Author: editor.udayarashmi@gmail.com

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಠನೆ ಇಂಡಿ: ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಯೇ ಮುಂದಿನ ೨೦೨೮ರ ವಿಧಾನ ಸಭೆಯ ಚುನಾವಣೆ ಎದುರಿಸುತ್ತೇನೆ. ಜಿಲ್ಲೆ ಮಾಡದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ನಾನು ಯಾವತ್ತಿಗೂ ಬಧ್ಧತೆಯ ರಾಜಕಾರಣ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪುನರುಚ್ಚರಿಸಿದ್ದಾರೆ.ಶುಕ್ರವಾರ ಇಂಡಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಇಂಡಿ ತಾಲ್ಲೂಕಿನ ಅಭಿವೃದ್ಧಿಗಾಗಿ ಚಿಮ್ಮಲಗಿ, ಮುಳವಾಡ, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಭಾಗದ ರೈತರ ಸಂಕಷ್ಟಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ರೇವಣಿಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗಿದೆ. ಕೋಲಾರದಿಂದ ಚಡಚಣ ತಾಲ್ಲೂಕಿನ ಸಾವಳಸಂಗ ಗ್ರಾಮದ ಗುಡ್ಡದವರೆಗೆ ನೀರು ತಂದು ಇಂಡಿ ತಾಲ್ಲೂಕಿನ ೨೮ ಕೆರೆಗಳು ಮತ್ತು ಚಡಚಣ ತಾಲ್ಲೂಕಿನ ೮ ಕೆರೆಗಳನ್ನು ತುಂಬಿಸುವ ಕೆಲಸ ಕೈಗೆತ್ತಿಕೊಂಡಿದೆ ಎಂದರು.ಇಂಡಿ, ಚಡಚಣ, ಸಿಂದಗಿ ತಾಲ್ಲೂಕುಗಳ ದಂಡೆಗೆ ಹರಿದಿರುವ ಭೀಮಾ ನದಿಯಿಂದ ೧೫ ಟಿಎಂಸಿ ನೀರಿನ ಬಳಕೆಯಾಗಬೇಕಿದೆ. ಈ ಬಗ್ಗೆ ಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವದು.…

Read More

ಗಣರಾಜ್ಯೋತ್ಸವದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಇಂಡಿ: ಇಡೀ ಪ್ರಪಂಚದಲ್ಲೇ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ, ಸರ್ವಧರ್ಮ ಸಹಿಷ್ಣುತೆ ಗಣತಂತ್ರ ವ್ಯವಸ್ಥೆಯ ಮೂಲ ಆಶಯ. ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಎಂದು ಶಾಸಕ, ವಿಧಾನಸಭೆ ಅಂದಾಜು ಸಮೀತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ಶುಕ್ರವಾರ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ೭೫ ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇಶ ಹಾಗೂ ವ್ಯಕ್ತಿಯ ಆತ್ಮ ಗೌರವ ಪ್ರತೀಕವಾಗಿರುವ ಸಂವಿಧಾನ ತೋರುವ ಬೆಳಕಿನಲ್ಲಿ ಜವಾಬ್ದಾರಿಯ ಹೆಜ್ಜೆ ಹಾಕೋಣ ಎಂದ ಅವರು, ಇಂಡಿ ತಾಲೂಕು ಸತತ ಬರಗಾಲಪೀಡಿತ ಪ್ರದೇಶವಾಗಿದೆ. ಈ ಭಾಗದ ನೀರಾವರಿ ಕಾರ್ಯಗಳು ಸಮರೋಪಾದಿಯಲ್ಲಿ ಆಗಬೇಕಾಗಿದೆ. ಅದಕ್ಕಾಗಿ ಪ್ರಥಮ ಪ್ರಾಮುಖ್ಯತೆ ನೀಡ ಬೇಕಾಗಿದೆ ಎಂದ ಅವರು ಈ ಶತಮಾನ ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ನಡೆ-ನುಡಿ ಪಾಲಸಿ ನಮ್ಮ ಯುವಕರು ಅವರ ಹಾಕಿ ಕೊಟ್ಟ ಮಾರ್ಗದಲ್ಲಿ…

