Author: editor.udayarashmi@gmail.com

ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯಿಂದ ೩೦ ಪುಸ್ತಕಗಳ ಲೋಕಾರ್ಪಣೆ | ಬೆರಗು ಪ್ರಶಸ್ತಿ ಪ್ರದಾನ | ಆಲಮೇಲ: ಬಸವಣ್ಣನವರ ನಾಡು ವಿಜಯಪುರ ಜಿಲ್ಲೆ ನಿರಂತರವಾಗಿ ಬರಗಾಲದಿಂದ ಬಳಲಿದರೂ ಅನ್ನ ದಾಸೋಹ, ಅಕ್ಷರ ಜ್ಞಾನದ ದಾಸೋಹಕ್ಕೆ ಯಾವುದೆ ಬರವಿಲ್ಲ ಎಂದು ಹಿರಿಯ ಸಾಹಿತಿ ಡಾ| ಸಂಗಮನಾಥ ಲೋಕಾಪೂರ ಹೇಳಿದರು.ಮಂಗಳವಾರ ಕಡಣಿಯ ಪಿ.ಬಿ. ಕಾಲೇಜು ಆವರಣದಲ್ಲಿ ಕಡಣಿಯ ಬೆರಗು ಪ್ರಕಾಶನ ಸಂಸ್ಥೆ ಹಮ್ಮಿಕೊಂಡ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಸ್ಮರಣಾರ್ಥ ಹಮ್ಮಿಕೊಂಡಿದ್ದ ೩೦ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿಜಯಪುರ ಜಿಲ್ಲೆಯ ಶರಣರು, ಸಂತರು, ಸಾಹಿತಿಗಳು ವಿವಿದ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬರಗಾಲದಿಂದ ಬಳಲಿದರೂ ಇಂದಿರಾಗಾಂಧಿ ಅವರನ್ನು ಬಂಗಾರದಲ್ಲಿ ತೂಗಿದಂತಹ ವಿಶಾಲ ಮನೋಭಾವ ಹೊಂದಿದ ಜನರು ಇಲ್ಲಿದ್ದಾರೆ ಎಂದರು.ಶಾಸಕ ಅಶೋಕ ಮನಗೂಳಿ ೩೦ ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ಯುವ ಸಾಹಿತಿಗಳ ಮತ್ತು…

