ದೇವರಹಿಪ್ಪರಗಿ: ಭಾರತದ ಸಂವಿಧಾನ ಎಲ್ಲ ಜಾತಿ, ಮತ, ಪಂಥಗಳ ಧರ್ಮಗ್ರಂಥವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ೭೫ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದಲ್ಲಿಯೇ ವಿಶೇಷವಾದ ನಮ್ಮ ಸಂವಿಧಾನದ ಮಹತ್ವ, ಧ್ಯೆಯೋದ್ಧೇಶಗಳನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ ಎಂದರು.
ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿಶೇಷ ಉಪನ್ಯಾಸಕರಾಗಿ ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಮೇಶ ಮಡಿಯಾಳಕರ ಉಪನ್ಯಾಸ ನೀಡಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸೈ ಬಸವರಾಜ ತಿಪರಡ್ಡಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಮ್.ವಾಲಿಕಾರ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ, ಕಾಶೀನಾಥ ಬಜಂತ್ರಿ, ಬಶೀರ್‌ಅಹ್ಮದ್ ಬೇಪಾರಿ, ಶಾಂತಯ್ಯ ಜಡಿಮಠ, ಸುಮಂಗಲಾ ಸೇಬೆನವರ, ಕಾಶೀನಾಥ ಜಮಾದಾರ, ನಾಮನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಹುಸೇನ್ ಕೊಕಟನೂರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಜಿ.ಯಂಕಂಚಿ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಪ್ರಕಾಶ ಮಲ್ಲಾರಿ, ಸೋಮು ದೇವೂರ, ಕಾಸು ಕಡ್ಲೇವಾಡ ಸೇರಿದಂತೆ ೧೨ ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

