ವಿಜಯಪುರ: ಭಾರತ ಇತಿಹಾಸದಲ್ಲಿ ಗಣರಾಜ್ಯೋತ್ಸವ ದಿನವು ನಮಗೆ ಪ್ರಮುಖವಾದ ದಿನವಾಗಿದೆ. ಅಗಸ್ಟ್ 15 1947 ರಂದು ಬ್ರಿಟಿಷರಿಂದ ನಮಗೆ ತಾತ್ವಿಕವಾದ ಸ್ವತಂತ್ರ ಪಡೆದುಕೊಂಡ ದಿನವಾದರೆ ಈ ದಿನ ಜನೆವರಿ 26 1950 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೆ ದಿನವಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಬಗುರ್ ಹುಕುಂ ಮಾಜಿ ನಾಮ ನಿರ್ದೇಶನ ಸದಸ್ಯ ಯಾಸ್ಮಿನ್ ಭಾನು ನಾಯ್ಕೋಡಿ ಹೇಳಿದರು.
ರಾಜೀವ್ ಗಾಂಧಿ ಪ್ರೌಢಶಾಲೆ ಹೊನ್ನಳ್ಳಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ರಾಜ್ಯ ಪ್ರಭುತ್ವವನ್ನ ತ್ಯಜಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ದಿನವಾಗಿದೆ. ಭಾರತ ತನ್ನದೇ ಆದ ಸಂವಿಧಾನ ಜಾರಿಗೆ ತರುತ್ತಿದ್ದಂತೆ ಗಣರಾಜ್ಯವಾಗಿ ಬದಲಾಯಿತು ಭಾರತವು ಉತ್ತಮ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣವಾಗಲು ನಮ್ಮ ದೇಶದ ಸಂವಿಧಾನವೇ ಪ್ರಮುಖ ಕಾರಣ ಅದಕ್ಕಾಗಿ ಹಗಲಿರುಳು ಶ್ರಮಿಸಿದ ಸವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂಗನಗೌಡ ಪಾಟೀಲ್, ಮುನಿರಾ ಬೇಗಮ ಮುರುಡಿ, ರಾಚನ ಗೌಡ ಪಾಟೀಲ ಬಿಜೆಪಿಯ ಮುಖಂಡರು ಅಧ್ಯಕ್ಷತೆಯನ್ನು ವಹಿಸಿದರು. ತಿಪ್ಪಯ್ಯ ನೆಲಗಿಮಠ, ಎ. ಆರ್. ಹತ್ತಿ ಮುಖ್ಯೋಪಾಧ್ಯಾಯರು, ಶಿಕ್ಷಕರಾದ ಮುಲ್ಲಾ, ಜಿ ಆರ್ ಪಾಟೀಲ, ಮಾಶಾಳ, ಶಿವು ಬಸ್ತಿಹಾಳ್, ಮುಂತಾದವರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