Read More

ಆಲಮೇಲದಲ್ಲಿ ದಲಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ಆಲಮೇಲ: ಕರ್ಲ್ಬುಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವ ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಆಲಮೇಲದಲ್ಲಿ ದಲಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಟಾಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿ ತಹಸೀಲ್ದಾರ ಅವರಿಗೆ ಎಲ್ಲ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ನಂತರ ಹಿರಿಯ ದಲಿತ ಮುಖಂಡ ಜಗದೀಶ ದಾಳಿ ಮಾತನಾಡಿ, ದೀನ ದಲಿತರು ಹಾಗೂ ಅಲ್ಪ ಸಂಖ್ಯಾತರ ಮೂರ್ತಿಗಳಿಗೆ ಅವಮಾನ ಮಾಡುವ ಮೂಲಕ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿ ರಾಜಕೀಯವಾಗಿ ಲಾಭ ಪಡೆಯಬೇಕು ಎಂಬ ಉದ್ದೇಶ ಹೊಂದಿರುವ ಮನುವಾದಿ ರಾಜಕೀಯ ವ್ಯಕ್ತಿಗಳಿಗೆ ಮುಂದಿನ ದಿನಮಾನದಲ್ಲಿ ಸರಿಯಾಗಿ ಪಾಠ ಕಲಿಸುವ ಮೂಲಕ ಸಂವಿಧಾನ ಹಾಗೂ ಬಾಬಾಸಾಹೇಬರ ವಿಚಾರಗಳನ್ನು ಉಳಿಸಿಕೊಳ್ಳಬೇಕು ಎಂದು ಹೆಳಿದರುದಲಿತ ಯುವ ಮುಖಂಡ ಹರೀಶ ಯಂಟಮನ ಮಾತನಾಡಿದರು.ಶಿವುಕುಮಾರ ಮೇಲಿನಮನಿ, ಬ್ಲಾಕ್ ಅಧ್ಯಕ್ಷ ಮೋಹ್ಮದ ಸಾಧೀಕ ಸುಂಬಡ, ಪರಶುರಾಮ ಕಾಂಬಳೆ ಮಾತನಾಡಿದರು.ಮುಖಂಡರಾದ ಗುಂಡು ಮೇಲಿನಮನಿ, ಸಂಜು…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಸೋಮವಾರ ಸಂಜೆ ಹಂತಿ ಹೊಡೆಯವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇಂದಿನ ಯುವಜನಾಂಗಕ್ಕೆ ಹಂತಿ ಹೊಡೆಯುವದನ್ನು ಮಾದರಿಯಾಗಿ ತೋರಿಸಿದ್ದು ಗಮನ ಸೆಳೆಯಿತು.ಈ ಸಂದರ್ಭದಲ್ಲಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಭಾರತೀಯ ಪರಂಪರೆ ಜಗತ್ತಿಗೆ ಮಾದರಿಯಾಗಿದೆ. ಇಡೀ ಜಗತ್ತಿಗೆ ಅನ್ನ ನೀಡುವ, ದೇಶದ ಬೆನ್ನೆಲುಬಾಗಿರುವ ರೈತ ಬಾಂಧವರನ್ನು ಪ್ರತಿಯೊಬ್ಬರೂ ಮರೆಯದೇ ಸ್ಮರಿಸಬೇಕು. ಇಂದು ಗೋವುಗಳನ್ನು, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಯಾವ ಮನೆಯಲ್ಲಿ ಗೋವುಗಳು, ಎತ್ತುಗಳು ಇರುತ್ತವೆ ಆ ಮನೆ ಸುಂದರವಾಗಿ ಕಾಣುತ್ತದೆ. ಇಂದಿನ ಯುವಜನಾಂಗಕ್ಕೆ ಹಂತಿ ಪದ, ಹಂತಿ ಹೊಡೆಯುವದು ಎಂಬುವದು ಗೊತ್ತಿಲ್ಲ. ಯುವಜನಾಂಗ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅರಿತುಕೊಳ್ಳಬೇಕೆಂದರು.ಈ ಸಂದರ್ಭದಲ್ಲಿ ಚಂದ್ರಶೇಖರಗೌಡ ಪಾಟೀಲ, ಮಹಾಂತಪ್ಪಗೌಡ ಗುಜಗೊಂಡ, ನಿಂಗನಗೌಡ ಪಾಟೀಲ, ರೇವಣಸಿದ್ದಪ್ಪ ತಪಶೆಟ್ಟಿ, ಬಸು ಹಿಟ್ನಳ್ಲಿ, ರಮೇಶ ಔರಸಂಗ, ಮುದುಕಪ್ಪ ಮಣ್ಣೂರ, ಬಾಬು ಘೋರ್ಪಡೆ, ಬಾಬು ಹುಲಗಬಾಳ, ರಾಮು ಬಿರಾದಾರ, ಮಲ್ಲಿಕಾರ್ಜುನ…

Read More

ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರಗೆ ಮನವಿ | ಸಚಿವ ಶಿವಾನಂದ ಪಾಟೀಲ ಸ್ಪಷ್ಠನೆ ಬಸವನಬಾಗೇವಾಡಿ: ಬೇಸಿಗೆ ಕಾಲದಲ್ಲಿ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ಜನರಿಗೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ಅವಳಿ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಲಾಗಿದೆ. ನೀರಿನ ಬವಣೆ ನಿವಾರಿಸಲು ಫೆಬ್ರುವರಿ ಮೊದಲ ವಾರದಲ್ಲಿ ಅವಳಿ ಜಿಲ್ಲೆಯ ಅಂದಾಜು ೧೭೫ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ, ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೊಲ್ಹಾರ, ಬಸವನಬಾಗೇವಾಡಿ, ನಿಡಗುಂದಿ ತಾಲೂಕುಗಳು ಬರಗಾಲಕ್ಕೆ ಒಳಗಾಗಿರುವದರಿಂದಾಗಿ ತೀವ್ರ ಕುಡಿಯುವ ನೀರಿನ ತೊಂದರೆ ಉಂಟಾಗಿರುತ್ತದೆ. ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ತುರ್ತಾಗಿ ಕುಡಿಯುವ ನೀರನ್ನು ಒದಗಿಸಬೇಕಾಗಿದೆ. ಮುಳವಾಡ ಏತ…

