ಆಲಮೇಲ: ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ ಜ್ಯೋತಿ ರಥಯಾತ್ರೆಯು ಶನಿವಾರ ಬೆಳಗ್ಗೆ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಮೂಲಕ ಆಗಮಿಸಿತು.
ತಹಶೀಲ್ದಾರ ಸುರೇಶ ಚಾವಲರ ನೇತೃತ್ವದಲ್ಲಿ ತಾಲೂಕು ಆಡಳಿತ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ವಾದ್ಯ ವೈಭವ ಮತ್ತು ವಿವಿದ ಕಲಾ ತಂಡಗಳೊಂದಿಗೆ ಅದ್ದೂರಿ ಸ್ವಾಗತಿಸಿ ಬಿಳ್ಗೊಟ್ಟರು.
ಶನಿವಾರ ಬೆಳಗ್ಗೆ ೯ ಗಂಟೆಗೆ ತಾಲೂಕಿನ ದೇವಣಗಾಂವ ಗ್ರಾಮಕ್ಕೆ ಆಗಮಿಸಿತು. ತಹಶೀಲ್ದಾರ ಸುರೇಶ ಚಾವಲಾರ ನೇತೃತ್ವದ ತಾಲೂಕ ಆಡಳಿತ ಮತ್ತು ದೇವಣಗಾಂವ ಗ್ರಾಮಸ್ಥರು ಶಾಲಾ ಕಾಲೇಜ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ವಾಗತಿಸಿ ಬಿಳಕೊಟ್ಟರು. ನಂತರ ೧೧-೩೦ ಗಂಟೆಗೆ ಆಲಮೇಲ ಪಟ್ಟಣಕ್ಕೆ ಆಗಮಿಸಿತು. ಬಡದಾಳ ಪೆಟ್ರೋಲ ಬಂಕ್ ಹತ್ತಿರ ತಾಲೂಕು ಆಡಳಿತದೊಂದಿಗೆ ಎಲ್ಲ ಶಾಲಾ ಕಾಲೇಜ ವಿದ್ಯಾರ್ಥಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಸಕಲ ವಾದ್ಯ ವೈಭವ, ಡೊಳ್ಳು ಕುಣಿತ, ಮಕ್ಕಳ ಕೋಲಾಟ ನೃತ್ಯ, ಮಕ್ಕಳ ಚದ್ಮ ವೇಶದಾರಿಗಳಿಂದ ಕಲಾ ನೃತ್ಯ ರೂಪಕದ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಸುಮಾರು ಎರಡು ಗಂಟೆವರೆಗೂ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರ್ನಾಟಕ ಜ್ಯೋತಿ ಯಾತ್ರೆ ಸ್ವಾಗತಿಸಿ ಬಿಳ್ಗೊಟ್ಟರು.
ನಂತರ ತಾಲೂಕಿನ ಕೋರಹಳ್ಳಿ ಗ್ರಾಮದ ಮೂಲಕ ತಾಲೂಕ ಆಡಳಿತ ಮತ್ತು ಕೋರಳ್ಳಿ ಗ್ರಾ.ಪಂ ಅಧ್ಯಕ್ಷರು ಹಾಗೂ ಗ್ರಾಮಸ್ಥರು, ಶಾಲಾ ಕಾಲೇಜ ವಿದ್ಯಾರ್ಥಿಗಳು ಸ್ವಾಗತಿಸಿ ಸಿಂದಗಿ ತಾಲೂಕಿಗೆ ಬೀಳ್ಕೊಡಲಾಯಿತು.
ತಹಶೀಲ್ದಾರ ಸುರೇಶ ಚಾವಲಾರ, ಪಿಎಸ್‌ಐ ಕುಮಾರ ಹಾಡಕರ, ಪ.ಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ನಿರಿಕ್ಷಕ ಎಂ.ಎ. ಅತ್ತಾರ, ಉಪ ತಹಶೀಲ್ದಾರ ಎಂ.ಕೆ. ಮೋಕಿಹಾಳ ಸೇರಿದಂತೆ ಪ.ಪಂ ಸದಸ್ಯರು ವಿವಿದ ಪಕ್ಷದ ರಾಜಕೀಯ ಮುಂಡರು ಶಾಲಾ ಮಕ್ಕಳು ಗ್ರಾಮಸ್ಥರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

