Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಸುಮಾರು ೫೦ ವರ್ಷಗಳ ಇತಿಹಾಸ ಹೊಂದಿದ ಈ ದೇವಸ್ಥಾನ ಜೀರ್ಣೋದ್ದಾರ ಮಾಡಬೇಕು ಎಂಬುದು ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ಬಂದಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕೆಇಬಿ ಆವರಣದಲ್ಲಿ ಹಮ್ಮಿಕೊಂಡ ಆಂಜನೇಯ ದೇವಸ್ಥಾನದ ಕಟ್ಟಡ ಭೂಮಿ ಪೂಜಾ ಸಮಾರಂಭದ ಭೂಮಿ ಪೂಜಾ ನೆರವೇರಿಸಿ ಮಾತನಾಡಿದ ಅವರು, ಗುಡಿ, ಗುಂಡಾರ ಮಠ ಮಾನ್ಯಗಳನ್ನು ಕಟ್ಟುವುದರಿಂದ ಮಾನವನ ಧಾರ್ಮಿಕ ನೆಲೆಗಟ್ಟಿನ ಮೇಲೆ ನಾವು ಹೇಗೆ ಬದುಕಬೇಕು, ಸಮಾಜದಲ್ಲಿ ನಾವು ಒಗ್ಗಟ್ಟಾಗಿರಬೇಕು ಎಂಬುದು ತಿಳಿಯುತ್ತೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಬಗ್ಗೆ ಅಭಿಮಾನವಿಟ್ಟು ಕಾರ್ಯ ಮಾಡಬೇಕು. ಈಗಾಗಲೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ೫-೧೦ಲಕ್ಷ ರೂ. ಹಣವನ್ನು ಮಂದಿರ ಕಟ್ಟಡಕ್ಕೆ ಸಂಗ್ರಹಣೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣವನ್ನು ೫ಲಕ್ಷ ಶಾಸಕರ ಅನುದಾನದಲ್ಲಿ ಮಂಜೂರು ಮಾಡಿಸುವೆ ಮತ್ತು ನನ್ನ ವೈಯಕ್ತಿಕವಾಗಿ ೫೧ ಸಾವಿರ ರೂ. ಗಳನ್ನು ಕಟ್ಟಡಕ್ಕಾಗಿ ನೀಡುವೆ ಎಂದರು.ಇದೇ ವೇಳೆ ಎಸ್‌ಇ ಸಿದ್ದಪ್ಪ ಬೆಂಜಗೇರಿ, ಇಇ ಎಸ್.ಎ. ಬಿರಾದಾರ, ಎಇಇ ಚಂದ್ರಕಾಂತ ನಾಯಕ್,…
ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೫ ನೇ ಪುಣ್ಯ ಸ್ಮರಣೋತ್ಸದ ನಿಮಿತ್ತ ನುಡಿ ನಮನ ಸಿಂದಗಿ: ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನಲ್ಲಿ ಸಿಂದಗಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಪುರಸಭೆಯ ಸದಸ್ಯರು ತಮ್ಮ ವೇತನದ ಸುಮಾರು ಏಳು ಲಕ್ಷ ರೂಪಾಯಿ ಹಣವನ್ನು ಮೀಸಲಿಟ್ಟಿದ್ದಾರೆ. ಅದಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ್ ಕೂಚಬಾಳ ಶಾಸಕರಿಗೆ ಮನವಿ ಮಾಡಿಕೊಂಡರು.ಅವರು ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾಲಯದಲ್ಲಿ ಕನ್ನಡ ಬಳಗ ಮತ್ತು ಅವ್ವಾ ಫೌಂಡೇಶನ್ ಸಿಂದಗಿ ವತಿಯಿಂದ ಹಮ್ಮಿಕೊಂಡ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೫ ನೇ ಪುಣ್ಯ ಸ್ಮರಣೋತ್ಸದ ನಿಮಿತ್ತದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಲಿಂ. ಸಿದ್ದಲಿಂಗ ಮಹಾಸ್ವಾಮಿಗಳು ಸಾಮಾಜಿಕ ಹರಿಕಾರರಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಮುಂದಾದವರು. ಅವರ ಕಾಯಕನಿಷ್ಠೆ ದಾಸೋಹ ಧರ್ಮ ಅದೊಂದು ಇತಿಹಾಸ. ಅವರು ಸಿಂದಗಿಯವರು ಎನ್ನುವುದೇ ನಮ್ಮೆಲ್ಲರ…