Read More

ವಿಜಯಪುರ: ಕೃಷ್ಣಾನದಿ ಮತ್ತು ಆಲಿಮಟ್ಟಿ ಜಲಾಶಯಕ್ಕೆ ಸಂಬಂಧಿಸಿದಂತೆ ಜಲಾಶಯದ ಎತ್ತರ, ನಷ್ಟಗೊಂಡ ರೈತರಿಗೆ ಪರಿಹಾರ, ಪುರ್ನವಸತಿ, ಬೆಳೆ ಪರಿಹಾರ, ಬರಗಾಲ ಪರಿಹಾರ, ಸೇರಿದಂತೆ ಹಲವಾರು ರೈತರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಇಂದು ನಾವೆಲ್ಲರೂ ಸೇರಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.೨೦೨೪ ನೇ ಸಾಲಿನ ಸಮಗ್ರ ಹೋರಾಟ ಹಾಗೂ ವರ್ಷವಿಡಿ ಹೋರಾಟದ ರೂಪರೇಷಗಳನ್ನು ಸಿದ್ದಪಡಿಸಲು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರ್ಷವಿಡಿ ಕಾರ್ಯಕ್ರಮದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಈ ಜಿಲ್ಲೆಯಲ್ಲಿ ರೈತ ಸಂಘ ಬಲಿಷ್ಠಗೊಳ್ಳಬೇಕಾದರೆ ವರ್ಷವಿಡಿ ಸಂಘಟನೆ ಹಾಗೂ ಹೋರಾಟ ಹಾಗೂ ತರಬೇತಿ ಅವಶ್ಯಕ ಎಂದು ಹೇಳಿದರು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡುತ್ತಾ ಆಲಿಮಟ್ಟಿ ಜಲಾಶಯ ಎತ್ತರಗೊಂಡರೆ ಮಾತ್ರ ವಿಜಯಪುರ ಜಿಲ್ಲೆಯ ಕಟ್ಟಕಡೆಯ ಹಳ್ಳಿಯ ಕೊನೆಯ ರೈತನಿಗೂ ನೀರು ಸಿಗುತ್ತದೆ, ಆ ನೀರು ಸಿಗಬೇಕಾದರೆ…

Read More

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ವಿಜಯಪುರ ನಗರದ ಗಾಂಧಿ ಭವನದಲ್ಲಿ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಹಮ್ಮಿಕೊಂಡ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನವು ಸೆಪ್ಟಂಬರ್ ೩೦ಕ್ಕೆ ಉದ್ಘಾಟನೆಗೊಂಡು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಾದರ್ಶದ ಅಂಶಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.ಗಾಂಧಿಭವನವನ್ನು ಪ್ರೇರಣಾ ತಾಣವನ್ನಾಗಿಸಲು ರೂಪುರೇಷೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಗಾಂಧಿಭವನಕ್ಕೆ ಭೇಟಿ ನೀಡಿ ಗಾಂಧೀಜಿಯವರು ಸ್ವಾತಂತ್ರ‍್ಯಕ್ಕಾಗಿನ ಹೋರಾಟಗಳು, ಸತ್ಯ ಅಹಿಂಸೆ ಮಾರ್ಗಗಳ ಹಲವು ವಿಚಾರಗಳನ್ನೊಳಗೊಂಡ ವಿಷಯಗಳು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದ್ದು, ಗಾಂಧಿಭವನಕ್ಕೆ ಭೇಟಿ ನೀಡುವ ಮೂಲಕ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳ ಕುರಿತು ಅರಿತುಕೊಳ್ಳಬೇಕು. ಇಂದಿನ ಪೀಳಿಗೆ ಗಾಂಧೀಜಿ ಅವರ ಚಿಂತನೆ ಅವರ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ್ ಅವರು ಮಾತನಾಡಿ, ಬಾಪೂಜಿ ಅವರ ಸತ್ಯ…

Read More

ವಿಜಯಪುರ: ಅಂಬೇಡ್ಕರ್ ಜೀವನ ಸಾಧನೆ ಸಂದೇಶಗಳನ್ನು ಪ್ರತಿಯೊಬ್ಬರಿಗೂ ಅರಿಯಬೇಕಾಗಿದೆ ಆ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಕ್ಕೂ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಭಾರತ ದೇಶದ ಸಂವಿಧಾನದ ಹಿರಿಮೆಯನ್ನು ಪ್ರತಿ ನಾಗರಿಕರು ತಿಳಿದುಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದು ವಿಜಯಪುರ ಸಮಾಜ ಕಲ್ಯಾಣ ನಿರ್ದೇಶಕ ಪುಂಡಲೀಕ ಮಾನವರ ಹೇಳಿದರು.ಮಂಗಳವಾರ ವಿಜಯಪುರ ಬೆಂಗಳೂರು ಬೈಪಾಸ್ ಬಳಿ ಬೈಕ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ರು ಶೋಷಿತರು ದಲಿತರು ದೀನರ ಬದುಕು ಹಸನಾಗಿಸಲು ಶ್ರಮಿಸಿದ ಮಹಾನುಭಾವರು ಎಂದು ಹೇಳಿದರು.ಬೆಂಗಳೂರು ಬೈಪಾಸಿನಿಂದ ಹೊರಟ ಬೈಕ್ ಜಾಥ ಸಂವಿಧಾನದ ಆಸೆ-ಆಶಯಗಳ ಘೋಷಣೆ ಮೂಲಕ ಹಿಟ್ನಳ್ಳಿ ಗ್ರಾಮಕ್ಕೆ ತಲುಪಿತು. ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಕಡಿಮನಿ ಮತ್ತು ಸದಸ್ಯರು, ಊರಿನ ಗಣ್ಯರು ಜಾಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.ಹಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಉಪ ನಿರ್ದೇಶಕ ಎಸ್ ಎಂ ಪಾಟೀಲ್ ಅವರು, ಅಂಬೇಡ್ಕರ್ ಅವರ ಹಚ್ಚಿದ ದೀಪ ಮನೆ…

