Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪತ್ತೆ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾಣೆ ಮಾಹಿತಿ ನೀಡಿದರು.ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಸಿಈಎನ್ ಪೊಲೀಸ್‌ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 12 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಇವುಗಳ ಪತ್ತೆಗೆ ವಿಶೇಷ ತಂಡವನ್ನ ರಚಿಸಲಾಗಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರಚಿಸಲಾದ ತಂಡ ಯಶಸ್ವಿ ಪತ್ತೆ ಕಾರ್ಯಾಚರಣೆ ಮಾಡಿದ್ದು, ಒಟ್ಟು ದಾಖಲಾದ 12 ಅಪರಾಧ ಪ್ರಕರಣಗಳಲ್ಲಿ ಒಟ್ಟು ಎರಡು ಕೋಟಿ ಏಳು ಲಕ್ಷದಷ್ಟು ಆರ್ಥಿಕ ವಂಚನೆಯಲ್ಲಿ 1 ಕೋಟಿ 89 ಲಕ್ಷದಷ್ಟು ಮೊತ್ತವನ್ನ ಮರಳಿ ಜಮೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದಲ್ಲದೇ ಜಿಲ್ಲೆಯಲ್ಲಿ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಆಗಿದ್ದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಮಾಹಿತಿ ನೀಡಿದರು.ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ 4,58,500 ರೂಪಾಯಿ ಮೌಲ್ಯದ 25 ವಿವಿಧ ಕಂಪನಿಯ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಕಳ್ಳತನವಾದ ಮೊಬೈಲ್‌ಗಳನ್ನು ಸಿಇಐಆರ್ ವೈಬ್ ಸೈಟ್ ಮುಖಾಂತರ…
ದಾವಣಗೆರೆ ಸಮ್ಮೇಳನದಲ್ಲಿ ಘಟಕಕ್ಕೆ ಪ್ರಶಸ್ತಿ ಪ್ರದಾನ | ಸಂಭ್ರಮಿಸಿದ ಕಾನಿಪ ಸದಸ್ಯರು ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕಕ್ಕೆ ರಾಜ್ಯ ಘಟಕ ಕೊಡಮಾಡುವ ಉತ್ತಮ ಸಾಧನೆಗೈದ ಸಂಘ ಪ್ರಶಸ್ತಿಗೆ ಪುರಸ್ಕೃತವಾಗಿದ್ದು, ಸಂಘದ ಸದಸ್ಯರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.ರಾಜ್ಯದ ಮೂರು ಜಿಲ್ಲಾ ಘಟಕಗಳಿಗೆ ಈ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘವೂ ಈ ಪ್ರಶಸ್ತಿಗೆ ಪಾತ್ರವಾಗಿದ್ದು, ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ಹರ್ಷದ ಹೊನಲಿಗೆ ಕಾರಣವಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ.ಕಳೆದ ವರ್ಷ ಫೆ. ೪ ಮತ್ತು ೫ ರಂದು ವಿಜಯಪುರ ಜಿಲ್ಲಾ ಘಟಕ ೩೭ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿತ್ತು. ಈ ಸಮ್ಮೇಳನ ಯಶಸ್ಸಿಗೆ ಸಂಘದ ಸದಸ್ಯರು ಹಾಗೂ ಹಾಗೂ ಹಿತೈಷಿಗಳು ದಣಿವರಿಯದೇ ದುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.ದಾವಣಗೆರೆಯಲ್ಲಿ ಇದೇ ಫೆ. ೩ ಮತ್ತು ೪ ರಂದು ನಡೆಯಲಿರುವ ೩೮ನೇ ರಾಜ್ಯ ಪತ್ರಕರ್ತರ…