Read More

ವಿಜಯಪುರ: ವಿಜಯಪುರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನ ಜಾರಿಗೆ ಬಂದ ಪವಿತ್ರ ದಿನ ಗಣರಾಜ್ಯೋತ್ಸವ, ಡಾ.ಬಿ.ಆರ್. ಅಂಬೇಡ್ಕರ ಅವರು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ, ಹಕ್ಕು ಗಳು, ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು ಹೀಗೆ ಜಗತ್ತಿನಲ್ಲೇ ಮಾದರಿ ಸಂವಿಧಾನವಾಗಿದೆ ಎಂದರು.ಸಂಸದ ರಮೇಶ ಜಿಗಜಿಣಗಿ, ಬೆಳಗಾವಿ ವಿಭಾಗ ಪ್ರಭಾರಿಗಳಾದ ಚಂದ್ರಶೇಖರ್ ಕವಟಗಿ, ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ್, ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ವಿಜುಗೌಡ ಪಾಟೀಲ್, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಮಲ್ಲನಗೌಡ ಪಾಟೀಲ, ಬಸವರಾಜ ಬಿರಾದಾರ ಹಾಗೂ ಪಕ್ಷದ ಜಿಲ್ಲಾ ಪದಾಧಿಕಾರಿಗಳು ನಗರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ದೇವರಹಿಪ್ಪರಗಿ: ಭಾರತದ ಸಂವಿಧಾನ ಎಲ್ಲ ಜಾತಿ, ಮತ, ಪಂಥಗಳ ಧರ್ಮಗ್ರಂಥವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ೭೫ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದಲ್ಲಿಯೇ ವಿಶೇಷವಾದ ನಮ್ಮ ಸಂವಿಧಾನದ ಮಹತ್ವ, ಧ್ಯೆಯೋದ್ಧೇಶಗಳನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ ಎಂದರು.ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ವಿಶೇಷ ಉಪನ್ಯಾಸಕರಾಗಿ ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಮೇಶ ಮಡಿಯಾಳಕರ ಉಪನ್ಯಾಸ ನೀಡಿದರು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸೈ ಬಸವರಾಜ ತಿಪರಡ್ಡಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಮ್.ವಾಲಿಕಾರ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ, ಕಾಶೀನಾಥ ಬಜಂತ್ರಿ, ಬಶೀರ್‌ಅಹ್ಮದ್ ಬೇಪಾರಿ, ಶಾಂತಯ್ಯ ಜಡಿಮಠ, ಸುಮಂಗಲಾ ಸೇಬೆನವರ, ಕಾಶೀನಾಥ ಜಮಾದಾರ, ನಾಮನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಹುಸೇನ್…

Read More

ಬಸವನಬಾಗೇವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿರುವ ಸಂವಿಧಾನದಿಂದಾಗಿ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಜೀವನ ಸಾಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ, ಪಪೂ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ, ಪ್ರಾಧ್ಯಾಪಕರಾದ ಡಾ.ವೈ.ಬಿ.ನಾಯಕ, ಪ್ರೊ.ಡಿ.ಎಸ್.ಲಗಳಿ, ಪ್ರೊ.ದಿಲೀಪಕುಮಾರ, ಡಾ.ಎಸ್.ಬಿ.ಜನಗೊಂಡ, ವಿ.ಎನ್.ರಜಪೂತ, ಎಸ್.ಜೆ.ಸೂರ್ಯವಂಶಿ, ಪಿ.ಎಸ್.ಹೊರಕೇರಿ, ಜೆ.ಆರ್.ಡಾವಣಗೇರಿ, ಎ.ಬಿ.ಅಪ್ಪೋಜಿ, ಎಂ.ಆರ್.ಮಮದಾಪೂರ, ಪಿ.ಎಸ್.ನಾಟೀಕಾರ, ಭರತ, ಬಿ.ಆರ್.ಮ್ಯಾಗೇರಿ, ಎಸ್.ಎಸ್.ನಾಯ್ಕೋಡಿ, ಟಿ.ವೈ.ಮಣ್ಣೂರ, ಬಿ.ಬಿ.ಕಳ್ಳಿಗುಡ್ಡ, ಎಸ್.ಎಸ್.ಮನಗೂಳಿ ಇತರರು ಇದ್ದರು. ಪ್ರೊ.ಎಂ.ಕೆ.ಯಾದವ ನಿರೂಪಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿ ಬಿಎಲ್ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹತ್ತನೆ ತರಗತಿ ವಿದ್ಯಾರ್ಥಿಗಳ ಟ್ಯಾಲೆಂಟ್ ಪರೀಕ್ಷೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಪರೀಕ್ಷೆಯಲ್ಲಿ ೩೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More

