Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲ: ಪಟ್ಟಣದ ಸಂಗನಬಸವೇಶ್ವರ ಶಾಲೆಯಲ್ಲಿ ರಾಜಕಿಯ ಮುಖಂಡರಾದ ಸೋಮನಾಥ ಮೇಲಿಮನಿ ದ್ವಜಾರೋಹಣ ನೇರವೇರಿಸಿದರು. ನಿತ್ಯಾನಂದ ಆರೋಢ ಮಠದ ಬಸವಲಿಂಗ ಶರಣರು, ಪ.ಪಂ ಸದಸ್ಯ ಅಶೋಕ ಕೊಳಾರಿ, ಬಸವರಾಜ ತೆಲ್ಲೂರ, ಯಲ್ಲಪ್ಪ ಬುರಡ, ಶ್ರೀಶೈಲ ಕುಂಬಾರ, ಬಾಬು ಕೊತಂಬರಿ, ಆನಂದ ಬುರಡ,ದಯಾನಂದ ಪುರಾಣಿಕ, ಶ್ರೀಮಂತ ಹಿರೇಗೌಡ, ಮುಖ್ಯ ಶಿಕ್ಷಕ ಸಂಜುಕುಮಾರ ಇಟಗಾರ, ಶಿಕ್ಷಕ ಉಮೇಶ ಕುಂಬಾರ ಉಪಸ್ತಿತರಿದ್ದರು.ಐ.ಕೆ. ರಾಯಲ್ ಶಾಲೆ: ಪಟ್ಟಣದ ಐ.ಕೆ. ರಾಯಲ ಶಾಲೆಯಲ್ಲಿ ಶಾಲಾ ಆಡಳಿಮಂಡಳಿ ನಿರ್ದೇಶಕ ಶೌಕತಲಿ ಸುಂಬಡ ದ್ವಜಾರೋಹಣ ಮಾಡಿದರು.ಮುಖ್ಯ ಶಿಕ್ಷಕ ಸಂತೋಷ ಚಂಗಟ್ಟಿ, ಶಿಕ್ಷಕರಾದ ಸಂಜನಾ ಬೇನುರ, ರಕ್ಷಿತಾ ಅಂಬುರೆ, ಸಂಗೀತಾ, ರೋಜಿ, ಶ್ರೀಕಾಮತರ ಸಿಬರಾಮ ಮುಂತಾದವರು ಉಪಸ್ಥಿತರಿದ್ದರು.ಹೂವಿನಹಳ್ಳಿ ತಾಲೂಕಿನ ಹೂವಿನಹಳ್ಳಿ ಗ್ರಾಮದ ಅಂಬೇಡ್ಕರ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶರಣು ಸಿಂಧೆ ದ್ವಜಾರೋಹಣ ಮಾಡಿದರು.ಮುಖ್ಯ ಶಿಕ್ಷಕ ಪಂಡಿತ ಅವಜಿ ಶಾಲಾ ಸಿಬ್ಬಂದಿ ಹಾಗೂ ಪಾಲಕರು ಇದ್ದರು.
ಆಲಮೇಲ: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಂತಹ ಆಲಮೇಲದ ಶ್ರೀ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಗೆ ವಿಶ್ವ ಹಿಂದೂ ಪರಿಷತ್, ಗ್ರಾಮಸ್ಥರು, ಶ್ರೀ ಮಠದ ಭಕ್ತರು ಶನಿವಾರ ಅದ್ದೂರಿ ಸ್ವಾಗತ ಕೋರಿದರು.ಇದೇ ಜ. ೨೨ ರಂದು ಅಯೋಧ್ಯೆ ಶ್ರೀ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಲಮೇಲದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಗೆ ಅಯೋದ್ಯೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಆಹ್ವಾನದ ಮೇರೆಗೆ ಅಯೋಧ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.ಯಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ತಡವಾಳದ ರಾಚೋಟೇಶ್ವರ ಶಿವಾಚಾರ್ಯರು, ಗುರಲಿಂಗ ಶಿವಾಚಾರ್ಯರು, ಕುಮಸಗಿ ಶಿವಾನಂದ ಶಿವಾಚಾರ್ಯರು ಮುಂತಾದ ಪೂಜ್ಯರ ನೇತೃತ್ವದಲ್ಲಿ ಸ್ವಾಗತಿಸಿ ಪಟ್ಟಣದ ಆಂಜನೆಯ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹಿರೇಮಠಕ್ಕೆ ಕರೆತರಲಾಯಿತು.