ಸಂಸದ ಡಿಕೆ ಸುರೇಶ್ ನೀಡಿದ ಹೇಳಿಕೆ | ಬಿಜೆಪಿ ನಾಯಕರ ಖಂಡನೆ | ತಮ್ಮನ ಅಭಿಪ್ರಾಯ ಒಪ್ಪದ ಡಿಕೆಶಿ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್, ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆ ಮುಂದಿಡುವುದಾಗಿ ಬೆದರಿಕೆ ಹಾಕಿದ್ದಾರೆ.ದೆಹಲಿಯಲ್ಲಿ ಸಂಸತ್ತಿನ ಹೊರಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಟೀಕಿಸುವ ಸಂದರ್ಭದಲ್ಲಿ ಸುರೇಶ್ ಈ ಹೇಳಿಕೆ ನೀಡಿದ್ದಾರೆ. ಇದು ಸಕತ್ ಕಿಡಿ ಹಬ್ಬಿಸಿದ್ದು, ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಎಂಪಿ ರೇಣುಕಾಚಾರ್ಯ, ಆರ್. ಅಶೋಕ್, ಸುನೀಲ್ ಕುಮಾರ್ ಅವರಂತಹ ನಾಯಕರು ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ.”ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ ಮನಸ್ಥಿತಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಡಿ. ಕೆ. ಸುರೇಶ್ ಅವರ…
ಬಸವನಬಾಗೇವಾಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಸರಕಾರ ಮಧ್ಯಂತರ ಬಜೆಟ್ ಪ್ರಧಾನಮಂತ್ರಿ ಮೋದಿಯವರು ಹೇಳಿದ ಹಾಗೆ ದೇಶದ ಭವಿಷ್ಯ ರೂಪಿಸುವ ಬಜೆಟ್ ಆಗಿದೆ. ಕಾರ್ಯಕರ್ತೆಯರಿಗೆ, ಸಹಾಯಕರಿಗೆ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್ತನ್ನು, ಪ್ರತಿ ಮನೆಗೆ 300 ಯುನಿಟ್ ಪುಕ್ಕಟೆಯಾಗಿ ಒದಗಿಸುವುದು ಬಜೆಟ್ ನ ಮುಖ್ಯ ಗುರಿಯಾಗಿದೆ. ಆಧುನಿಕ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು, ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಗಮನ ನೀಡಿರುವುದು, ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ಹಣವನ್ನು ಮೀಸಲಾಗಿರಿಸಿರುವದು ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಒತ್ತುಕೊಡಲಾಗಿದೆ. ಒಟ್ಟಾರೆಯಾಗಿ ಬಜೆಟ್ ಬಡವರ ಹಾಗೂ ಮಧ್ಯಮ ವರ್ಗದವರ ಪರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಅವರು ಮಂಡಿಸಿರುವ ಮಧ್ಯಂತರ ಬಜೆಟ್ಟು ಸಂಪೂರ್ಣ ನಿರಾಶಾದಾಯಕವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗೆ, ಧೀನದಲಿತರಿಗೆ, ಮಧ್ಯಮ ವರ್ಗದವರಿಗೆ ಯಾವುದೇ ತರಹದ ಆಶಾದಾಯಕ ಬಜೆಟ್ ಅಲ್ಲ. ಭಾರತ ದೇಶದ ಎಲ್ಲ ಜನರಿಗೂ ಸಂಪೂರ್ಣ ನಿರಾಶೆಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಎಂ ರಾಥೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಇಂದಿನ ಕೇಂದ್ರ ಸರ್ಕಾರದಿಂದ ಮಂಡನೆಯಾಗಿರುವ ಬಜೆಟ್ ಚುನಾವಣೆ ಮತ್ತು ಕಾರ್ಪೊರೇಟ್ ಮಂದಿ ಬಜೆಟ್ ಆಗಿದೆ.ರೈತ ಮತ್ತು ರೈತ ಕಾರ್ಮಿಕರಿಗೆ ಇದರಿಂದ ಏನು ಲಾಭ ಇಲ್ಲ. ಹಳ್ಳಿಗಳಿಂದ ದೇಶ ಅನ್ನೋದನ್ನು ಮತ್ತು ರೈತ ದೇಶದ ಬೆನ್ನೆಲಬು ಅನ್ನೋದನ್ನು ಮರೆತು ಕೇವಲ ಶ್ರೀಮಂತರಿಗಾಗಿ ಮಾಡಿರುವ ಬಜೆಟ್ ಇದಾಗಿದೆ. ಮಧ್ಯಮ ವರ್ಗದ ಜನರಿಗೆ ಏನು ಲಾಭ ಇಲ್ಲ. ಶಿಕ್ಷಣ ಮತ್ತು ಕೃಷಿಗೆ ಹಾಗೂ ಕೈಗಾರಿಕೆಗೆ ಏನು ಕೊಟ್ಟಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ ಕರ್ನಾಟಕ ರಾಜ್ಯಕ್ಕೆ ಯಾವುದೇ ವಿಶೇಷವಾದ ಕೊಡುಗೆ ನೀಡಿಲ್ಲ. ಇಂದಿನ ಬಜೆಟ್ ಅವೈಜ್ಞಾನಿಕ ಬಜೆಟ್ ಆಗಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಗ್ಯರಾಜ ಶ್ರೀಶೈಲ ಸೊನ್ನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಜನಗಳ ವಿಶ್ವಾಸಕ್ಕೆ ಕೇಂದ್ರ ಸರ್ಕಾರವು ಅಂತರವನ್ನು ಕಾಯ್ದುಕೊಂಡಂತಾಗಿದೆ. ತೆರಿಗೆ ವಿಷಯಗಳಲ್ಲಿ ಮೃದು ಸ್ವಭಾವದ ಧೋರಣೆಯನ್ನು ತೋರದೆ. ತಮ್ಮದೇ ಹಿಡಿತವನ್ನು ಸಾಧಿಸಿದಂತಾಗಿದೆ. ಹೊಸ ತೆರಿಗೆ ರಿಟರ್ನಿನ ಪದ್ದತಿಗಳಲ್ಲಿ ಇನ್ಸೂರೆನ್ಸ್ ನ ಉಳಿತಾಯಕ್ಕೆ ಮಹತ್ವವನ್ನು ಮತ್ತು ಅಂಗವಿಕಲರಿಗೆ ಯಾವುದೇ ಸವಲತ್ತುಗಳನ್ನು ನೀಡಿರುವುದಿಲ್ಲ. ಇದು ಖಂಡನೀಯ ಎಂದು ನ್ಯಾಯವಾದಿ ಬಿ.ಎನ್.ಹೂಗಾರ ಪ್ರತಿಕ್ರಿಯಿಸಿದ್ದಾರೆ.ವೇತನಗಳನ್ನು ಪಡೆಯುವ ವ್ಯಕ್ತಿಗಳೊಂದಿಗೆ ಸಾಮಾನ್ಯ ವ್ಯವಹಾರ ಮಾಡುವ ಪ್ರತಿಯೊಬ್ಬರಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಬಹುದಾಗಿತ್ತು ಮತ್ತು ಸಮಾನವಾಗಿ ಕಾಣಬಹುದಿತ್ತು. ಜಿಎಸ್ಟಿಯ ಕಾಯ್ದೆಗಳ ವಿಳಂಬಕ್ಕೆ ದಂಡ ಬಡ್ಡಿಗಳ ಬಗ್ಗೆ ವಿನಾಯಿತಿಗಳನ್ನು ನೀಡದಿರುವುದು ಮನುಷ್ಯತ್ವ ರಹಿತವಾಗಿದೆ. ಜಿಎಸ್ಟಿ ಕಾಯ್ದೆಯ ಹುಟ್ಟಿನಿಂದ ಮೊದಲನೇ ಎರಡು ಅಥವಾ ಮೂರು ವರ್ಷಗಳ ವಿನಾಯಿತಿ ವರ್ಷ ಎಂದು ಘೋಷಿಸಬಹುದು ಎಂಬ ನಿರೀಕ್ಷೆಯು ಸುಳ್ಳಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಇವುಗಳನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಬಹುದು ಎಂಬ ನಿರೀಕ್ಷೆಯೂ ಶುದ್ಧ ಸುಳ್ಳಾಗುತ್ತಿದೆ ಎಂದು ಹೂಗಾರ ತಿಳಿಸಿದ್ದಾರೆ.
