ಮುದ್ದೇಬಿಹಾಳ: ಸಾಕಷ್ಟು ಜನರ ತ್ಯಾಗ ಬಲಿದಾನದಿಂದ ಭಾರತ ಸ್ವತಂತ್ರವಾಗಿದೆ. ಅದನ್ನು ಉಳಿಸಿಕೊಳ್ಳಬೇಕಾದಲ್ಲಿ ನಾವು ಸದಾ ಜಾಗ್ರತರಾಗಿರಬೇಕು ಎಂದು ಜ್ಞಾನಭಾರತಿ ಪ್ರೌಢ ಶಾಲೆಯ ಮುಖ್ಯುಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯರ್ಯಕ್ರಮದಲ್ಲ್ದಿವರು ಮಾತನಾಡಿದರು.
ಭಾರತದ ಸ್ವಾತಂತ್ರ‍್ಯದ ಹೋರಾಟದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಿಕೊಡಬೇಕು. ೧೮೫೭ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಿಂದ ಹಿಡಿದು ಸ್ವಾತಂತ್ರ‍್ಯ ಬರುವವರೆಗಿನ ಅವಧಿಯಲ್ಲಿ ಸಾಕಷ್ಟು ಜನ ದೇಶ ಭಕ್ತರು ಸ್ವಾತಂತ್ರ‍್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿಯೂ ಮಹಾತ್ಮ ಗಾಂಧೀಜಿಯವರು ೧೯೧೬ರಿಂದ ತಮ್ಮ ಹೋರಾಟಕ್ಕೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟರು. ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯಾಗ್ರಹ ಎನ್ನುವ ಮೂರು ಅಸ್ತ್ರಗಳು ಬಹಳ ಪ್ರಮುಖವಾದವುಗಳಾಗಿವೆ. ಇವು ಅಶಕ್ತರ ಅಸ್ತ್ರವಲ್ಲ. ಸಾಧಿಸುತ್ತೇನೆಂಬ ಗುರಿ ಮತ್ತು ಛಲವುಳ್ಳವರ ಅಸ್ತ್ರಗಳಾಗಿವೆ. ಭಾರತ ಕೇವಲ ವಿಶ್ವಗುರುವಾದರೆ ಸಾಲದು, ವಿಶ್ವಶಕ್ತಿ, ವಿಶ್ವಗುರು, ಜಗನ್ಮಾತೆಯಾಗಿ ಹೊರಬರಬೇಕಾಗಿದೆ. ಅದನ್ನು ಸಾಧಿಸುವ ಸಂಕಲ್ಪ ಮತ್ತು ಅನುಷ್ಠಾನವೆರಡು ನಮ್ಮಿಂದಲೇ ಆಗಿಬೇಕಾಗಿದೆ. ಅದುವೆ ಹುತಾತ್ಮರಿಗೆ ನಾವು ಕೊಡುವ ಗೌರವವಾಗಿದೆ ಎಂದರು.
ಈ ವೇಳೆ ನಿರ್ದೇಶಕರುಗಳಾದ ಲೀಲಾ ಭಟ್ಟ, ಶಾಂತಾ ಭಟ್ಟ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರಾದ ಸುಖದೇವ ಹಂಜಗಿ, ಬಿ.ಟಿ.ಭಜಂತ್ರಿ, ಕಿರಣ ಕಡಿ, ಮಂಜುನಾಥ ಪಡದಾಳಿ, ಬಸವರಾಜ ಸೋನಾರ್, ತೇಜಸ್ವಿನಿ ಕಾಟಿ, ಇಂದು ನಾಯಕ, ಗುರುಬಾಯಿ ತಂಗಡಗಿ, ಶಾಹಿನಾ ನಾಲತಾವಾಡ, ಲಕ್ಷ್ಮೀ ಗೌಡರ್, ರೂಪಾ ನಾಟಿಕರ್, ಸರಸ್ವತಿ ಮಡಿವಾಳರ್, ಭಾಗ್ಯ ಸಿದ್ದಾಪೂರ, ಪವಿತ್ರಾ ಸಜ್ಜನ, ಮಂಜುಳಾ ದಶರಥ, ಗೀತಾ ಇಲ್ಲೂರ, ಸುಮಾ ಬಳಗಾನೂರ, ರಮೇಶ ಮಡಿವಾಳರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