ಆಲಮೇಲ: ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ ಜ್ಯೋತಿ ರಥಯಾತ್ರೆಯು ಶನಿವಾರ ಬೆಳಗ್ಗೆ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಮೂಲಕ ಆಗಮಿಸಿತು.ತಹಶೀಲ್ದಾರ ಸುರೇಶ ಚಾವಲರ ನೇತೃತ್ವದಲ್ಲಿ ತಾಲೂಕು ಆಡಳಿತ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ವಾದ್ಯ ವೈಭವ ಮತ್ತು ವಿವಿದ ಕಲಾ ತಂಡಗಳೊಂದಿಗೆ ಅದ್ದೂರಿ ಸ್ವಾಗತಿಸಿ ಬಿಳ್ಗೊಟ್ಟರು.ಶನಿವಾರ ಬೆಳಗ್ಗೆ ೯ ಗಂಟೆಗೆ ತಾಲೂಕಿನ ದೇವಣಗಾಂವ ಗ್ರಾಮಕ್ಕೆ ಆಗಮಿಸಿತು. ತಹಶೀಲ್ದಾರ ಸುರೇಶ ಚಾವಲಾರ ನೇತೃತ್ವದ ತಾಲೂಕ ಆಡಳಿತ ಮತ್ತು ದೇವಣಗಾಂವ ಗ್ರಾಮಸ್ಥರು ಶಾಲಾ ಕಾಲೇಜ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ವಾಗತಿಸಿ ಬಿಳಕೊಟ್ಟರು. ನಂತರ ೧೧-೩೦ ಗಂಟೆಗೆ ಆಲಮೇಲ ಪಟ್ಟಣಕ್ಕೆ ಆಗಮಿಸಿತು. ಬಡದಾಳ ಪೆಟ್ರೋಲ ಬಂಕ್ ಹತ್ತಿರ ತಾಲೂಕು ಆಡಳಿತದೊಂದಿಗೆ ಎಲ್ಲ ಶಾಲಾ ಕಾಲೇಜ ವಿದ್ಯಾರ್ಥಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಸಕಲ ವಾದ್ಯ ವೈಭವ, ಡೊಳ್ಳು ಕುಣಿತ, ಮಕ್ಕಳ ಕೋಲಾಟ ನೃತ್ಯ, ಮಕ್ಕಳ ಚದ್ಮ ವೇಶದಾರಿಗಳಿಂದ ಕಲಾ ನೃತ್ಯ ರೂಪಕದ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.ಸುಮಾರು ಎರಡು ಗಂಟೆವರೆಗೂ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರ್ನಾಟಕ ಜ್ಯೋತಿ ಯಾತ್ರೆ…
ವಿಜಯಪುರ: ಭಾರತ ಇತಿಹಾಸದಲ್ಲಿ ಗಣರಾಜ್ಯೋತ್ಸವ ದಿನವು ನಮಗೆ ಪ್ರಮುಖವಾದ ದಿನವಾಗಿದೆ. ಅಗಸ್ಟ್ 15 1947 ರಂದು ಬ್ರಿಟಿಷರಿಂದ ನಮಗೆ ತಾತ್ವಿಕವಾದ ಸ್ವತಂತ್ರ ಪಡೆದುಕೊಂಡ ದಿನವಾದರೆ ಈ ದಿನ ಜನೆವರಿ 26 1950 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೆ ದಿನವಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಬಗುರ್ ಹುಕುಂ ಮಾಜಿ ನಾಮ ನಿರ್ದೇಶನ ಸದಸ್ಯ ಯಾಸ್ಮಿನ್ ಭಾನು ನಾಯ್ಕೋಡಿ ಹೇಳಿದರು.ರಾಜೀವ್ ಗಾಂಧಿ ಪ್ರೌಢಶಾಲೆ ಹೊನ್ನಳ್ಳಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ರಾಜ್ಯ ಪ್ರಭುತ್ವವನ್ನ ತ್ಯಜಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ದಿನವಾಗಿದೆ. ಭಾರತ ತನ್ನದೇ ಆದ ಸಂವಿಧಾನ ಜಾರಿಗೆ ತರುತ್ತಿದ್ದಂತೆ ಗಣರಾಜ್ಯವಾಗಿ ಬದಲಾಯಿತು ಭಾರತವು ಉತ್ತಮ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣವಾಗಲು ನಮ್ಮ ದೇಶದ ಸಂವಿಧಾನವೇ ಪ್ರಮುಖ ಕಾರಣ ಅದಕ್ಕಾಗಿ ಹಗಲಿರುಳು ಶ್ರಮಿಸಿದ ಸವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂಗನಗೌಡ…
