ಸಿಂದಗಿ: ಮಕ್ಕಳ ತೂಕ ನಿರ್ವಹಣೆ, ಆರೋಗ್ಯ, ಶುಚಿತ್ವ, ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ವೈಯಕ್ತಿಕ ಸ್ವಚ್ಛತೆ, ಅಪೌಷ್ಟಿಕತೆ ಹೋಗಲಾಡಿಸುವ ಬಗ್ಗೆ ಎಚ್ಚರ ವಹಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಹೇಳಿದರು.
ತಾಲೂಕಿನ ಗಣಿಹಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಮೋಬೈಲ್ ಗೀಳಿನಿಂದಾಗುವ ದುಷ್ಪರಿಣಾಮ ಹಾಗೂ ಅಪೌಷ್ಟಿಕ ಮಕ್ಕಳಿಗೆ ಎನ್.ಆರ್.ಸಿಯಲ್ಲಿ ದಾಖಲು ಮಾಡುವುದರ ಕುರಿತು ತಿಳಿಸಲಾಯಿತು. ಹಾಗೂ ಇಲಾಖೆಯ ವಿವಿಧ ಯೋಜನೆಗಳಾದ ಮಾತೃವಂದನಾ ಸುಕನ್ಯಾ ಸಮೃದ್ಧಿ, ಗೃಹಲಕ್ಷ್ಮಿ ಯೋಜನೆಗಳ ಬಗ್ಗೆ ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಂದ ಆನೆಕಾಲು ನಿಯಂತ್ರಣ ಮಾತ್ರೆಗಳನ್ನು ನುಂಗಿಸಲಾಯಿತು.
ಈ ವೇಳೆ ವಲಯ ಮೇಲ್ವಿಚಾರಕಿ ಸುನಿತಾ ಕಪ್ಪೆನವರ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಆರೋಗ್ಯ ಇಲಾಖೆ ಸಿಬ್ಬಂದಿ ಸಿಎಚ್ಒ ಬಸವರಾಜ ಶಹಾಪುರ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಹಾಗೂ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

