ಬಸವನಬಾಗೇವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿರುವ ಸಂವಿಧಾನದಿಂದಾಗಿ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಜೀವನ ಸಾಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ, ಪಪೂ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ, ಪ್ರಾಧ್ಯಾಪಕರಾದ ಡಾ.ವೈ.ಬಿ.ನಾಯಕ, ಪ್ರೊ.ಡಿ.ಎಸ್.ಲಗಳಿ, ಪ್ರೊ.ದಿಲೀಪಕುಮಾರ, ಡಾ.ಎಸ್.ಬಿ.ಜನಗೊಂಡ, ವಿ.ಎನ್.ರಜಪೂತ, ಎಸ್.ಜೆ.ಸೂರ್ಯವಂಶಿ, ಪಿ.ಎಸ್.ಹೊರಕೇರಿ, ಜೆ.ಆರ್.ಡಾವಣಗೇರಿ, ಎ.ಬಿ.ಅಪ್ಪೋಜಿ, ಎಂ.ಆರ್.ಮಮದಾಪೂರ, ಪಿ.ಎಸ್.ನಾಟೀಕಾರ, ಭರತ, ಬಿ.ಆರ್.ಮ್ಯಾಗೇರಿ, ಎಸ್.ಎಸ್.ನಾಯ್ಕೋಡಿ, ಟಿ.ವೈ.ಮಣ್ಣೂರ, ಬಿ.ಬಿ.ಕಳ್ಳಿಗುಡ್ಡ, ಎಸ್.ಎಸ್.ಮನಗೂಳಿ ಇತರರು ಇದ್ದರು. ಪ್ರೊ.ಎಂ.ಕೆ.ಯಾದವ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಬಿಎಲ್ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹತ್ತನೆ ತರಗತಿ ವಿದ್ಯಾರ್ಥಿಗಳ ಟ್ಯಾಲೆಂಟ್ ಪರೀಕ್ಷೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಪರೀಕ್ಷೆಯಲ್ಲಿ ೩೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

