ಬಸವನಬಾಗೇವಾಡಿ: ದೇಶದಲ್ಲಿ ಸಂವಿಧಾನ ಜಾರಿಯಾದ ಜ.೨೬,೧೯೫೦ ಇದು ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಸುದಿನವಾಗಿದೆ ಎಂದು ಮನಗೂಳಿ ಹೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಚನ್ನಗೌಡ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಹೆಸ್ಕಾಂ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬಗಳು ದೇಶ ಬಾಂಧವರಲ್ಲಿ ದೇಶ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜೊತೆಗೆ ಸಂಭ್ರಮ ತುಂಬುವಂತೆ ಮಾಡುತ್ತವೆ. ವಿವಿಧೆತೆಯಲ್ಲಿ ಏಕತೆಯನ್ನು ಇಡೀ ಜಗತ್ತಿಗೆ ಸಾರಿದ ದೇಶ ನಮ್ಮದು. ಇಂತಹ ಹೆಮ್ಮೆಯ ದೇಶದಲ್ಲಿ ನಾವೆಲ್ಲರೂ ಒಂದಾಗಿ ದೇಶದ ಪ್ರಗತಿಗೆ ಮುಂದಾಗಬೇಕೆಂದರು.
ಧ್ವಜಾರೋಹಣ ನೆರವೇರಿಸಿದ ಶಾಖೆಯ ಸಹಾಯಕ ಅಭಿಯಂತರ ಪರಶುರಾಮ ಉಕ್ಕಲಿ, ಸಿಬ್ಬಂದಿಗಳಾದ ಸುರೇಶ ಕಲ್ಲೂರ, ಶ್ರೀಮಂತ ನಾಗರಾಳ ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನಗೂಳಿಯ ೩೩ ಕೆವ್ಹಿ ಸ್ಟೇಶನ್ ಜೆಇ ಶರಣು ಗೊಳಸಂಗಿ, ಸಿಬ್ಬಂದಿಗಳಾದ ರಾಜಶೇಖರ ಹೊಸಮನಿ, ಪವಾಡೆಪ್ಪ ಗಾಣಿಗೇರ, ಪೂಜಾ ಮನಗೂಳಿ, ಶಿವಾನಂದ ಸಜ್ಜನ, ರಮೇಶ ಹಾವಣ್ಣನವರ, ಅಶೋಕ ಬಳಗಾನೂರ, ಅಶೋಕ ತೆಲಗಿ, ಶ್ರೀಧರ ಲಮಾಣಿ, ಪ್ರಶಾಂತ ಬಿರಾದಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