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ಸಿಟಿಎಸ್ ನಂ ೨೧೪೨/೩ ಮತ್ತು ೨೧೪೨/೪ ಜಾಗೆಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಅದನ್ನು ತಡೆಹಿಡಿಯುವಂತೆ ಆಗ್ರಹಿಸಿ ವಿವಾದಿತ ಜಾಗೆಯ ಬಳಿಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಗೆ ಮನವಿ ಪತ್ರ ಸಲ್ಲಿಸಿದರು.ವಿವಾದಿತ ಕಟ್ಟಡ ನಿರ್ಮಿಸುತ್ತಿರುವ ಪ್ಲಾಟ್‌ಗಳು ಗೃಹ ಬಳಕೆಗಾಗಿ ಅಂತಾ ಆದೇಶವಾಗಿವೆ. ಆದರೆ ಸದರಿ ಪ್ಲಾಟ್‌ಗಳಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಅಲದೇ ಇಲ್ಲಿ ಸಾರ್ವಜನಿಕ ರಸ್ತೆಗಳನ್ನೂ ಸಹ ಅತಿಕ್ರಮಣ ಮಾಡಲಾಗದೆ. ಇಲ್ಲಿ ಶಾಲೆ ನಿರ್ಮಿಸಲು ಪುರಸಭೆಯಿಂದ ಯಾವುದೇ ಕಟ್ಟಡ ಪರವಾನಿಗೆ ಕೂಡ ಪಡೆದಿಲ್ಲ. ಕಾರಣ ಈ ಕೂಡಲೇ ಅನಧಿಕೃತವಾಗಿ ನಿರ್ಮಿಸುತ್ತಿರುವ ಈ ಶಾಲಾ ಕಟ್ಟಡವನ್ನು ಬಂದ ಮಾಡಬೇಕು. ಮತ್ತು ಯಾವುದೇ ತರಹದ ಕಟ್ಟಡ ಪರವಾನಿಗೆ ನೀಡಬಾರದು, ತಪ್ಪಿದ್ದಲ್ಲಿ ತಮ್ಮ ಕಾರ್ಯಾಲಯದ ಎದುರು ಬಡಾವಣೆಯ ಸಾರ್ವಜನಿಕರು ಉಗ್ರ ಪ್ರತಿಭನೆ ನಡೆಸುವದಾಗಿ ಮನವಿಯಲ್ಲಿ ತಿಳಿಸಲಾಗಿದೆ.ವಾಯ್.ಎಸ್.ನಾಗರದಿನ್ನಿ, ಗೌರಮ್ಮ ಹುನಗುಂದ, ಶೃತಿ ಮದರಖಂಡಿ, ಚನ್ನಬಸಪ್ಪ ಗೌಡರ, ಕೆ.ಜಿ.ಬಡಿಗೇರ, ಎನ್.ಬಿ.ಸಜ್ಜನ, ಎ.ಬಿ.ಮಾಳಜಿ, ಎನ್.ಜಿ.ಕುಲಕರ್ಣಿ, ಎಸ್.ಎಸ್.ಕುಂಬಾರ, ಎನ್.ಆರ್.ದೊಡಮನಿ, ಎಸ್.ಡಿ.ರಾಠೋಡ ಸೇರಿದಂತೆ ೨೨ ಜನ…