ಬಸವನಬಾಗೇವಾಡಿ: ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅವರ ನಿವಾಸದಲ್ಲಿ ಅ.೨೫ ರಂದು ವಿಜಯದಶಮಿ ಹಬ್ಬದಂಗವಾಗಿ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದೇವರಹಿಪ್ಪರಗಿ ಮತಕ್ಷೇತ್ರದ ಗುರು-ಹಿರಿಯರು, ಯುವಕರು, ಜನರು ಭಾಗವಹಿಸಬೇಕೆಂದು ಶಾಸಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.೩೫ ರಿಂದ ೩೮.೭೫ ಕ್ಕೆ ಸರ್ಕಾರ ಹೆಚ್ಚಳ ಮಾಡಿರುವದಕ್ಕೆ ಸಮಸ್ತ ನೌಕರ ಬಾಂಧವರಿಗೆ ಸಂತಸ ತಂದಿದೆ. ತುಟ್ಟಿಭತ್ಯೆ ಹೆಚ್ಚಳ ಮಾಡಿರುವದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಅವರ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಎಲ್ಲ ಅಧಿಕಾರಿ ವೃಂದಕ್ಕೆ, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹಾಗೂ ಸಂಘದ ಪದಾಧಿಕಾರಿಗಳು ತಾಲೂಕಿನ ಸಮಸ್ತ ನೌಕರ ಬಾಂಧವರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮನಗೂಳಿ ಸಂಗನಬಸವ ಮಂಗಲ ಕಾರ್ಯಾಲಯದ ಲೋಕಾರ್ಪಣೆಯಂಗವಾಗಿ ಫೆ.3-4 ರಂದು ವಿವಿಧ ಕಾರ್ಯಕ್ರಮಗಳು ಬಸವನಬಾಗೇವಾಡಿ: ನಾಡಿನ ಮಠ-ಮಾನ್ಯಗಳು ಆಧ್ಯಾತ್ಮ ಸಂದೇಶ ಸಾರುವ ಜೊತೆಗೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದಿಂದ ನಿರ್ಮಾಣಗೊಂಡಿರುವ ಸಂಗನಬಸವ ಮಂಗಲ ಕಾರ್ಯಾಲಯದ ಲೋಕಾರ್ಪಣೆಯಂಗವಾಗಿ ೨೦೨೪ ರ ಫೆ. ೩ ಮತ್ತು ೪ ರಂದು ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲರೂ ಕೂಡಿಕೊಂಡು ಯಶಸ್ವಿಗೊಳಿಸಿ ಸ್ಮರಣೀಯವಾಗಿಸೋಣವೆಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದ ಆವರಣದಲ್ಲಿ ಸಂಗನಬಸವ ಮಂಗಲ ಕಾರ್ಯಾಲಯ ಲೋಕಾರ್ಪಣೆ ಕಾರ್ಯಕ್ರಮದಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂಗನಬಸವ ಮಂಗಲ ಕಾರ್ಯಾಲಯ ಲೋಕಾರ್ಪಣೆಯಂಗವಾಗಿ ಶ್ರೀಮಠವು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹಗಳನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ನೆರವೇರಿಸಬೇಕಾಗಿದೆ. