Author: editor.udayarashmi@gmail.com

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ದಾವಣಗೆರೆಯಲ್ಲಿ ಎರಡು ದಿನ ಆಯೋಜಿಸಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅರ್ಥಪೂರ್ಣವಾಗಿ ತೆರೆಕಂಡಿದೆ. ಅದಕ್ಕಾಗಿ ದಾವಣಗೆರೆ ಜಿಲ್ಲಾ ಘಟಕ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು.ಮಧ್ಯ ಕರ್ನಾಟಕದ ದೇವನಗರಿ, ಬೆಣ್ಣೆ ನಗರಿ ಎಂದೇ ಹೆಸರುವಾಸಿಯಾದ ದಾವಣಗೆರೆಗೆ ನಾಡಿನಾದ್ಯಂತ ಐದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಬಂದು ನಮ್ಮ ಮನೆಯ ಕಾರ್ಯಕ್ರಮ ಎನ್ನುವಷ್ಟರ ಮಟ್ಟಿಗೆ ಸಮ್ಮೇಳನದ‌ ಮೆರಗು ಹೆಚ್ಚಿಸಿದ್ದು ಅವಿಸ್ಮರಣೀಯ.ಕೆಯುಡಬ್ಲ್ಯುಜೆ ವ್ಯಾಪ್ತಿ ಮತ್ತು ಶಕ್ತಿ ಇಮ್ಮಡಿಯಾಗಿರುವುದನ್ನು ಸಮ್ಮೇಳನ ಮತ್ತೊಮ್ಮೆ ನಿರೂಪಿಸಿದೆ.ಎರಡು ದಿನಗಳಲ್ಲಿ ನಡೆದ ನಾಲ್ಕು ವಿಚಾರಗೋಷ್ಠಿಗಳು, ಸಂವಾದ ಸುದ್ದಿ ಮನೆಗೆ ಹೊಸ ಮುನ್ನೋಟವನ್ನು ನೀಡಿದೆ. ಸಾಧಕ ಬಾಧಕಗಳ ಬಗ್ಗೆ ವಿಚಾರ ಮಂಥನವಾಗಿರುವುದು ಸುದ್ದಿ ಮನೆಗೆ ಪ್ರಜ್ವಲವಾದ ಬೆಳಕು ನೀಡಿದೆ.ನಾನಾ ಧೋರಣೆ ಹೊಂದಿದವರನ್ನೆಲ್ಲ ಒಂದು ವೇದಿಕೆಗೆ ತರುವುದು ಮತ್ತು ಎಲ್ಲರನ್ನೊಳಗೊಳ್ಳುವ ಸಮ್ಮೇಳನವನ್ನಾಗಿ ಸಂಘಟಿಸುವುದು ನಿಜಕ್ಕೂ ಸವಾಲು. ಹಲವು ವೈರುಧ್ಯಗಳ‌ ನಡುವೆ ಆ ಸವಾಲುಗಳನ್ನು ದಾಟಿರುವುದು ಸಮಾಧಾನ ಸಂಗತಿ.ಸಮ್ಮೇಳನ ಹಬ್ಬದ ಸಡಗರದಲ್ಲಿ ನಡೆಯುವಂತೆ ಸಂಘಟಿಸಲುಶ್ರಮಿಸಿದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್…