ಬಸವನಬಾಗೇವಾಡಿ: ದೇಶದಲ್ಲಿ ಸಂವಿಧಾನ ಜಾರಿಯಾದ ಜ.೨೬,೧೯೫೦ ಇದು ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಸುದಿನವಾಗಿದೆ ಎಂದು ಮನಗೂಳಿ ಹೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಚನ್ನಗೌಡ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಹೆಸ್ಕಾಂ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬಗಳು ದೇಶ ಬಾಂಧವರಲ್ಲಿ ದೇಶ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜೊತೆಗೆ ಸಂಭ್ರಮ ತುಂಬುವಂತೆ ಮಾಡುತ್ತವೆ. ವಿವಿಧೆತೆಯಲ್ಲಿ ಏಕತೆಯನ್ನು ಇಡೀ ಜಗತ್ತಿಗೆ ಸಾರಿದ ದೇಶ ನಮ್ಮದು. ಇಂತಹ ಹೆಮ್ಮೆಯ ದೇಶದಲ್ಲಿ ನಾವೆಲ್ಲರೂ ಒಂದಾಗಿ ದೇಶದ ಪ್ರಗತಿಗೆ ಮುಂದಾಗಬೇಕೆಂದರು.ಧ್ವಜಾರೋಹಣ ನೆರವೇರಿಸಿದ ಶಾಖೆಯ ಸಹಾಯಕ ಅಭಿಯಂತರ ಪರಶುರಾಮ ಉಕ್ಕಲಿ, ಸಿಬ್ಬಂದಿಗಳಾದ ಸುರೇಶ ಕಲ್ಲೂರ, ಶ್ರೀಮಂತ ನಾಗರಾಳ ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಮನಗೂಳಿಯ ೩೩ ಕೆವ್ಹಿ ಸ್ಟೇಶನ್ ಜೆಇ ಶರಣು ಗೊಳಸಂಗಿ, ಸಿಬ್ಬಂದಿಗಳಾದ ರಾಜಶೇಖರ ಹೊಸಮನಿ, ಪವಾಡೆಪ್ಪ ಗಾಣಿಗೇರ, ಪೂಜಾ ಮನಗೂಳಿ, ಶಿವಾನಂದ ಸಜ್ಜನ, ರಮೇಶ ಹಾವಣ್ಣನವರ, ಅಶೋಕ ಬಳಗಾನೂರ, ಅಶೋಕ ತೆಲಗಿ, ಶ್ರೀಧರ ಲಮಾಣಿ, ಪ್ರಶಾಂತ…

Read More

ಬಸವನಬಾಗೇವಾಡಿ: ದೇಶದ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ಪ್ರತಿಪಾದಿಸದೇ ಸಂವಿಧಾನ ಹೇಳಿರುವ ಕರ್ತವ್ಯಗಳನ್ನು ಎಲ್ಲ ನಾಗರಿಕರು ಪಾಲಿಸಿದರೆ ದೇಶವು ಪ್ರಗತಿಯತ್ತ ಸಾಗುತ್ತದೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಾಡಳಿತವು ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿಯೇ ಅತ್ಯಂತ ಬೃಹತ್, ಲಿಖಿತ ಸಂವಿಧಾನ ನಮ್ಮದಾಗಿದೆ. ನಮ್ಮ ಸಂವಿಧಾನವು ರಾಜ್ಯನಿರ್ದೇಶಕ ತತ್ವಗಳನ್ನು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಂಸದೀಯ ವ್ಯವಸ್ಥೆ, ಜಾತ್ಯಾತೀತ ನಿಲುವು, ಏಕ ಪೌರತ್ವ, ವಯಸ್ಕ ಮತದಾನ ವ್ಯವಸ್ಥೆ ಸೇರಿದಂತೆ ಅನೇಕ ಮೌಲ್ಯಯುತ ಅಂಶಗಳನ್ನು ಹೊಂದಿದೆ. ಇಂತಹ ಸಂವಿಧಾನ ಪಡೆದ ನಾವೆಲ್ಲರೂ ಧನ್ಯರು ಎಂದರು.ಮೂಲ ಸಂವಿಧಾನದಲ್ಲಿ ೩೯೫ ವಿಧಿಗಳು, ೨೨ ಭಾಗಗಳು, ೮ ಅನುಸೂಚಿಗಳಿದ್ದು. ಹಲವಾರು ತಿದ್ದುಪಡಿ ಕಂಡು ಪ್ರಸ್ತುತ ನಮ್ಮ ಸಂವಿಧಾನದಲ್ಲಿ ೪೭೦ ವಿಧಿಗಳು,೨೫ ಭಾಗಗಳು, ೧೨ ಅನುಸೂಚಿಗಳನ್ನು ಒಳಗೊಂಡಿದೆ. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯನ್ನು ನಾವು ಓದಿದರೆ ಇಡೀ ಸಂವಿಧಾನದ ತಿರುಳು ಅರ್ಥವಾಗುತ್ತದೆ.…