ವಿಜಯಪುರ: ಭಾರತ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನೆಯ (ಎನ್‌ವೈಕೆಎಸ್) ವಿಜಯಪುರ ಜಿಲ್ಲಾ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಇಲ್ಲಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚವ್ಹಾಣ ಇವರನ್ನು ಕೇಂದ್ರದ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ ಅವರ ಶಿಫಾರಸ್ಸಿನ ಮೇರೆಗೆ ನೇಮಕಗೊಳಿಸಿ ಎನ್‌ವೈಕೆಎಸ್‌ನ ಡೈರಕ್ಷರ್ ಜನರಲ್ ನಿತೀಶ್‌ಕುಮಾರ ಮಿಶ್ರಾ ಆದೇಶ ಹೊರಡಿಸಿದ್ದಾರೆ.
ಮುದ್ದೇಬಿಹಾಳ: ಫೆ.೧ ರಂದು ಬೆ.೧೦-೩೦ ಕ್ಕೆ ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯ ಸಾಂಸೃತಿಕ ವೇದಿಕೆಯಲ್ಲಿ ಮಾಜಿ ಶಾಸಕರಾದ ಲಿಂ. ಎಂ.ಎಂ.ಸಜ್ಜನ ಅವರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ದತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ತಾಲೂಕು ಶರಣ ಸಾಹಿತ್ಯ ಪರಿಷತ್ತು, ಲಿಂಗೈಕ್ಯರ ಅಭಿಮಾನಿ ಬಳಗ ಹಾಗೂ ಸಜ್ಜನ ಪರಿವಾರದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಪರಮ ಪೂಜ್ಯ ಯೋಗಿ ಕಲ್ಲಿನಾಥ ದೇವರು ವಹಿಸಲಿದ್ದು ಶಾಸಕ ಸಿ.ಎಸ್.ನಾಡಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಗಲಕೋಟದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಮುತ್ತಗಿಯ ರಮೇಶ ಸೂಳಿಭಾವಿ, ಗಣ್ಯ ವ್ಯಾಪಾರಿ ಬಸವರಾಜ ಮೋಟಗಿ ಆಗಮಿಸಲಿದ್ದು, ವೀರಶೈವ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ, ಚೇರಮನ್ ಎಂ.ಎಸ್.ನಾವದಗಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ಕ್ರೀಡೆಯಲ್ಲಿ ಭಾಗವಹಿಸುವಿಕೆಯು ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಗೆಲುವು ಸಿಗಲು ಸಹಕಾರಿಯಾಗುತ್ತದೆ ಎಂದು ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಪಪೂ. ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಕಂದಾಯ ಇಲಾಖೆ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿವಿಧ ಇಲಾಖೆಗಳ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಕ್ರೀಡೆ ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ದೈನಂದಿನ ಕೆಲಸದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗಹಿಸುವಂತಾಗಬೇಕು. ಸರ್ಕಾರಿ ನೌಕರ ಬಾಂಧವರು ತಮ್ಮ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಮನೋಭಾವವನ್ನು ಮೈಗೂಡಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಭಾಗಬಹಿಸುವದು ಅಭಿನಂದನೀಯ ಎಂದರು.