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪೂಜ್ಯರಿಂದ ೨೫ ಮಂಟಪ ಪೂಜೆ, ಧರ್ಮಸಭೆ, ರಾಜ್ಯಮಟ್ಟದ ಸಂಗನಬಸವ ಶ್ರೀ ಪ್ರಶಸ್ತಿ ಪ್ರದಾನ, ನೂತನ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದ ಪೂಜ್ಯರು ಆಯೋಜನೆ…
ಮುದ್ದೇಬಿಹಾಳ : ಪಟ್ಟಣದ ಲಕ್ಷ್ಮೀ ಚಿತ್ರಮಂದಿರದ ಹಿಂದಿನ ಬದಿ ಇರುವ ಅಂಬಾಭವಾನಿ ದೇವಸ್ಥಾನದಲ್ಲಿ ೨೦೦ ಕ್ಕೂ ಹೆಚ್ಚು ಮುತೈದೆಯರಿಗೆ ಉಡಿ ತುಂಬಲಾಯಿತು.ಈ ವೇಳೆ ಮುಖಂಡರಾದ ಭರತ ಭೋಸಲೆ, ಶಿವಾಜಿ ಬಿಜಾಪೂರ, ಕಿರಣ ದುದಾನಿ, ಅನಿಲ ಜಾಧವ, ಲೋಹಿತ ಘಾಟಗೆ, ಶಂಕರ ಪವಾರ, ಸತೀಶ ಪವಾರ, ತಾನಾಜಿ ಘೋರ್ಪಡೆ ಸೇರಿದಂತೆ ಮತ್ತೀತರರು ಇದ್ದರು.
ವಿಜಯಪುರ: ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕರ್ನಾಟಕ ಐಟಿಐ ಉದ್ಯೋಗ ಸೊಸೈಟಿ ಮೂಲಕ ಸಿಎಂಕೆಕೆವೈ ಅಡಿಯಲ್ಲಿ ಜೂನಿಯರ್ ರೋಬೊಟ್ ಆಪರೇಟರ್ & ಪ್ರೋಗ್ರಾಮರ್ ಮಟೇರಿಯಲ್ ಹ್ಯಾಂಡಲಿಂಗ್, ಬ್ಯಾಟರಿ ಇಲೆಕ್ಟ್ರಿಕ್ ವ್ಹಿಕಲ್ ಜ್ಯೂನಿಯರ್ ಟೆಕ್ನಿಶಿಯನ್, ಇಲೆಕ್ಟ್ರಿಶಿಯನ್ ಡೊಮೆಸ್ಟಿಕ್ ಸಲೂಷನ್ ಹಾಗೂ ಟಿವಿ ರಿಪೇರ ಟೆಕ್ನಿಷಿಯನ್ ಅಲ್ಪಾವಧಿ ಕೋರ್ಸ್ಗಳನ್ನು ದಿನಾಂಕ : ೦೨-೧೧-೨೦೨೩ ರಿಂದ ಪ್ರಾರಂಭಿಸಲಾಗುವುದು.ಈ ತರಬೇತಿಗಳು ಉದ್ಯಮದಲ್ಲಿ ಉದ್ಯೋಗ ಪಡೆಯಲು ಅನುಕೂಲಕರವಾಗಿವೆ. ಹಾಗೂ ಈ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ರೋಬೋಟಿಕ್ ಪ್ರೊಗ್ರಾಮ, ಬ್ಯಾಟರಿ ವ್ಹಿಕಲ್ ಟೆಕ್ನಿಶಿಯನ್, ಇಲೆಕ್ಟಿçಷಿಯನ್ & ಆಫ್ಟರ್ ಸೇಲ್ಸ್ ಆಂಡ್ ಸರ್ವಿಸ್ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಗಳು ಲಭವಿರುತ್ತದೆ.ಕೋರ್ಸ್ಗಳಿಗೆ ೧೧ ಸಾವಿರ ರೂ. ಶುಲ್ಕವನ್ನು ನಿಗದಿಗೊಳಿಸಿದ್ದು, ಕೇವಲ ೩೬ ಜನರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಜಯಪುರ ಕಾರ್ಯಾಲಯ ದೂ:೦೮೩೫೨-೨೬೦೩೬೦, ಮೊ: ೯೫೯೧೫೭೧೩೮೯, ೯೯೬೪೧೫೨೦೪೦ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ನಗರದ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ನಾಮಕರಣ ಮಾಡಲು ಸಂಘ-ಸಂಸ್ಥೆಗಳು, ಗಣ್ಯ ವ್ಯಕ್ತಿಗಳಿಂದ ಅರ್ಜಿಗಳು ಸ್ವೀಕೃತವಾಗಿರುವ ಹಿನ್ನಲೆಯಲ್ಲಿ ವಿಜಯಪುರ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ಹೆಸರು ನಾಮಕರಣ ಮಾಡಲು ಜಿಲ್ಲೆಯ ಪ್ರತಿನಿಧಿಗಳ, ಗಣ್ಯವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಲಾಗಿದೆ.ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ಹೆಸರನ್ನು ನಾಮಕರಣ ಮಾಡುವ ಕುರಿತು ಸ್ಪಷ್ಟ ಅಭಿಪ್ರಾಯವನ್ನು ಈ ಪ್ರಕಟಣೆಯ ೧೫ ದಿನಗಳೊಳಗಾಗಿ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸಮಾನತೆ ಸಾರಿದ ವಿಶ್ವಗುರು ಬಸವಣ್ಣನವರು ಜನಿಸಿದ ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸಂಘ-ಸAಸ್ಥೆಗಳು, ಗಣ್ಯ ವ್ಯಕ್ತಿಗಳಿಂದ ಅರ್ಜಿಗಳು ಸ್ವೀಕೃತವಾಗಿರುವ ಹಿನ್ನಲೆಯಲ್ಲಿ ವಿಶ್ವ ಗುರು ಬಸವಣ್ಣನವರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರು ನಾಮಕರಣ ಮಾಡಲು ಜಿಲ್ಲೆಯ ಪ್ರತಿನಿಧಿಗಳ, ಗಣ್ಯವ್ಯಕ್ತಿಗಳ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಲಾಗಿದೆ.ಈ ಪ್ರಕಟಣೆಯ ೧೫ ದಿನಗಳೊಳಗಾಗಿ ವಿಶ್ವಗುರು ಬಸವಣ್ಣನವರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರು ನಾಮಕರಣ ಮಾಡುವ ಕುರಿತು ಸ್ಪಷ್ಟ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಬದ್ಧ ಸಿಂದಗಿ: ನಗರದಲ್ಲಿ ಬಹು ದಿನಗಳಿಂದ ನೆನಗುದಿಗೆ ಬಿದ್ದ ಸ್ವಾಮಿ ವಿವೇಕಾನಂದ ವೃತ್ತದ ಜಿರ್ಣೋದ್ದಾರ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಅತೀ ಶೀಘ್ರದಲ್ಲೇ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡ ವೀರ ರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಹೋರಾಟ, ದೈರ್ಯ, ಸ್ವಾತಂತ್ರ್ಯ, ಸ್ವಾಭಿಮಾನ ಎಂದರೆ ಏನು ಎಂಬುದನ್ನು ೨೪೫ ವರ್ಷಗಳ ಹಿಂದೆಯೇ ತಿಳಿಸಿಕೊಟ್ಟ ಮಹಾನ್ ತಾಯಿ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಮಾಡಿದ ಸಾಧನೆ, ಸಾಹಸ, ತ್ಯಾಗ, ಹೋರಾಟದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಇಂಡಿ ತಾಲೂಕಿನ ನಾದ ಕೆಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ. ಬಂಡಗರ ಉಪನ್ಯಾಸ ನೀಡಿ ಮಾತನಾಡಿದರು.ಈ ವೇಳೆ ಆಸಂಗಿಹಾಳದ ಆರೂಢಮಠದ ಶಂಕರಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು.…