Read More

ಕಥೆ- ಮಂಡ್ಯ ಮ.ನಾ. ಉಡುಪ ಅದೊಂದು ಕಾಲ. ಆಗ ಕಾಡಿನ ಪ್ರಾಣಿಗಳೆಲ್ಲಾ ಮನುಷ್ಯರಂತೆ ಮಾತಾಡ್ತಾಯಿದ್ವಂತೆ. ಕಾಡಂಚಿನಲ್ಲಿದ್ದ ಮನೆಯೊಂದರ ಕೊಟ್ಟಿಗೆಯಲ್ಲಿದ್ದ ಹಸುವಿನ ಚಿಕ್ಕ ಕರುವಿಗೆ ಅದಕ್ಕೆ ಆಗ ತಾನೆ ಮೂಡುತಿದ್ದ ಅದರ ಕೊಂಬಗಳನ್ನು ನೋಡಿದಾಗೆಲ್ಲ ಜಂಬ ಬರುತಿತ್ತು. ತಾನಾಗಲೇ ದೊಡ್ಡವನೆಂದು ಜಂಬದಿಂದ ಮೆರೆದಿತ್ತು.ಅದೊಂದು ಮಳೆಗಾಲದ ಸಂಜೆ, ಹೊರಗಡೆಯಿಂದ ಹುಲ್ಲು ಮೇಯ್ದು ಎಲ್ಲಾ ಹಸುಗಳು ಕೊಟ್ಟಿಗೆಯಕಡೆ ಹೊರಟವು. ತಾಯಿ ಎಷ್ಟೇ ಕರೆದರೂ ಕರು ಕೇಳಿಸದಂತೆ ನಟಿಸಿತು. ಕೋಡುಮೂಡುತ್ತಿರುವ ಈ ಕರು. ಸ್ವಲ್ಪ ಹೊತ್ತಿನ ನಂತರ ತಲೆ ಎತ್ತಿ ನೋಡುತ್ತೆ, ಎಲ್ಲ ಹಸುಗಳು ಮನೆಗೆ ಹೊರಟುಹೋಗಿದ್ದವು. ತಾನೊಂದೇ ಹಿಂದೆ ಇರುವುದು ಅರಿವಾಯ್ತು. ಸೂರ್ಯ ಮುಳುಗು ಹೊತ್ತಾಗಿತ್ತು. ಹುಲಿಯ ಭಯದಿಂದ ಆ ಕರುವು ತರತರನೆ ನಡುಗಲಾರಂಭಿಸಿತು. ಭಯದಿಂದಲೇ ಅಂಬಾ ಅಂಬಾ ಕೂಗುತ್ತಾ ಮನೆಯದಾರಿ ಹಿಡಿಯಿತು. ಕಾಡ ದಾರಿಯ ಗಿಡಗಳ ಪೊದೆಯಿಂದ ಸಿಂಹವೊಂದು ದುತ್ತನೆ ಎದುರಿಗೆ ಬಂದು ನಿಂತಾಗ ಇದಕ್ಕೆ ತನ್ನ ಜೀವದ ಮೇಲಿನ ಆಸೆಯನ್ನು ಬಿಟ್ಟುಬಿಟ್ಟಿತು. ಆದರೂ ಸ್ವಲ್ಪ ದೈರ್ಯ ಮಾಡಿ, ನಡುಕದ ದನಿಯಲ್ಲಿ,” ಸಿಂಹರಾಜ ನನ್ನನ್ನು…

Read More

ವಿಜಯಪುರ: ಸತತ ಪರಿಶ್ರಮ, ಶ್ರದ್ಧೆ ಮತ್ತು ಶಿಸ್ತಿನಿಂದ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಬಹುದು. ಇಲ್ಲಿ ಯಾವುದೇ ಶಾರ್ಟ್ ಕಟ್ ಇರುವುದಿಲ್ಲ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಮತ್ತು ಖ್ಯಾತ ವೈದ್ಯ ದಿ. ಡಾ. ಸಿ. ಆರ್. ಬಿದರಿಯವರ ಪುಣ್ಯಸ್ಮರಣೆ ಅಂಗವಾಗಿ ಇಂದು ರವಿವಾರ ಆಯೋಜಿಸಲಾಗಿದ್ದ ಬಿ. ಎಲ್. ಡಿ. ಇ ಸಂಸ್ಥೆಯ 9ನೇ ಅಂತರ ಶಾಲಾ ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡಾಪಟುಗಳು ತಾವು ಇಷ್ಟಪಡುವ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದರೆ ಕಠಿಣ ಪರಿಶ್ರಮ, ಸಮರ್ಪಣೆ ಮನೋಭಾವ, ಕ್ರೀಡಾಸ್ಪೂರ್ತಿ ಮುಖ್ಯವಾಗಿದೆ. ಇಲ್ಲಿ ಯಾವುದೇ ಅಡ್ಡಮಾರ್ಗಗಳ ಮೂಲಕ ಸಾಧನೆ ಮಾಡಲು ಸಾಧ್ಯವಿಲ್ಲ. ಶ್ರಮಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಫೆಬ್ರವರಿ 23ರಿಂದ ಬೆಂಗಳೂರಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯೂಪಿಎಲ್) ಪ್ರಾರಂಭವಾಗುತ್ತಿದೆ. ವಿಜಯಪುರ ಜಿಲ್ಲೆಯ ಜನ ನನಗೆ ಬೆಂಬಲ ನೀಡಬೇಕು ಎಂದು…

