ಆಲಮೇಲದಲ್ಲಿ ದಲಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ
ಆಲಮೇಲ: ಕರ್ಲ್ಬುಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವ ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಆಲಮೇಲದಲ್ಲಿ ದಲಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಟಾಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿ ತಹಸೀಲ್ದಾರ ಅವರಿಗೆ ಎಲ್ಲ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ನಂತರ ಹಿರಿಯ ದಲಿತ ಮುಖಂಡ ಜಗದೀಶ ದಾಳಿ ಮಾತನಾಡಿ, ದೀನ ದಲಿತರು ಹಾಗೂ ಅಲ್ಪ ಸಂಖ್ಯಾತರ ಮೂರ್ತಿಗಳಿಗೆ ಅವಮಾನ ಮಾಡುವ ಮೂಲಕ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿ ರಾಜಕೀಯವಾಗಿ ಲಾಭ ಪಡೆಯಬೇಕು ಎಂಬ ಉದ್ದೇಶ ಹೊಂದಿರುವ ಮನುವಾದಿ ರಾಜಕೀಯ ವ್ಯಕ್ತಿಗಳಿಗೆ ಮುಂದಿನ ದಿನಮಾನದಲ್ಲಿ ಸರಿಯಾಗಿ ಪಾಠ ಕಲಿಸುವ ಮೂಲಕ ಸಂವಿಧಾನ ಹಾಗೂ ಬಾಬಾಸಾಹೇಬರ ವಿಚಾರಗಳನ್ನು ಉಳಿಸಿಕೊಳ್ಳಬೇಕು ಎಂದು ಹೆಳಿದರು
ದಲಿತ ಯುವ ಮುಖಂಡ ಹರೀಶ ಯಂಟಮನ ಮಾತನಾಡಿದರು.
ಶಿವುಕುಮಾರ ಮೇಲಿನಮನಿ, ಬ್ಲಾಕ್ ಅಧ್ಯಕ್ಷ ಮೋಹ್ಮದ ಸಾಧೀಕ ಸುಂಬಡ, ಪರಶುರಾಮ ಕಾಂಬಳೆ ಮಾತನಾಡಿದರು.
ಮುಖಂಡರಾದ ಗುಂಡು ಮೇಲಿನಮನಿ, ಸಂಜು ಮೇಲಿನಮನಿ, ಶಶಿಧರ ನಾಯ್ಕೋಡಿ, ಪವನ ಕಾಳೆ, ರಾಹುಲ್ ಯಂಟಮನ, ಸಂತೋಷ ಮೇಲಿನಮನಿ, ಮಂಜುನಾಥ ಯಂಟಮನ, ಶಿವುಕುಮಾರ ಮೇಲಿನಮನಿ, ಅಂಬಾದಾಸ ಬಿಳಂಬಗಿ, ಶಿವು ರಾಂಪುರ, ಬಶೀರ ತಾಂಬೋಳ್ಳಿ, ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