Read More

ಮುದ್ದೇಬಿಹಾಳ: ಸಾಕಷ್ಟು ಜನರ ತ್ಯಾಗ ಬಲಿದಾನದಿಂದ ಭಾರತ ಸ್ವತಂತ್ರವಾಗಿದೆ. ಅದನ್ನು ಉಳಿಸಿಕೊಳ್ಳಬೇಕಾದಲ್ಲಿ ನಾವು ಸದಾ ಜಾಗ್ರತರಾಗಿರಬೇಕು ಎಂದು ಜ್ಞಾನಭಾರತಿ ಪ್ರೌಢ ಶಾಲೆಯ ಮುಖ್ಯುಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯರ್ಯಕ್ರಮದಲ್ಲ್ದಿವರು ಮಾತನಾಡಿದರು.ಭಾರತದ ಸ್ವಾತಂತ್ರ‍್ಯದ ಹೋರಾಟದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಿಕೊಡಬೇಕು. ೧೮೫೭ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಿಂದ ಹಿಡಿದು ಸ್ವಾತಂತ್ರ‍್ಯ ಬರುವವರೆಗಿನ ಅವಧಿಯಲ್ಲಿ ಸಾಕಷ್ಟು ಜನ ದೇಶ ಭಕ್ತರು ಸ್ವಾತಂತ್ರ‍್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿಯೂ ಮಹಾತ್ಮ ಗಾಂಧೀಜಿಯವರು ೧೯೧೬ರಿಂದ ತಮ್ಮ ಹೋರಾಟಕ್ಕೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟರು. ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯಾಗ್ರಹ ಎನ್ನುವ ಮೂರು ಅಸ್ತ್ರಗಳು ಬಹಳ ಪ್ರಮುಖವಾದವುಗಳಾಗಿವೆ. ಇವು ಅಶಕ್ತರ ಅಸ್ತ್ರವಲ್ಲ. ಸಾಧಿಸುತ್ತೇನೆಂಬ ಗುರಿ ಮತ್ತು ಛಲವುಳ್ಳವರ ಅಸ್ತ್ರಗಳಾಗಿವೆ. ಭಾರತ ಕೇವಲ ವಿಶ್ವಗುರುವಾದರೆ ಸಾಲದು, ವಿಶ್ವಶಕ್ತಿ, ವಿಶ್ವಗುರು, ಜಗನ್ಮಾತೆಯಾಗಿ ಹೊರಬರಬೇಕಾಗಿದೆ. ಅದನ್ನು ಸಾಧಿಸುವ ಸಂಕಲ್ಪ ಮತ್ತು ಅನುಷ್ಠಾನವೆರಡು ನಮ್ಮಿಂದಲೇ ಆಗಿಬೇಕಾಗಿದೆ. ಅದುವೆ ಹುತಾತ್ಮರಿಗೆ ನಾವು…

Read More

ಮುದ್ದೇಬಿಹಾಳ: ಕುಷ್ಠ ರೋಗ ಆನುವಂಶಿಕ ರೋಗವಲ್ಲ. ಇದು ಮೈಕ್ರೋಬ್ಯಾಕ್ಟೀರಿಯಂ ಲೆಪ್ರಯಿಂದ ಉಂಟಾಗುವ ರೋಗ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೇರದಾಳ ಹೇಳಿದರು.ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಳ ಸಂಯಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕುಷ್ಠ ರೋಗ ಶಾಪಗ್ರಸ್ತವೂ ಅಲ್ಲ. ಪಾಪದ ಫಲವೂ ಅಲ್ಲ. ಚರ್ಮದ ಮೇಲೆ ತಿಳಿ-ಬಿಳಿ ತಾಮ್ರವರ್ಣದ ಮಚ್ಚೆಗಳಿಗೆ ಸ್ಪರ್ಶ ಜ್ಞಾನವಿರುವುದಿಲ್ಲ. ಈ ರೋಗದ ಲಕ್ಷಣಗಳು ಕಂಡು ಬಂದಾಗ ಗ್ರಾಮದಲ್ಲಿನ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಿ ಮಾರ್ಗದರ್ಶನ ಪಡೆಯಬೇಕು. ಸಧ್ಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು ಜನೆವರಿ ೩೦ ರಿಂದ ಫೆಬ್ರವರಿ ೧೫ರ ವರೆಗೆ ಜಿಲ್ಲಾದ್ಯಂತ ನಡೆಯಲಿದೆ. ತಾಲೂಕಿನಾದ್ಯಂತ ಶಾಲೆ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ವಿದ್ಯಾರ್ಥಿಗಳಿಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಭಿತ್ತಿಪತ್ರಗಳನ್ನು ವಿತರಿಸಿ ಪ್ರತಿಜ್ಞಾ…

Read More