ಇಂಡಿ: ಶಿಕ್ಷಣ ಕುರಿತು ಮಹರ್ಷಿ ಅರವಿಂದರು ಮಂಡಿಸಿದ ವಿಚಾರಗಳು ಮಾನವ ಕಲ್ಯಾಣ, ಮಾನವ ವಿಕಾಸ ಪಥಕ್ಕೆ ಮಾರ್ಗದರ್ಶಿ. ಶಿಕ್ಷಣ ಕುರಿತು ಮಂಡಿಸಿದ ವಿಚಾರಗಳು ವರ್ತಮಾನದ ಗ್ರಹಿಕೆಯಿಂದಲೂ ಪರಿಪುಷ್ಟವಾದುದು ಎಂದು ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದ ರಾಮಲಿಂಗೇಶ್ವರ ಪ್ರಾಂಗಣದಲ್ಲಿ ಶ್ರೀ ಅರವಿಂದೋ ಸಮಿತಿಯಿಂದ ವಾರ್ಷಿಕೋತ್ಸವ ೨೦೨೩ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಮಹರ್ಷಿ ಅರವಿಂದರ ಚಿಂತನೆಗಳ ಬೆಳಕಿನಲ್ಲಿ ಭಾರತೀಯ ಶಿಕ್ಷಣವನ್ನು ಕಟ್ಟಬೇಕಾಗಿದೆ ಎಂದರು.
ಮಹಾನಂದಾ ಬಿರಾದಾರ ಮೀರಾ ಮಾತೆಯ ಕುರಿತು ಮಾತನಾಡಿ, ನಾವು ಮಾತೆಯವರ ಮಕ್ಕಳು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುವ ನಮಗೆ ಯಾವತ್ತೂ ನಮ್ಮ ಮಾತೆ ಮಕ್ಕಳ ಕೈ ಬಿಡುವದಿಲ್ಲ ಎಂದರು.
ಸಂಶೋಧಕ ಡಿ.ಎನ್.ಅಕ್ಕಿಯವರು ಮಾತನಾಡಿ, ರಾಮಲಿಂಗೇಶ್ವರ ದೇವಸ್ಥಾನದ ಪುರಾತನತೆ ಮತ್ತು ಸಾಲೋಟಗಿಯಲ್ಲಿ ರಾಷ್ಟ್ರಕೂಟರ ಮೂರನೆ ಕೃಷ್ಣನ ಕಾಲಕ್ಕೆ ಇದ್ದ ವಿಶ್ವವಿದ್ಯಾಲಯದ ಕುರಿತು ಸಂಶೋಧನಾತ್ಮಕವಾಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಸಾಹಿತಿ ಗೀತಯೋಗಿ ಮಾತನಾಡಿದರು.
ಸಮಿತಿಯ ಅಧ್ಯಕ್ಷ ದುಂಡಪ್ಪ ಹ್ಯಾಳದ, ಸತೀಶ ವಾಲಿ,ವಿನೋದ ಗಾಣಿಗೇರ ಮಾತನಾಡಿದರು.
ಸುಭಾಸಚಂದ್ರ ಗದ್ಯಾಳ, ಅಶೋಕ ಚನಗೊಂಡ, ಸೋಮನಾಥ ಶಿವೂರ, ಮಲ್ಲಪ್ಪ ಮಂಗೋಡ, ಗುರುಶಾಂತ ಪ್ರಧಾನಿ, ಶಿವಶಂಕರ ಇಂಗಳೆ, ಗಂಗಾಧರ ಸೋಮಜ್ಯಾಳ, ಶಿವಯೋಗಪ್ಪ ದೊಡ್ಡಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

