ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಜನಗಳ ವಿಶ್ವಾಸಕ್ಕೆ ಕೇಂದ್ರ ಸರ್ಕಾರವು ಅಂತರವನ್ನು ಕಾಯ್ದುಕೊಂಡಂತಾಗಿದೆ. ತೆರಿಗೆ ವಿಷಯಗಳಲ್ಲಿ ಮೃದು ಸ್ವಭಾವದ ಧೋರಣೆಯನ್ನು ತೋರದೆ. ತಮ್ಮದೇ ಹಿಡಿತವನ್ನು ಸಾಧಿಸಿದಂತಾಗಿದೆ. ಹೊಸ ತೆರಿಗೆ ರಿಟರ್ನಿನ ಪದ್ದತಿಗಳಲ್ಲಿ ಇನ್ಸೂರೆನ್ಸ್ ನ ಉಳಿತಾಯಕ್ಕೆ ಮಹತ್ವವನ್ನು ಮತ್ತು ಅಂಗವಿಕಲರಿಗೆ ಯಾವುದೇ ಸವಲತ್ತುಗಳನ್ನು ನೀಡಿರುವುದಿಲ್ಲ. ಇದು ಖಂಡನೀಯ ಎಂದು ನ್ಯಾಯವಾದಿ ಬಿ.ಎನ್.ಹೂಗಾರ ಪ್ರತಿಕ್ರಿಯಿಸಿದ್ದಾರೆ.
ವೇತನಗಳನ್ನು ಪಡೆಯುವ ವ್ಯಕ್ತಿಗಳೊಂದಿಗೆ ಸಾಮಾನ್ಯ ವ್ಯವಹಾರ ಮಾಡುವ ಪ್ರತಿಯೊಬ್ಬರಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಬಹುದಾಗಿತ್ತು ಮತ್ತು ಸಮಾನವಾಗಿ ಕಾಣಬಹುದಿತ್ತು. ಜಿಎಸ್ಟಿಯ ಕಾಯ್ದೆಗಳ ವಿಳಂಬಕ್ಕೆ ದಂಡ ಬಡ್ಡಿಗಳ ಬಗ್ಗೆ ವಿನಾಯಿತಿಗಳನ್ನು ನೀಡದಿರುವುದು ಮನುಷ್ಯತ್ವ ರಹಿತವಾಗಿದೆ. ಜಿಎಸ್ಟಿ ಕಾಯ್ದೆಯ ಹುಟ್ಟಿನಿಂದ ಮೊದಲನೇ ಎರಡು ಅಥವಾ ಮೂರು ವರ್ಷಗಳ ವಿನಾಯಿತಿ ವರ್ಷ ಎಂದು ಘೋಷಿಸಬಹುದು ಎಂಬ ನಿರೀಕ್ಷೆಯು ಸುಳ್ಳಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಇವುಗಳನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಬಹುದು ಎಂಬ ನಿರೀಕ್ಷೆಯೂ ಶುದ್ಧ ಸುಳ್ಳಾಗುತ್ತಿದೆ ಎಂದು ಹೂಗಾರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

