ಬಸವನಬಾಗೇವಾಡಿ: ಜೀವನದಲ್ಲಿ ಯಾರು ಕೆಲಸದಲ್ಲಿ ಯಶಸ್ಸು ಪಡೆಯಲು ಹೆಚ್ಚು ಪ್ರಯತ್ನ ಪಡುತ್ತಾರೋ ಅವರು ಖಂಡಿತ ಅವರು ಕೈಗೊಳ್ಳುವ ಕೆಲಸದಲ್ಲಿ ಖಂಡಿತ ಯಶಸ್ಸು ಪಡೆಯುತ್ತಾರೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಫೆ 2 ರಿಂದ 4 ರವರೆಗೆ ವಿವಿಧ ಕಾರ್ಯಕ್ರಮದಂಗವಾಗಿ ಹಮ್ಮಿಕೊಂಡಿರುವ ಕಲಬುರಗಿಯ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಮಠದ ಸದ್ಭಕ್ತರ ಸಹಕಾರದಿಂದ ಶ್ರೀಮಠದ ಅಭಿವೃದ್ಧಿಯಾಗುತ್ತಿದೆ. ಶ್ರೀಮಠದಿಂದ ಮುಂಬರುವ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಆಲೋಚನೆ ನಮ್ಮ ಮುಂದಿದೆ. ಫೆ.2 ರಿಂದ 4 ರವರೆಗೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮದ ಯಶಸ್ವಿಗೊಳಿಸಲು ಎಲ್ಲರೂ ತನು-ಮನ-ಧನದಿಂದ ಸಹಕಾರ ಮಾಡಬೇಕೆಂದರು.
ಕಲಬುರಗಿಯ ಶರಣಬಸವೇಶ್ವರ ಪುರಾಣವನ್ನು ಮಸೂತಿಯ ಡಾ.ಶಿವಲಿಂಗಯ್ಯ ಶರಣರು ನಡೆಸಿಕೊಡುತ್ತಿದ್ದಾರೆ. ಸಂಗೀತ ಸೇವೆಯನ್ನು ಪರಶುರಾಮ ಚಟ್ನಳ್ಳಿ, ಬಸನಗೌಡ ಬಿರಾದಾರ ಸಲ್ಲಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಶಿವನಗೌಡ ಗುಜಗೊಂಡ ಅವರು ತಮ್ಮ ಪರಿವಾರದಿಂದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರಿಗೆ ನಾಣ್ಯಗಳಿಂದ ತುಲಾಭಾರ ಮಾಡಿದರು. ಎಸ್.ಐ.ಗೆಣ್ಣೂರ ಸ್ವಾಗತಿಸಿ, ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

