರಂಪರೆ ಮುಂದಿನ ಪೀಳಿಗೆಯವರೆಗೆ ಮುಟ್ಟಿಸುವ ಹೊಣೆ ನಿಮ್ಮದಾಗಬೇಕು ಎಂದರು.
ಈ ಸಂದರ್ಭದಲ್ಲಿ ಹನುಮಾನ, ಲಕ್ಷ್ಮೀ, ನವಗ್ರಹ ಹಾಗೂ ಸಂಗಮೇಶ್ವರ ದೇವಾಲಯಗಳು ಸೇರಿದಂತೆ ಪ್ರಮುಖ ದೇವಾಲಯಗಳ ಆವರಣಗಳನ್ನು ಸ್ವಚ್ಛತೆ ಮಾಡಲಾಯಿತು.
ಈ ವೇಳೆ ಅನಿಲ ಬಿಳೂರ, ಸಿ.ಕೆ.ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

