ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಾರ್ವಜನಿಕ ಜನ ಸಂಪರ್ಕ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಜಿ ಅಧ್ಯಕ್ಷರಾದ ಎಂ.ಎಸ್.ರುದ್ರಗೌಡ್ರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಜವಾಹಾರ ಗೋಸಾವಿ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜುನ ಗಡಗಿ, ನಗರ ಆಶ್ರಯ ಸಮಿತಿ ನಾಮನಿರ್ದೇಶನ ಸದಸ್ಯರಾದ ಪಾರೀಸ್ ಶಿರಹಟ್ಟಿ, ಬಸವರಾಜ ಕಾಂಬಳೆ, ಭೂ ನ್ಯಾಯ ಮಂಡಳಿ ಸಮಿತಿ ನಾಮನಿರ್ದೇಶನ ಸದಸ್ಯರಾದ
ಶರಣು ಕಾಖಂಡಕಿ, ಮುಖಂಡರಾದ ಬಾಬು ಶಿರಶ್ಯಾಡ, ವಿಕ್ರಮ ಗಾಯಕವಾಡ, ಬಸವರಾಜ ಕೋರಿ, ರಾಜಶೇಖರ ಭಜಂತ್ರಿ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಬಸವರಾಜ ಗೊಳಸಂಗಿ ಸೇರಿದಂತೆ ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
