ವಿಜಯಪುರ: ಅಂಬೇಡ್ಕರ್ ಜೀವನ ಸಾಧನೆ ಸಂದೇಶಗಳನ್ನು ಪ್ರತಿಯೊಬ್ಬರಿಗೂ ಅರಿಯಬೇಕಾಗಿದೆ ಆ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಕ್ಕೂ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಭಾರತ ದೇಶದ ಸಂವಿಧಾನದ ಹಿರಿಮೆಯನ್ನು ಪ್ರತಿ ನಾಗರಿಕರು ತಿಳಿದುಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದು ವಿಜಯಪುರ ಸಮಾಜ ಕಲ್ಯಾಣ ನಿರ್ದೇಶಕ ಪುಂಡಲೀಕ ಮಾನವರ ಹೇಳಿದರು.
ಮಂಗಳವಾರ ವಿಜಯಪುರ ಬೆಂಗಳೂರು ಬೈಪಾಸ್ ಬಳಿ ಬೈಕ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ರು ಶೋಷಿತರು ದಲಿತರು ದೀನರ ಬದುಕು ಹಸನಾಗಿಸಲು ಶ್ರಮಿಸಿದ ಮಹಾನುಭಾವರು ಎಂದು ಹೇಳಿದರು.
ಬೆಂಗಳೂರು ಬೈಪಾಸಿನಿಂದ ಹೊರಟ ಬೈಕ್ ಜಾಥ ಸಂವಿಧಾನದ ಆಸೆ-ಆಶಯಗಳ ಘೋಷಣೆ ಮೂಲಕ ಹಿಟ್ನಳ್ಳಿ ಗ್ರಾಮಕ್ಕೆ ತಲುಪಿತು. ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಕಡಿಮನಿ ಮತ್ತು ಸದಸ್ಯರು, ಊರಿನ ಗಣ್ಯರು ಜಾಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಹಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಉಪ ನಿರ್ದೇಶಕ ಎಸ್ ಎಂ ಪಾಟೀಲ್ ಅವರು, ಅಂಬೇಡ್ಕರ್ ಅವರ ಹಚ್ಚಿದ ದೀಪ ಮನೆ ಮನಗಳಿಗೆ ತಲುಪಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಬೇಕು ಎಂದರು.
ಬಳಿಕ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ತೊರವಿ ಗ್ರಾಮಕ್ಕೆ ತಲುಪಿ ಅಲ್ಲಿ ಸಂವಿಧಾನದ ಸವಿಸ್ತಾರವಾದಂತ ಸಂದೇಶಗಳನ್ನು ನೆರೆದ ಸಾರ್ವಜನಿಕರಿಗೆ ಹೇಳಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

