ದೇವರಹಿಪ್ಪರಗಿ: ತನು,ಮನ, ಧನಗಳಿಂದ ತ್ಯಾಗ ಬಲಿದಾನ ಮಾಡಿದ ಮಹಾನ ನಾಯಕರು ಹಾಗೂ ದೇಶಾಭಿಮಾನಿಗಳ ಆಶಯದಂತೆ ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಿವೃತ್ತ ಅಭಿಯಂತರ ಸಿ.ಡಿ.ರಾಠೋಡ ಹೇಳಿದರು.
ತಾಲ್ಲೂಕಿನ ಹಿಟ್ನಳ್ಳಿ ತಾಂಡಾದ ಶಾಸಕರ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ೭೫ ನೇ ಗಣರಾಜ್ಯೋತ್ಸವದ ಅಂಗವಾಗಿ ‘ವಿಶ್ರಾಂತ ನೌಕರರಿಗೊಂದು ವಿನಮೃತೆಯ ಗೌರವ’ ಸಮಾರಂಭದ ಅತಿಥಿಯಾಗಿ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತರಾದ ಜಗದಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಬಿ.ಅಂಗಡಿ, ಡಿ.ಜಿ. ದೊಡಮನಿ, ಡಿ.ಪಿ.ದೊಡಮನಿ, ಡಿ.ಕೆ.ನಾಯಿಕ, ಎಲ್.ಬಿ.ಮಂಜಿ, ವ್ಹಿ.ಟಿ.ರಾಠೋಡ, ವಾಯ್. ಎಮ್.ಹಿರೇಕುರುಬರ, ಎ.ಆಯ್.ಮುಲ್ಲಾ, ಎಮ್.ಬಿ.ಅಂಗಡಿ, ಎ.ಆರ್.ನಾಯಿಕ, ಕಸ್ತೂರಿಬಾಯಿ ದೊಡಮನಿ, ವ್ಹಿ.ಆರ್.ಅಂಗಡಿ, ಎನ್.ಎಲ್.ಅಂಗಡಿ, ಎಮ್.ಬಿ.ದೊಡಮನಿ, ಬಿ.ಜಿ.ನಾಯಕ, ಪಿ.ಟಿ.ನಾಯಿಕ, ಡಿ.ಎಚ್.ಚವ್ಹಾಣ ಸೇರಿದಂತೆ ೬೦ ಕ್ಕೂ ಹೆಚ್ಚು ನಿವೃತ್ತ ನೌಕರರು, ಶಾಲೆಗೆ ದೇಣಿಗೆ ನೀಡಿದವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಲಾಯಿತು.
ಶಾಲೆಯ ಮುಖ್ಯಗುರು ಡಿ.ಸಿ.ಲಮಾಣಿ, ಸಿಆರ್‌ಸಿ ಕಸ್ತೂರಿ ಬಡದಾಳ, ಶಿಕ್ಷಕ ಸಿಬ್ಬಂದಿ ಆಶಾ ರಾಠೋಡ ಆರ್.ಆರ್.ಚವ್ಹಾಣ ಸಿಬ್ಬಂದಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಬಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