Read More

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಾರ್ವಜನಿಕ ಜನ ಸಂಪರ್ಕ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಅವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಜಿ ಅಧ್ಯಕ್ಷರಾದ ಎಂ.ಎಸ್.ರುದ್ರಗೌಡ್ರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಜವಾಹಾರ ಗೋಸಾವಿ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜುನ ಗಡಗಿ, ನಗರ ಆಶ್ರಯ ಸಮಿತಿ ನಾಮನಿರ್ದೇಶನ ಸದಸ್ಯರಾದ ಪಾರೀಸ್ ಶಿರಹಟ್ಟಿ, ಬಸವರಾಜ ಕಾಂಬಳೆ, ಭೂ ನ್ಯಾಯ ಮಂಡಳಿ ಸಮಿತಿ ನಾಮನಿರ್ದೇಶನ ಸದಸ್ಯರಾದಶರಣು ಕಾಖಂಡಕಿ, ಮುಖಂಡರಾದ ಬಾಬು ಶಿರಶ್ಯಾಡ, ವಿಕ್ರಮ ಗಾಯಕವಾಡ, ಬಸವರಾಜ ಕೋರಿ, ರಾಜಶೇಖರ ಭಜಂತ್ರಿ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಬಸವರಾಜ ಗೊಳಸಂಗಿ ಸೇರಿದಂತೆ ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.

Read More

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಹೊಸದಾಗಿ ವಿಜಯಪುರ-ಬೆಂಗಳೂರು ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸಂಚಾರ ಜ.೨೬ರಿಂದ ಆರಂಭಿಸಲಾಗಿದ್ದು, ಸಾರ್ವನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.ಜ.೨೬ರ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೊಸದಾಗಿ ಆರಂಭಿಸಿರುವ ವಿಜಯಪುರ-ಬೆಂಗಳೂರು ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದು, ಈ ಬಸ್ ಪ್ರತಿ ದಿನ ವಿಜಯಪುರದಿಂದ ರಾತ್ರಿ ೯-೪೫ಕ್ಕೆ ಹೊರಟು ಮರು ದಿನ ಬೆಳಿಗ್ಗೆ ೭-೩೦ಕ್ಕೆ ತಲುಪಲಿದೆ. ಅದರಂತೆ ಬೆಂಗಳೂರಿನಿಂದ ಪ್ರತಿದಿನ ರಾತ್ರಿ ೧೦ ಗಂಟೆಗೆ ಹೊರಟು ಬೆಳಿಗ್ಗೆ ೭-೪೫ಕ್ಕೆ ವಿಜಯಪುರಕ್ಕೆ ತಲುಪಲಿದೆ.ಈ ಸಾರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಮೂಲಕ ಇಲ್ಲವೇ ಸಮೀಪದ ಮುಂಗಡ ಟಿಕೆಟ್ ಕೌಂಟರ್ (ಕೇಂದ್ರ ಬಸ್ ನಿಲ್ದಾಣ) ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ವಿಜಯಪುರ ತಹಶೀಲ್ದಾರ ಶ್ರೀಮತಿ ಕವಿತಾ, ವಾರ್ತಾಧಿಕಾರಿ ಅಮರೇಶ ದೊಡಮನಿ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಜ್ಞಾನೇಶ್ವರ ತಾಟೆ, ಗಾಂಧಿ ಭವನದ ಅಧಿಕಾರೇತರ ಸಮಿತಿ ಸದಸ್ಯರಾದ ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More