Read More

ಆಲಮಟ್ಟಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ರೈತರು ಶನಿವಾರ ಮನವಿ ಅರ್ಪಿಸಿದರು.ಅಧಿಕಾರಿಗಳ ಸಭೆಯ ನಂತರ ರೈತರಿದ್ದ ಸ್ಥಳಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರೈತರ ಮನವಿ ಸ್ವೀಕರಿಸಿದರು.ರಾಜ್ಯ ಬಜೆಟ್ ನಲ್ಲಿ ಕೆಬಿಜೆಎನ್ ಎಲ್ ಗೆ ಹೆಚ್ಚಿನ ಅನುದಾನ ಒದಗಿಸಬೇಕು, ಯುಕೆಪಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಪ್ರವಾಸಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಆಲಮಟ್ಟಿಯನ್ನು ಪ್ರವಾಸಿ ತಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಈ ಭಾಗದಲ್ಲಿ ಕೃಷ್ಣಾ ನದಿಯಿದೆ, ನೀರು ಸಾಕಷ್ಟಿದೆ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರವೂ ಇದೆ, ವಿದ್ಯುತ್ ಸೌಕರ್ಯವಿದೆ, ಹೀಗಾಗಿ ಇಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು, ಆಲಮಟ್ಟಿ ಯೋಜನೆಯ ಸಂತ್ರಸ್ತರ ಮಕ್ಕಳಿಗೆ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಬೇಕು ಎಂದರು. ಅಧಿಕಾರಿಗಳು ರೈತರ ಯಾವುದೇ ಮಾತಿಗೂ ಸರಿಯಾಗಿ ಸ್ಪಂದಿಸುವುದಿಲ್ಲ ಏರು ಧ್ವನಿಯಲ್ಲಿ ಮಾತನಾಡುತ್ತಾರೆ ಎಂದು ರೈತರು ಆರೋಪಿಸಿದರು.ಈ ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ಇದೇ ತಿಂಗಳು 12 ಇಲ್ಲವೇ…

Read More

ಇಂಡಿ: ಮರಗೂರದ ಗ್ರಾಮದ ಭೀಮಾಶಂಕರ ಕಾರ್ಖಾನೆ ಚುನಾವಣೆಗೆ ಒಟ್ಟು ೪೬ ಜನ ನಾಮಪತ್ರ ಸಲ್ಲಿಸಿರುವುದಾಗಿ ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ನಾಮ ಪತ್ರ ಸಲ್ಲಿಸಲು ಫೆ.೩ ಕೊನೆಯ ದಿನವಾಗಿತ್ತು. ಇಂದು ಕಬ್ಬು ಬೆಳೆಗಾರ ಸದಸ್ಯರ ಮತಕ್ಷೇತ್ರಕ್ಕೆ ೯ ಅಭ್ಯರ್ಥಿಗಳು, ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಮೂವರು ಮತ್ತು ಕಬ್ಬು ಬೆಳೆಗಾರರಲ್ಲದ ಮತ ಕ್ಷೇತ್ರಕ್ಕೆ ಒಬ್ಬರು ನಾಮ ಪತ್ರ ಸಲ್ಲಿಸಿದ್ದಾರೆ.ಚುನಾವಣೆ ಕಣದಲ್ಲಿ ಇಂಡಿ ಮತಕ್ಷೇತ್ರದ ಶಾಸಕರು ಮತ್ತು ಭೀಮಾ ಶಂಕರ ಸಕ್ಕರೆ ಅಧ್ಯಕ್ಷರಾದ ಯಶವಂತಗೌಡ ಪಾಟೀಲ, ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ಶಾಸಕ ಡಾ|| ಸಾರ್ವಭೌಮ ಬಗಲಿ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು.

