ಮೋರಟಗಿ: ಗ್ರಾಮದ ಪ್ರತಿಷ್ಠಿತ ಕಲ್ಪವೃಕ್ಷ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ದಿನಾಂಕ ೨೧ ರಂದು ರವಿವಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸದ್ಗುರು ಶಂಕರಾನಂದ ಸ್ವಾಮಿಗಳು ಆರೂಢ ಮಠ ಅಸಂಗಿಹಾಳ ದಿವ್ಯ ಸಾನಿಧ್ಯ ವಹಿಸಲಿಸಲಿದ್ದು ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಅಧ್ಯಕ್ಷ ಸ್ಥಾನ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಇಸ್ರೋ ಹಿರಿಯ ವಿಜ್ಞಾನಿ ಸಂಜೀವ ಗೌರ ಆಗಮಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಡಾ, ಪಿ. ಕೆ. ಹೊಸಮನಿ ಪಿಯು ಡಿಡಿಪಿಐ ವಿಜಯಪುರ, ಬಿ. ಟಿ. ಗೊಂಗಡಿ, ಸಿ. ಎಂ. ಬಂಡಗಾರ, ಎಸ್. ಕೆ. ಬಿರಾದಾರ, ಪಾಲಕರ ಪ್ರತಿನಿಧಿಯಾಗಿ ಎಸ್. ಎಸ್. ಪೂಜಾರಿ, ಆಡಳಿತ ಅಧಿಕಾರಿ ಎಸ್. ಎಚ್. ದುಳಬಾ, ಸಮನ್ವಯ ಅಧಿಕಾರಿ ಎಸ್. ವ್ಹಿ. ಬಿರಾದಾರ, ಪ್ರಾಚಾರ್ಯ ಡಾ, ಎ. ಬಿ. ಸಿಂದಗಿ, ಎಲ್. ಎಸ್. ಸುಲ್ತಾನಪುರ, ಪ್ರಾಚಾರ್ಯ ಎಸ್. ಬಿ. ಬಿರಾದಾರ, ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಕುಮಾರಿ ಪಲ್ಲವಿ ಪಾರಗೊಂಡ, ಕುಮಾರ ದಾವಲಮಲಿಕ ಪಟೇಲ್ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಕಲ್ಪವೃಕ್ಷ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
