ಬಸವನಬಾಗೇವಾಡಿ: ಹನ್ನೆರಡನೆಯ ಶತಮಾನದಲ್ಲಿ ವಚನದ ಮೂಲಕ ಸಮಾನತೆಯ ಕ್ರಾಂತಿಯನ್ನು ಮಾಡಿದ ವಿಶ್ವ ಗುರು ಬಸವಣ್ಣನವರ ಜನ್ಮ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕೆಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಅವರು ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಲು ಸಚಿವ ಸಂಪುಟದಲ್ಲಿ ಸಭೆಯು ಘೋಷಣೆ ಮಾಡಿದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಸಚಿವರನ್ನು ಅಭಿನಂದಿಸಲು ಸಮಸ್ತ ಬಸವಾಭಿಮಾನಿಗಳು ಸಿದ್ದರಾಗಿದ್ದೇವೆ. ಬೃಹತ್ ಅಭಿನಂದನಾ ಸಮಾವೇಶವನ್ನು ಏರ್ಪಡಿಸಲು ತಾವುಗಳು ಒಂದು ದಿನಾಂಕವನ್ನು ನಿಗದಿಪಡಿಸಿ ಸಮಯವನ್ನು ಕೊಟ್ಟರೆ ನಾವು ಒಂದು ಲಕ್ಷದವರೆಗೆ ಬಸವಭಕ್ತರನ್ನೂ ಸೇರಿಸಿ ಬೃಹತ್ ಸಮಾವೇಶ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ,ಶಾಸಕ ಅಶೋಕ ಮನಗೂಳಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಹರೀಶ ಅಗರವಾಲ, ಅನಿಲ ಅಗರವಾಲ, ಬ್ಲಾಕ್ ಅಧ್ಯಕ್ಷ ಸುರೇಶ ಹರಿವಾಳ, ಬಸವರಾಜ ರಾಯಗೊಂಡ, ಜಟ್ಟಿಂಗರಾಯ ಮಾಲಗಾರ, ಮನೋಜ ಅಗರವಾಲ, ರವಿ ಬಾವಿಕಟ್ಟಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