Read More

ಬಸವನಬಾಗೇವಾಡಿ: ಹನ್ನೆರಡನೆಯ ಶತಮಾನದಲ್ಲಿ ವಚನದ ಮೂಲಕ ಸಮಾನತೆಯ ಕ್ರಾಂತಿಯನ್ನು ಮಾಡಿದ ವಿಶ್ವ ಗುರು ಬಸವಣ್ಣನವರ ಜನ್ಮ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕೆಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ಪಟ್ಟಣದ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಅವರು ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಲು ಸಚಿವ ಸಂಪುಟದಲ್ಲಿ ಸಭೆಯು ಘೋಷಣೆ ಮಾಡಿದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಸಚಿವರನ್ನು ಅಭಿನಂದಿಸಲು ಸಮಸ್ತ ಬಸವಾಭಿಮಾನಿಗಳು ಸಿದ್ದರಾಗಿದ್ದೇವೆ. ಬೃಹತ್ ಅಭಿನಂದನಾ ಸಮಾವೇಶವನ್ನು ಏರ್ಪಡಿಸಲು ತಾವುಗಳು ಒಂದು ದಿನಾಂಕವನ್ನು ನಿಗದಿಪಡಿಸಿ ಸಮಯವನ್ನು ಕೊಟ್ಟರೆ ನಾವು ಒಂದು ಲಕ್ಷದವರೆಗೆ ಬಸವಭಕ್ತರನ್ನೂ ಸೇರಿಸಿ ಬೃಹತ್ ಸಮಾವೇಶ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ,ಶಾಸಕ ಅಶೋಕ ಮನಗೂಳಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಹರೀಶ ಅಗರವಾಲ, ಅನಿಲ ಅಗರವಾಲ, ಬ್ಲಾಕ್ ಅಧ್ಯಕ್ಷ ಸುರೇಶ ಹರಿವಾಳ, ಬಸವರಾಜ…

Read More

ಬಸವನಬಾಗೇವಾಡಿ: ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಶನಿವಾರ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಜಯಘೋಷದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.ಕಲಬುರಗಿಯಿಂದ ರಸ್ತೆ ಮಾರ್ಗವಾಗಿ ತಾಲೂಕಿನ ದಿಂಡವಾರ ಗ್ರಾಮದ ಮೂಲಕ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಪ್ರವೇಶಿಸಿದ ಡಿ.ಕೆ ಶಿವಕುಮಾರ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ವಚನ ಶಿಲಾ ಮಂಟಪಕ್ಕೆ ಭೇಟಿ ದರ್ಶನ ಪಡೆದುಕೊಂಡ ನಂತರ ಸನ್ಮಾನ ಸ್ವೀಕರಿಸಿದರು.ಬಸವನನಬಾಗೇವಾಡಿ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರನ ದರ್ಶನ ಪಡೆದರು.ಇದೇ ಸಂದರ್ಭದಲ್ಲಿ ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಮೂಲನಂದೀಶ್ವರನಿಗೆ ಹಣೆ ಹಚ್ಚಿ ನಮಸ್ಕರಿಸಿರುವುದು ವಿಶೇಷ ಗಮನ ಸೆಳೆಯಿತು.ಮೂಲ ನಂದೀಶ್ವರನ ದರ್ಶನ ಪಡೆದ ಅವರು ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮನಗೂಳಿ ಹಿರೇಮಠದ ಕಾರ್ಯಕ್ರಮಕ್ಕೆ ತೆರಳಿದರು.ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಸಚಿವ ಶಿವಾನಂದ ಪಾಟೀಲ, ವಿಧಾನಪರಿಷತ್ತಿನ ಸದಸ್ಯ…