ಬಸವನಬಾಗೇವಾಡಿ ಮತಕ್ಷೇತ್ರವು ಸಾಕಷ್ಟು ಅಭಿವೃದ್ದಿ ಹೊಂದುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿದೆ . ಕ್ಷೇತ್ರದ ಅಭಿವೃದ್ದಿಯಲ್ಲಿ ನನ್ನ ತಂದೆ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಕ್ಷೇತ್ರದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಬಾಂಧವರು ತಮ್ಮ ಸಹಕಾರ ನೀಡುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಕೈ…
ಚಡಚಣ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎನ್ಇಪಿ ಹಾಗೂ ಎಸ್‌ಇಪಿ ಗಳ ನಿಲುವು ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಮಕ್ಕಳ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಶಿಕ್ಷಣ ಪ್ರೇಮಿ ಮಹೇಶ ಗುಮಾಸ್ತೆ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದ್ವಜಾರೋಹಣ ನೆರವೇರಿಸಿದ ಸಿಪಿಐ ಸುರೇಶ ಬೆಂಡಗುಂಬಳ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳಿಂದ ಆಚರಿಸಲಾಗುತ್ತದೆ. ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು, ಪ್ರಬಂಧ ಸ್ಪರ್ಧೆ, ಇತರೆ ಚಟುವಟಿಕೆಗಳೊಂದಿಗೆ ಈ ದಿನವನ್ನು ಸ್ಮರಣೀಯವಾಗಿಸಲಾಗುತ್ತದೆ ಎಂದರು.ಈ ಕಾರ್ಯಕ್ರಮದಲ್ಲಿ ವಕೀಲ ನಾನಾಗೌಡ ಸೂರಗೊಂಡ, ಡಾ. ಮಹೇಶ ಮುರಗೊಂಡೆ, ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಎಸ್ ಹಾವಿನಾಳ, ಮುಖ್ಯ ಶಿಕ್ಷಕ ಸುರೇಶ ಜಂತಿ, ಶಿಕ್ಷಕರಾದ ಪಿ ಎಚ್ ಪೂಜಾರಿ, ಎಮ್ ಎನ್ ಚೌವ್ಹಾಣ, ಸಂಗೀತಾ ಬಣಗಾರ, ಅರ್ಪಿತಾ ಭಂಡರಕವಟೆ, ಪ್ರಿಯಾಂಕಾ ಅಂಜುಟಗಿ, ಆರಿಫ ಕೋತ್ವಾಲ, ಭೀಮವ್ವಾ ಮಡ್ಡಿ, ಲಕ್ಷ್ಮೀ…
ದೇವರಹಿಪ್ಪರಗಿ: ಪಟ್ಟಣದ ಸಂಘ ಸಂಸ್ಥೆಗಳು, ಅಂಚೆಕಚೇರಿ ಸೇರಿದಂತೆ ವಿವಿಧೆಡೆ ೭೫ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಸಮೃದ್ಧಿ ಸಹಕಾರ ಸಂಘ:ಸ್ಥಳೀಯ ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯವೈದ್ಯ ಆರ್.ಆರ್.ನಾಯಿಕ್, ಉಪಾಧ್ಯಕ್ಷ ರಿಯಾಜ್ ಯಲಗಾರ, ನಿರ್ದೇಶಕರುಗಳಾದ ವೆಂಕಟೇಶ ಕುಲಕರ್ಣಿ, ಬಸವರಾಜ ಬಬಲೇಶ್ವರ, ಕೆ.