ಆಲಮಟ್ಟಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ರೈತರು ಶನಿವಾರ ಮನವಿ ಅರ್ಪಿಸಿದರು.
ಅಧಿಕಾರಿಗಳ ಸಭೆಯ ನಂತರ ರೈತರಿದ್ದ ಸ್ಥಳಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರೈತರ ಮನವಿ ಸ್ವೀಕರಿಸಿದರು.
ರಾಜ್ಯ ಬಜೆಟ್ ನಲ್ಲಿ ಕೆಬಿಜೆಎನ್ ಎಲ್ ಗೆ ಹೆಚ್ಚಿನ ಅನುದಾನ ಒದಗಿಸಬೇಕು, ಯುಕೆಪಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಪ್ರವಾಸಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಆಲಮಟ್ಟಿಯನ್ನು ಪ್ರವಾಸಿ ತಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಈ ಭಾಗದಲ್ಲಿ ಕೃಷ್ಣಾ ನದಿಯಿದೆ, ನೀರು ಸಾಕಷ್ಟಿದೆ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರವೂ ಇದೆ, ವಿದ್ಯುತ್ ಸೌಕರ್ಯವಿದೆ, ಹೀಗಾಗಿ ಇಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು, ಆಲಮಟ್ಟಿ ಯೋಜನೆಯ ಸಂತ್ರಸ್ತರ ಮಕ್ಕಳಿಗೆ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಬೇಕು ಎಂದರು. ಅಧಿಕಾರಿಗಳು ರೈತರ ಯಾವುದೇ ಮಾತಿಗೂ ಸರಿಯಾಗಿ ಸ್ಪಂದಿಸುವುದಿಲ್ಲ ಏರು ಧ್ವನಿಯಲ್ಲಿ ಮಾತನಾಡುತ್ತಾರೆ ಎಂದು ರೈತರು ಆರೋಪಿಸಿದರು.
ಈ ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ಇದೇ ತಿಂಗಳು 12 ಇಲ್ಲವೇ 13 ರಂದು ಈ ಭಾಗದ ಶಾಸಕರ ಜತೆ ಸಭೆ ನಡೆಸುವೆ ಎಂದು ಡಿ.ಕೆ.ಶಿವಕುಮಾರ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೆನೆಯ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಬಾಗೇವಾಡಿ, ತಾಲ್ಲೂಕು ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ತಿರುಪತಿ ಬಂಡಿವಡ್ಡರ, ಆರ್.ಎಸ್. ಉಕ್ಕಲಿ, ಶರಣಗೌಡ ಪಾಟೀಲ, ಬಸವರಾಜ ದಂಡಿನ, ಬಿ.ಎಸ್. ಪಾಟೀಲ, ಬಸವರಾಜ ಸಾತಿಹಾಳ ಮತ್ತೀತರರು ಇದ್ದರು.
ಮನವಿ ಸ್ವೀಕರಿಸಲು ತಡವಾಗಿದಕ್ಕೆ ಆಕ್ರೋಶಗೊಂಡ ರೈತರು ಧಿಕ್ಕಾರ ಹಾಗೂ ಘೋಷಣೆ ಕೂಗಿದರು.
ಡಿಕೆಶಿಗೆ ಮನವಿ ಅರ್ಪಿಸಿದ ಗುತ್ತಿಗೆದಾರರು:
ಕೆಬಿಜೆಎನ್ ಎಲ್ ಹಾಗೂ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆಯಲ್ಲಿ ಕರೆದ ಟೆಂಡರ್ ಗಳ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳುಗಳು ಕಳೆದಿವೆ. ಆದರೆ ಅನುದಾನವಿಲ್ಲದೇ ಬಿಲ್ ಪಾವತಿಯಾಗುತ್ತಿಲ್ಲ, ಇದರಿಂದ ಗುತ್ತಿಗೆದಾರರಿಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದು ಗುತ್ತಿಗೆದಾರರು ದೂರಿದರು.
ಕಳೆದ ಎರಡು ವರ್ಷದಿಂದ ಕೆಬಿಜೆಎನ್ ಎಲ್ ಕ್ಕೆ ಸಮರ್ಪಕ ಅನುದಾನವಿಲ್ಲದೆ ಯಾವುದೇ ಹೊಸ ಕಾಮಗಾರಿಗಳ ಟೆಂಡರ್ ಕರೆದಿಲ್ಲ, ಹೀಗಾಗಿ ಗುತ್ತಿಗೆದಾರರಿಗೆ ಕೆಲಸವಿಲ್ಲದೆ ಅಲೆಯುವಂತಾಗಿದೆ. ನಿಗಮಕ್ಕೆ ಆರ್ಥಿಕ ಅನುದಾನ ನೀಡಬೇಕು ಎಂದರು.
2022-23 ನೇ ಸಾಲಿನಲ್ಲಿ ಕರೆಯಲಾದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅರ್ಧಕ್ಕೆ ನಿಂತಿದ್ದು, ಅವುಗಳನ್ನು ಪೂರ್ಣಗೊಳಿಸಿ ಕಾಮಗಾರಿ ನಿರ್ವಹಿಸಲು ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲಕಾಜಪ್ಪ ಮೇಟಿ, ಶಿವು ಗದಿಗೆಪ್ಪಗೋಳ, ಬಸವರಾಜ ದಂಡಿನ, ವೈ.ವೈ. ಬಿರಾದಾರ, ಅಂದಾನಯ್ಯ ಮುಷ್ಠಿಗೇರಿ, ಟಿ.ಎಸ್. ಅಫಜಲಪುರ, ವಿನೋದ ಉಳ್ಳಾಗಡ್ಡಿ, ಯಾಕೂಬ್ ಮುದ್ನಾಳ, ಹನುಮಂತ ಪೂಜಾರಿ, ಮಹಾಂತೇಶ ಡೆಂಗಿ, ವೆಂಕಟೇಶ ನಾಯಕ, ಮುಕ್ತಮ್ ಮಕಾನದಾರ್, ಎಲ್.ಎಚ್. ಗಡ್ಡಿ ಯೂಸುಫ್ ಆಲಮಟ್ಟಿ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

