ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ಸಿಟಿಎಸ್ ನಂ ೨೧೪೨/೩ ಮತ್ತು ೨೧೪೨/೪ ಜಾಗೆಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಅದನ್ನು ತಡೆಹಿಡಿಯುವಂತೆ ಆಗ್ರಹಿಸಿ ವಿವಾದಿತ ಜಾಗೆಯ ಬಳಿಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಗೆ ಮನವಿ ಪತ್ರ ಸಲ್ಲಿಸಿದರು.
ವಿವಾದಿತ ಕಟ್ಟಡ ನಿರ್ಮಿಸುತ್ತಿರುವ ಪ್ಲಾಟ್‌ಗಳು ಗೃಹ ಬಳಕೆಗಾಗಿ ಅಂತಾ ಆದೇಶವಾಗಿವೆ. ಆದರೆ ಸದರಿ ಪ್ಲಾಟ್‌ಗಳಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಅಲದೇ ಇಲ್ಲಿ ಸಾರ್ವಜನಿಕ ರಸ್ತೆಗಳನ್ನೂ ಸಹ ಅತಿಕ್ರಮಣ ಮಾಡಲಾಗದೆ. ಇಲ್ಲಿ ಶಾಲೆ ನಿರ್ಮಿಸಲು ಪುರಸಭೆಯಿಂದ ಯಾವುದೇ ಕಟ್ಟಡ ಪರವಾನಿಗೆ ಕೂಡ ಪಡೆದಿಲ್ಲ. ಕಾರಣ ಈ ಕೂಡಲೇ ಅನಧಿಕೃತವಾಗಿ ನಿರ್ಮಿಸುತ್ತಿರುವ ಈ ಶಾಲಾ ಕಟ್ಟಡವನ್ನು ಬಂದ ಮಾಡಬೇಕು. ಮತ್ತು ಯಾವುದೇ ತರಹದ ಕಟ್ಟಡ ಪರವಾನಿಗೆ ನೀಡಬಾರದು, ತಪ್ಪಿದ್ದಲ್ಲಿ ತಮ್ಮ ಕಾರ್ಯಾಲಯದ ಎದುರು ಬಡಾವಣೆಯ ಸಾರ್ವಜನಿಕರು ಉಗ್ರ ಪ್ರತಿಭನೆ ನಡೆಸುವದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ವಾಯ್.ಎಸ್.ನಾಗರದಿನ್ನಿ, ಗೌರಮ್ಮ ಹುನಗುಂದ, ಶೃತಿ ಮದರಖಂಡಿ, ಚನ್ನಬಸಪ್ಪ ಗೌಡರ, ಕೆ.ಜಿ.ಬಡಿಗೇರ, ಎನ್.ಬಿ.ಸಜ್ಜನ, ಎ.ಬಿ.ಮಾಳಜಿ, ಎನ್.ಜಿ.ಕುಲಕರ್ಣಿ, ಎಸ್.ಎಸ್.ಕುಂಬಾರ, ಎನ್.ಆರ್.ದೊಡಮನಿ, ಎಸ್.ಡಿ.ರಾಠೋಡ ಸೇರಿದಂತೆ ೨೨ ಜನ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

