ವಿಜಯಪುರ: ಶ್ರೀ ರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಜ.೨೨ ಸೋಮವಾರ ಶ್ರೀ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ ೧೨ ಗಂಟೆಯಿಂದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಮಹಾ ಆರತಿ, ಸಾಯಂಕಾಲ ೫:೦೦ ಗೆ ಶ್ರೀ ರಾಮನ ಸ್ತುತಿ ಭಕ್ತಿಗೀತೆಗಳು, ಸಂಗೀತ ಹಾಗೂ ಭಜನೆ ಕಾರ್ಯಕ್ರಮ, ನಂತರ ಸಹಸ್ರಾರು ದೀಪಾಲಂಕಾರದೊಂದಿಗೆ ವಿಶೇಷವಾಗಿ ರಂಗೋಲಿ ಚಿತ್ರದಲ್ಲಿ ಶ್ರೀ ರಾಮ ಮಂದಿರ ಹಾಗೂ ಶ್ರೀ ರಾಮನ ಭಾವಚಿತ್ರ ಮೂಡಿ ಬರಲಿದೆ,
ಸದ್ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಗಳಿಗೆ ಶೋಭೆ ತರಬೇಕೆಂದು ಶಂಕರಲಿಂಗ ದೇವಸ್ಥಾನ ಕಮಿಟಿ ಕೋರಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
