ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಹೊಸದಾಗಿ ವಿಜಯಪುರ-ಬೆಂಗಳೂರು ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸಂಚಾರ ಜ.೨೬ರಿಂದ ಆರಂಭಿಸಲಾಗಿದ್ದು, ಸಾರ್ವನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಜ.೨೬ರ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೊಸದಾಗಿ ಆರಂಭಿಸಿರುವ ವಿಜಯಪುರ-ಬೆಂಗಳೂರು ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದು, ಈ ಬಸ್ ಪ್ರತಿ ದಿನ ವಿಜಯಪುರದಿಂದ ರಾತ್ರಿ ೯-೪೫ಕ್ಕೆ ಹೊರಟು ಮರು ದಿನ ಬೆಳಿಗ್ಗೆ ೭-೩೦ಕ್ಕೆ ತಲುಪಲಿದೆ. ಅದರಂತೆ ಬೆಂಗಳೂರಿನಿಂದ ಪ್ರತಿದಿನ ರಾತ್ರಿ ೧೦ ಗಂಟೆಗೆ ಹೊರಟು ಬೆಳಿಗ್ಗೆ ೭-೪೫ಕ್ಕೆ ವಿಜಯಪುರಕ್ಕೆ ತಲುಪಲಿದೆ.
ಈ ಸಾರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಮೂಲಕ ಇಲ್ಲವೇ ಸಮೀಪದ ಮುಂಗಡ ಟಿಕೆಟ್ ಕೌಂಟರ್ (ಕೇಂದ್ರ ಬಸ್ ನಿಲ್ದಾಣ) ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