ಎಸ್.ಕೋರಿ, ಉಮೇಶ ಹಳಪಾಣಿ, ಎ.ಕೆ.ಹಿರೇಮಠ, ಸಿಬ್ಬಂದಿ ಬಸವರಾಜ ಸಜ್ಜನ, ಲತಾ ತಡಪಟ್ಟಿ, ಅಕ್ಷಯ ರಾಠೋಡ, ಬಸವರಾಜ ಹಿರೇಮಠ ಹಾಜರಿದ್ದರು.ಅಂಚೆ ಕಚೇರಿ: ಪಟ್ಟಣದ ಪೋಸ್ಟ ಮಾಸ್ಟರ್ ಪಿ.ಆರ್.ದೊಡಮನಿ ಧ್ವಜಾರೋಹಣ ನೆರವೇರಿಸಿದರು. ವಿಶ್ರಾಂತ ಪ್ರಾಂಶುಪಾಲ ರುದ್ರಪ್ಪ ದೊಡಮನಿ ಮಾತನಾಡಿದರು.ಅಂಚೆ ಉಪಪಾಲಕ ಪೂಜಾರಿ, ವೆಂಕಟೇಶ ಕುಲಕರ್ಣಿ, ರಾಮನಗೌಡ ಬಿರಾದಾರ, ಪ್ರವೀಣ ಕುಲಕರ್ಣಿ, ಎಸ್.ಡಿ.ತಳವಾರ, ಎಲ್.ಎಚ್.ನದಾಫ್, ಪ್ರವೀಣ ಮಾಳೇಗಾರ, ಪಿ.ಎಸ್.ಕೆಂಭಾವಿ. ಮಲ್ಲಿಕಾರ್ಜುನ ಪಾಟೀಲ, ರಂಜೀತ ತಳಕೇರಿ, ಸಂಜಯ, ನಯನ ಯಡಹಳ್ಳಿ, ಎಸ್.ಆರ್.ಬಿರಾದಾರ, ಭಾಗ್ಯ ಪುರವಂತಮಠ ಇದ್ದರು.ನಿವೃತ್ತ ನೌಕರರ ಸಂಘ: ಪಟ್ಟಣದ ಸದಯ್ಯನಮಠದಲ್ಲಿ ನಿವೃತ್ತ ನೌಕರರ ಸಂಘದ ಧ್ವಜಾರೋಹಣವನ್ನು ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ನೆರವೇರಿಸಿದರು.ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಎಸ್.ಎಮ್.ಯರನಾಳ,…
ದೇವರಹಿಪ್ಪರಗಿ: ತನು,ಮನ, ಧನಗಳಿಂದ ತ್ಯಾಗ ಬಲಿದಾನ ಮಾಡಿದ ಮಹಾನ ನಾಯಕರು ಹಾಗೂ ದೇಶಾಭಿಮಾನಿಗಳ ಆಶಯದಂತೆ ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಿವೃತ್ತ ಅಭಿಯಂತರ ಸಿ.ಡಿ.ರಾಠೋಡ ಹೇಳಿದರು.ತಾಲ್ಲೂಕಿನ ಹಿಟ್ನಳ್ಳಿ ತಾಂಡಾದ ಶಾಸಕರ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ೭೫ ನೇ ಗಣರಾಜ್ಯೋತ್ಸವದ ಅಂಗವಾಗಿ ‘ವಿಶ್ರಾಂತ ನೌಕರರಿಗೊಂದು ವಿನಮೃತೆಯ ಗೌರವ’ ಸಮಾರಂಭದ ಅತಿಥಿಯಾಗಿ ಮಾತನಾಡಿದರು.ವೇದಿಕೆಯಲ್ಲಿ ನಿವೃತ್ತರಾದ ಜಗದಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಬಿ.ಅಂಗಡಿ, ಡಿ.ಜಿ. ದೊಡಮನಿ, ಡಿ.ಪಿ.ದೊಡಮನಿ, ಡಿ.ಕೆ.ನಾಯಿಕ, ಎಲ್.ಬಿ.ಮಂಜಿ, ವ್ಹಿ.ಟಿ.ರಾಠೋಡ, ವಾಯ್. ಎಮ್.ಹಿರೇಕುರುಬರ, ಎ.ಆಯ್.ಮುಲ್ಲಾ, ಎಮ್.ಬಿ.ಅಂಗಡಿ, ಎ.ಆರ್.ನಾಯಿಕ, ಕಸ್ತೂರಿಬಾಯಿ ದೊಡಮನಿ, ವ್ಹಿ.ಆರ್.ಅಂಗಡಿ, ಎನ್.ಎಲ್.ಅಂಗಡಿ, ಎಮ್.ಬಿ.ದೊಡಮನಿ, ಬಿ.ಜಿ.ನಾಯಕ, ಪಿ.ಟಿ.ನಾಯಿಕ, ಡಿ.ಎಚ್.ಚವ್ಹಾಣ ಸೇರಿದಂತೆ ೬೦ ಕ್ಕೂ ಹೆಚ್ಚು ನಿವೃತ್ತ ನೌಕರರು, ಶಾಲೆಗೆ ದೇಣಿಗೆ ನೀಡಿದವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಲಾಯಿತು.ಶಾಲೆಯ ಮುಖ್ಯಗುರು ಡಿ.ಸಿ.ಲಮಾಣಿ, ಸಿಆರ್‌ಸಿ ಕಸ್ತೂರಿ ಬಡದಾಳ, ಶಿಕ್ಷಕ ಸಿಬ್ಬಂದಿ ಆಶಾ ರಾಠೋಡ ಆರ್.ಆರ್.ಚವ್ಹಾಣ ಸಿಬ್ಬಂದಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಬಾಗವಹಿಸಿದ್ದರು.
