Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಾಡಿನ ಪತ್ರಕರ್ತರಿಗೆ ಧನ್ಯವಾದ..
(ರಾಜ್ಯ ) ಜಿಲ್ಲೆ

ನಾಡಿನ ಪತ್ರಕರ್ತರಿಗೆ ಧನ್ಯವಾದ..

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ದಾವಣಗೆರೆಯಲ್ಲಿ ಎರಡು ದಿನ ಆಯೋಜಿಸಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅರ್ಥಪೂರ್ಣವಾಗಿ ತೆರೆಕಂಡಿದೆ. ಅದಕ್ಕಾಗಿ ದಾವಣಗೆರೆ ಜಿಲ್ಲಾ ಘಟಕ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು.
ಮಧ್ಯ ಕರ್ನಾಟಕದ ದೇವನಗರಿ, ಬೆಣ್ಣೆ ನಗರಿ ಎಂದೇ ಹೆಸರುವಾಸಿಯಾದ ದಾವಣಗೆರೆಗೆ ನಾಡಿನಾದ್ಯಂತ ಐದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಬಂದು ನಮ್ಮ ಮನೆಯ ಕಾರ್ಯಕ್ರಮ ಎನ್ನುವಷ್ಟರ ಮಟ್ಟಿಗೆ ಸಮ್ಮೇಳನದ‌ ಮೆರಗು ಹೆಚ್ಚಿಸಿದ್ದು ಅವಿಸ್ಮರಣೀಯ.
ಕೆಯುಡಬ್ಲ್ಯುಜೆ ವ್ಯಾಪ್ತಿ ಮತ್ತು ಶಕ್ತಿ ಇಮ್ಮಡಿಯಾಗಿರುವುದನ್ನು ಸಮ್ಮೇಳನ ಮತ್ತೊಮ್ಮೆ ನಿರೂಪಿಸಿದೆ.
ಎರಡು ದಿನಗಳಲ್ಲಿ ನಡೆದ ನಾಲ್ಕು ವಿಚಾರಗೋಷ್ಠಿಗಳು, ಸಂವಾದ ಸುದ್ದಿ ಮನೆಗೆ ಹೊಸ ಮುನ್ನೋಟವನ್ನು ನೀಡಿದೆ. ಸಾಧಕ ಬಾಧಕಗಳ ಬಗ್ಗೆ ವಿಚಾರ ಮಂಥನವಾಗಿರುವುದು ಸುದ್ದಿ ಮನೆಗೆ ಪ್ರಜ್ವಲವಾದ ಬೆಳಕು ನೀಡಿದೆ.
ನಾನಾ ಧೋರಣೆ ಹೊಂದಿದವರನ್ನೆಲ್ಲ ಒಂದು ವೇದಿಕೆಗೆ ತರುವುದು ಮತ್ತು ಎಲ್ಲರನ್ನೊಳಗೊಳ್ಳುವ ಸಮ್ಮೇಳನವನ್ನಾಗಿ ಸಂಘಟಿಸುವುದು ನಿಜಕ್ಕೂ ಸವಾಲು. ಹಲವು ವೈರುಧ್ಯಗಳ‌ ನಡುವೆ ಆ ಸವಾಲುಗಳನ್ನು ದಾಟಿರುವುದು ಸಮಾಧಾನ ಸಂಗತಿ.
ಸಮ್ಮೇಳನ ಹಬ್ಬದ ಸಡಗರದಲ್ಲಿ ನಡೆಯುವಂತೆ ಸಂಘಟಿಸಲು
ಶ್ರಮಿಸಿದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ನೇತೃತ್ವದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ವಿಶೇಷ ಧನ್ಯವಾದಗಳು.
ಊಟ, ತಿಂಡಿ ಜೊತೆಗೆ
ಆತಿಥ್ಯ ವಹಿಸುವುದರಲ್ಲಿ ದಾವಣಗೆರೆ ಎತ್ತಿದ ಕೈ ಎನ್ನುವುದನ್ನು ಬೆಣ್ಣೆ ನಗರಿಯ ಸಮ್ಮೇಳನ ಮತ್ತೊಮ್ಮೆ ನಿರೂಪಿಸಿದೆ. ಅದಕ್ಕಾಗಿ ಸಂಘದ ಪ್ರತಿ ಸದಸ್ಯರಿಗೂ, ತೆರೆ ಮರೆಯಲ್ಲಿ ಸಹಕರಿಸಿದವರಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಾರ್ಗದರ್ಶನ ಮಾಡಿ ಕೊನೆಯ ತನಕ ಬೆಂಬಲವಾಗಿ ನಿಂತವರಿಗೆ, ಅದಕ್ಕಿಂತಲೂ ಹೆಚ್ಚಾಗಿ ಉತ್ಸಾಹದಿಂದ ಎರಡೂ ದಿನ ಸಕ್ರಿಯವಾಗಿ ಸಮ್ಮೇಳನದಲ್ಲಿ ಭಾಗಿಯಾಗಿದ್ದ ತಮಗೆಲ್ಲರಿಗೂ ಅಭಿನಂದನೆಗಳು. ಇದರಾಚೆಗೂ ಲೋಪದೋಷಗಳಾಗಿದ್ದರೆ ಅದಕ್ಕೆ ಕ್ಷಮೆ ಇರಲಿ.
ಮುಂದಿನ ರಾಜ್ಯ ಸಮ್ಮೇಳನದ‌ ತೇರು ಎಳೆಯುವ ಸಂಕಲ್ಪ ತೊಟ್ಟಿರುವ ತುಮಕೂರು ಜಿಲ್ಲೆ ಎಲ್ಲವನ್ನೂ ಮೀರುವ ಹಾಗೆ ಸಮ್ಮೇಳನ ಮಾಡಲಿ ಎಂದು ನಿರೀಕ್ಷಿಸೋಣ.
ಸಮ್ಮೇಳನ ಅರ್ಥಪೂರ್ಣವಾಗಿಸಿದ ನಿಮ್ಮೆಲ್ಲರಿಗೂ, ದಾವಣಗೆರೆ ಜಿಲ್ಲಾ ಘಟಕಕ್ಕೂ ಮತ್ತೊಮ್ಮೆ
ಧನ್ಯವಾದಗಳು.

– ಶಿವಾನಂದ ತಗಡೂರು
ರಾಜ್ಯಾಧ್ಯಕ್ಷರು, ಕೆಯುಡಬ್ಲ್ಯೂಜೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

ಅಂಬರ ಚುಂಬಿತ ಪ್ರೇಮ ಪ್ರೇಮ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ
    In (ರಾಜ್ಯ ) ಜಿಲ್ಲೆ
  • ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ
    In (ರಾಜ್ಯ ) ಜಿಲ್ಲೆ
  • ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ
    In (ರಾಜ್ಯ ) ಜಿಲ್ಲೆ
  • ಅಂಬರ ಚುಂಬಿತ ಪ್ರೇಮ ಪ್ರೇಮ
    In ವಿಶೇಷ ಲೇಖನ
  • ಅಗ್ನಿ ಅವಘಡ: ರೂ.50 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಯ ಪ್ರಾರಂಭಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಇಡ್ಲಿ-ವಡೆ ಜೊತೆಗೆ ಗ್ಯಾಸ್​ಗೂ ಬಿಲ್! :ಭಾರಿ ವೈರಲ್
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ
    In (ರಾಜ್ಯ ) ಜಿಲ್ಲೆ
  • ಸಿಲಿಂಡರ್ ಸ್ಟಾಕ್ ಇಲ್ಲ :ಸಚಿವ ಮುನಿಯಪ್ಪ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.