ಚಡಚಣ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎನ್ಇಪಿ ಹಾಗೂ ಎಸ್‌ಇಪಿ ಗಳ ನಿಲುವು ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಮಕ್ಕಳ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಶಿಕ್ಷಣ ಪ್ರೇಮಿ ಮಹೇಶ ಗುಮಾಸ್ತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವಜಾರೋಹಣ ನೆರವೇರಿಸಿದ ಸಿಪಿಐ ಸುರೇಶ ಬೆಂಡಗುಂಬಳ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳಿಂದ ಆಚರಿಸಲಾಗುತ್ತದೆ. ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು, ಪ್ರಬಂಧ ಸ್ಪರ್ಧೆ, ಇತರೆ ಚಟುವಟಿಕೆಗಳೊಂದಿಗೆ ಈ ದಿನವನ್ನು ಸ್ಮರಣೀಯವಾಗಿಸಲಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ವಕೀಲ ನಾನಾಗೌಡ ಸೂರಗೊಂಡ, ಡಾ. ಮಹೇಶ ಮುರಗೊಂಡೆ, ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಎಸ್ ಹಾವಿನಾಳ, ಮುಖ್ಯ ಶಿಕ್ಷಕ ಸುರೇಶ ಜಂತಿ, ಶಿಕ್ಷಕರಾದ ಪಿ ಎಚ್ ಪೂಜಾರಿ, ಎಮ್ ಎನ್ ಚೌವ್ಹಾಣ, ಸಂಗೀತಾ ಬಣಗಾರ, ಅರ್ಪಿತಾ ಭಂಡರಕವಟೆ, ಪ್ರಿಯಾಂಕಾ ಅಂಜುಟಗಿ, ಆರಿಫ ಕೋತ್ವಾಲ, ಭೀಮವ್ವಾ ಮಡ್ಡಿ, ಲಕ್ಷ್ಮೀ ಕುಂಬಾರ, ಕೋಳಿ, ಮಲ್ಲು ಮಸಳಿ, ನಾಗು ಕಲ್ಮನಿ, ವಿನಾಯ ಜೀರಂಕಲಗಿ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

