ಬಸವನಬಾಗೇವಾಡಿ: ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಶನಿವಾರ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಜಯಘೋಷದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಕಲಬುರಗಿಯಿಂದ ರಸ್ತೆ ಮಾರ್ಗವಾಗಿ ತಾಲೂಕಿನ ದಿಂಡವಾರ ಗ್ರಾಮದ ಮೂಲಕ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಪ್ರವೇಶಿಸಿದ ಡಿ.ಕೆ ಶಿವಕುಮಾರ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ವಚನ ಶಿಲಾ ಮಂಟಪಕ್ಕೆ ಭೇಟಿ ದರ್ಶನ ಪಡೆದುಕೊಂಡ ನಂತರ ಸನ್ಮಾನ ಸ್ವೀಕರಿಸಿದರು.
ಬಸವನನಬಾಗೇವಾಡಿ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರನ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಮೂಲನಂದೀಶ್ವರನಿಗೆ ಹಣೆ ಹಚ್ಚಿ ನಮಸ್ಕರಿಸಿರುವುದು ವಿಶೇಷ ಗಮನ ಸೆಳೆಯಿತು.
ಮೂಲ ನಂದೀಶ್ವರನ ದರ್ಶನ ಪಡೆದ ಅವರು ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮನಗೂಳಿ ಹಿರೇಮಠದ ಕಾರ್ಯಕ್ರಮಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಸಚಿವ ಶಿವಾನಂದ ಪಾಟೀಲ, ವಿಧಾನಪರಿಷತ್ತಿನ ಸದಸ್ಯ ಪ್ರಕಾಶ ರಾಠೋಡ, ಶಾಸಕ ಅಶೋಕ ಮನಗೂಳಿ, ವಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಕಾಂಗ್ರೆಸ ಜಿಲ್ಲಾಧ್ಯಕ್ಷ ರಾಜು ಆಲಗೂರ, ಮುಖಂಡರಾದ ಬಸವರಾಜ ಗೊಳಸಂಗಿ, ಲೋಕನಾಥ ಅಗರವಾಲ, ಬಸಣ್ಣ ದೇಸಾಯಿ, ಭರತು ಅಗರವಾಲ, ಶೇಖರ ಗೊಳಸಂಗಿ, ವಿದ್ಯಾರಾಣಿ ತುಂಗಳ, ಜಟ್ಟಿಂಗರಾಯ ಮಾಲಗಾರ, ರವಿ ಚಿಕ್ಕೊಂಡ, ರವಿ ರಾಠೋಡ ಬಸವರಾಜ ಹಾರಿವಾಳ, ಮಲ್ಲಿಕಾರ್ಜುನ ನಾಯಕ, ಬಸವರಾಜ ರಾಯಗೊಂಡ, ಬಸವರಾಜ ಕೋಟಿ, ರವಿ ಬಾವಿಕಟ್ಟಿ, ವಿಶ್ವನಾಥ ನಿಡಗಂದಿ, ರಫೀಕ್ ಪಕಾಲಿ, ತೌಸೀಫ್ ಗಿರಗಾಂವಿ, ಜಕ್ಕಪ್ಪ ಮೀಸಿ, ಕಾಶಿನಾಥ ರಾಠೋಡ, ಸಿ.ಎಸ್. ಪಾಟೀಲ, ಸಂಕನಗೌಡ ಪಾಟೀಲ, ಪಿಂಟುಗೌಡ ಪಾಟೀಲ, ಜಗದೇವಿ ಗುಂಡಳ್ಳಿ, ರುಕ್ಮಿಣಿ ರಾಠೋಡ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