ಇಂಡಿ: ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು’ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.ಗುರುವಾರ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಮಂಡಲ ವತಿಯಿಂದ ಮನೆ ಮನೆಗೆ ತೆರಳಿ ಗೊಡೆ ಬರಹ ಅಭಿಯಾನದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು ಎನ್ನುವುದು ಮುಖ್ಯ ಗುರಿಯಾಗಿದೆ. ಕಳೆದ 10 ವರ್ಷಗಳಿಂದ ಸುಭದ್ರ ಸರ್ಕಾರ ನೀಡುವ ಮೂಲಕ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯತ್ತಿದ್ದಾರೆ. ದೇಶದ ಉನ್ನತಿಗೆ ಶ್ರಮಿಸಿದ್ಧಾರೆ. ಆ ಮೂಲಕ ಮೋದಿ ಕೈ ಬಲಪಡಿಸಬೇಕಿದೆ. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಪಕ್ಷವನ್ನು ಸದೃಢ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಶೀಲವಂತ ಉಮರಾಣಿ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ರಾಚು ಬಡಿಗೇರ, ವಜ್ರಕಾಂತ್ ಕುಡಿಗನೂರ, ಶಂಕರ್ ಹಲವಾಯಿ, ಶ್ರೀಕಾಂತ್…
ವಿಜಯಪುರ: ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನಷ್ಟ ತಗ್ಗಿಸಿ ವೈಜ್ಞಾನಿಕ ಕ್ರಮಗಳ ಮೂಲಕ ವಾರ್ಷಿಕ ೬೦೦ ಕೋಟಿ ರೂ. ಲಾಭ ತರುವ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ಸಾರ್ವಜನಿಕರ ಮೇಲೆ ಹೊರೆ ಹೇರುವ ವಿದ್ಯುತ್ ದರ ಏರಿಕೆ ಪ್ರಸ್ತಾಪದ ಹುನ್ನಾರದಿಂದ ಹಿಂದೆ ಸರಿಯಬೇಕು ಎಂದು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.ಈ ಕುರಿತು ಜಿಲ್ಲಾಡಳಿತ ಮೂಲಕ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಇಂಧನ ಸಚಿವರಿಗೆ, ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಾಗೂ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿರುವ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ವಿದ್ಯುತ್ ದರ ಏರಿಕೆ ಕುರಿತು ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.ಸರ್ಕಾರ ಹಾಗೂ ವಿದ್ಯುತ್ಚಕ್ತಿ ಆಯೋಗ ವಿದ್ಯುತ್ ದರ ಏರಿಕೆ ಪ್ರಸ್ತಾಪದ ಬದಲು, ಕಂಪನಿಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕ್ರಮಗಳು ಹಾಗೂ ಸೋರಿಕೆ ತಡೆಗೆ ಮುಂದಾಗಬೇಕು. ಇದರಿಂದ…
ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಜನಪರವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಬಜೆಟ್ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ದೃಷ್ಟಿಕೋನ ಇರಿಸದೇ ಜನಪರ ನಿಲುವಿನ ಹಾಗೂ ದೇಶದ ಪ್ರಗತಿಯ ದೃಷ್ಟಿಯಿಂದ ಬಜೆಟ್ ಮಂಡನೆಯಾಗಿದೆ.ಯಾವ ಹೊಸ ತೆರಿಗೆಯನ್ನು ವಿಧಿಸದೇ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗಿದೆ, ಸೋಲಾರ್ ಮೂಲಕ ಮನೆ ಮನೆಗೂ ಉಚಿತವಾಗಿ ವಿದ್ಯುತ್ ಪೂರೈಸುವ ಸಂಕಲ್ಪವನ್ನು ಮಾಡಿರುವುದು ಒಂದು ಉತ್ತಮ ಹೆಜ್ಜೆಯಾಗಿದೆ. ಮಾರಕ ಕ್ಯಾನ್ಸರ್ ರೋಗದಿಂದ ತಪ್ಪಿಸಲು ಮಕ್ಕಳಿಗೆ ವಿಶೇಷ ಲಸಿಕೆ ನೀಡಲು ಮುಂದಾಗಿರುವುದು ಕೇಂದ್ರ ಸರ್ಕಾರದ ಆರೋಗ್ಯ ಕಾಳಜಿಯ ಉದಾಹರಣೆಯಾಗಿದೆ. ಒಟ್ಟಾರೆಯಾಗಿ ರೈತಪರ, ಶ್ರೀಸಾಮಾನ್ಯನ ಪರ, ದುಡಿಯುವ ವರ್ಗದ ಪರವಾದ ಬಜೆಟ್ ಮಂಡನೆಯಾಗಿದೆ ಎಂದು ಅವರು ಹೇಳಿದ್ದಾರೆ.ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸಹ ಪ್ರತಿಕ್ರಿಯೆ ನೀಡಿ, ಜನಪ್ರಿಯತೆಗಿಂತ ಜನಪರತೆಗೆ ಒತ್ತು ನೀಡಿರುವುದು ಕೇಂದ್ರ ಬಿಜೆಪಿ ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಎಲ್ಲ ವರ್ಗಗಳ ಕಲ್ಯಾಣ ಕೇಂದ್ರಿಕರಿಸಿ ಬಜೆಟ್…