Read More

ಲಿಂ.ಶಿವಕುಮಾರ ಸ್ವಾಮೀಜಿಗೂ ’ಭಾರತ ರತ್ನ’ ಗೌರವ ಸಿಗಲಿ ವಿಜಯಪುರ: “ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವುದನ್ನು ಸ್ವಾಗತಿಸುತ್ತೇವೆ. ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಆದರೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳಾದ ಲಿಂಗೈಕ್ಯ ಶಿವಕುಮಾರ ಸ್ವಾಮಿಜಿಗಳಿಗೂ ಭಾರತ ರತ್ನ ಗೌರವ ನೀಡಬೇಕು ಎಂಬುದು ನಮ್ಮ ಆಗ್ರಹ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.ಶನಿವಾರ ಬಸವನ ಬಾಗೇವಾಡಿಯಲ್ಲಿ ಬಸವಣ್ಣ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳು ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು ಹೀಗೆ;“ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಹೆಸರಾಗಿದ್ದವರು ಶಿವಕುಮಾರ ಸ್ವಾಮೀಜಿಗಳು. ಅವರಿಗೆ ಈ ಗೌರವ ಸಲ್ಲಬೇಕು ಎಂಬುದು ನಮ್ಮ ಒತ್ತಾಯ. ಈ ಬಗ್ಗೆ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿತ್ತು. ಈ ವಿಚಾರದಲ್ಲಿ ತೀರ್ಮಾನ ಅವರಿಗೆ ಬಿಟ್ಟಿದೆ” ಎಂದು ಪ್ರತಿಕ್ರಿಯಿಸಿದರು.

Read More

ಸಂಗನಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ & ಧರ್ಮ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ಪಂಚಪೀಠಗಳು ಮತ್ತು ವಿರಕ್ತಮಠಗಳು ಸೇರಿಕೊಂಡು ಲಿಂಗಾಯತ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಮೀಸಲಾತಿ ಪಡೆಯುವಂತಾಗಬೇಕು. ಇದಕ್ಕೆ ರಂಭಾಪುರಿ ಜಗದ್ಗುರುಗಳು ನೇತೃತ್ವ ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಇಂದು ಶನಿವಾರ ಸಂಸ್ಥಾನ ಹಿರೇಮಠ ಆಯೋಜಿಸಿದ್ದ ಶತಾಯುಷಿ ಶ್ರೀ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ ಹಾಗೂ ಉಭಯ ಶ್ರೀಗಳ ಧ್ವನಿ ಸುರುಳಿ ಬಿಡುಗಡೆ ಮತ್ತು ಸಂಗನಬಸವ ಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಧರ್ಮ ಸಭೆಯಲ್ಲಿ ಪಾಲ್ಗೊಂಡ ಸಚಿವರು, ಭಕ್ತರ ದೈವ ಅಭಿನವ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದರು.ಪಂಚಪೀಠಗಳು ಮತ್ತು ವಿರಕ್ತಮಠಗಳು ಲೋಪದೋಷಗಳನ್ನು ಸರಿಪಡಿಸಲು ಲಿಂಗಾಯಿತ ಸಮುದಾಯದ ಉಪಪಂಗಡಗಳನ್ನು ಒಗ್ಗೂಡಿಸಬೇಕು. ಎಲ್ಲ ಉಪಪಂಗಡಗಳಿಗೆ ರಾಜ್ಯದಲ್ಲಿ 2ಎ ಮತ್ತು ಕೇಂದ್ರದಲ್ಲಿ…

Read More