ವಿಜಯಪುರ: ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕ ಸಂಘದ ಅಧ್ಯಕ್ಷರಾಗಿ ಶಿವಾನಂದ ದೇಸಾಯಿ, ಪ್ರಧಾನಕಾರ್ಯದರ್ಶಿಯಾಗಿ ಶಿವಶಂಕರ ಉಕುಮನಾಳ ಮರು ಆಯ್ಕೆ ಮಾಡಲಾಯಿತು.
ವಿಜಯಪುರದ ಗಗನ ಮಹಲ್ ನಲ್ಲಿ ನಡೆದ ಜಿಲ್ಲೆಯ ಎಲ್ಲಾ ಮೇಲ್ವಿಚಾರಕರ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಮೇಲ್ವಿಚಾರಕರು ಭಾಗವಹಿಸಿ ಈಗಿರುವ ಅಧ್ಯಕ್ಷ, ಪ್ರಧಾನಕಾರ್ಯದರ್ಶಿ ಆಯ್ಕೆ ಮಾಡಿ ಠರಾವು ಕೈಗೊಳ್ಳಲಾಯಿತು.
ನೂತನ ಅಧ್ಯಕ್ಷ ಶಿವಾನಂದ ದೇಸಾಯಿ ಮಾತನಾಡಿ ಎಲ್ಲ ಮರುಆಯ್ಕೆ ಮಾಡಿದ ಎಲ್ಲ ಮೇಲ್ವಿಚಾರಕರಿಗೆ ಧನ್ಯವಾದಗಳು, ನನ್ನ ಜವಾಬ್ದಾರಿ ಹೆಚ್ಚಾಗಿದೆ ನೀವು ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ನಾನು ಮತ್ತು ಕಾರ್ಯದರ್ಶಿ ಸೇರಿಕೊಂಡು ವಿಜಯಪುರ ಜಿಲ್ಲೆಯ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡುವುದರ ಜೊತೆಗೆ ಸಂಘದ ಕಛೇರಿಗಾಗಿ ಸ್ಥಳಿಯ ಶಾಸಕರನ್ನು ಭೇಟಿಯಾಗಿ ಜಾಗವನ್ನು ಪಡೆಯುವದು, ಕೋ ಆಪರೇಟಿವ್ ಬ್ಯಾಂಕ್ ತೆರೆಯುವ ಉದ್ದೇಶ ಹೊಂದಲಾಗಿದೆ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಹಿರಿಯ ಮೇಲ್ವಿಚಾರಕ ಮಹಾಂತಗೌಡ ಕಾಶಿನಕುಂಟಿ ಮಾತನಾಡಿದರು.
ಸಭೆಯಲ್ಲಿ ಪಿ.ಸಿ.ಬಿರಾದಾರ, ಮಹಾಂತಗೌಡ ಕಾಶಿನಕುಂಟಿ, ಶರಣಗೌಡ ಕೋಳೂರ, ಸಿ.ಎ.ಕುಲಕರ್ಣಿ, ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಭೀಮಸಿಂಗ್ ರಾಠೋಡ, ಕಾರ್ಯದರ್ಶಿ ವಿಠ್ಠಲ ಗೂಗಿಹಾಳ, ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಎಸ್.ಬಿ.ಪಾಟೀಲ್,ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ, ಇಂಡಿ ತಾಲೂಕು ಅಧ್ಯಕ್ಷ ಪ್ರಶಾಂತಗೌಡ ಪಾಟೀಲ, ಕಾರ್ಯದರ್ಶಿ ಶಾರೂಬಾಯಿ ರಾಠೋಡ, ವಿಜಯಪುರ ತಾಲೂಕು ಅಧ್ಯಕ್ಷ ರವಿಧರಣಾಕರ, ಕಾರ್ಯದರ್ಶಿ ರಾಜು ಮೇಲಕೇರಿ,ಸಿಂದಗಿ ತಾಲೂಕು ಅಧ್ಯಕ್ಷ ಗುರು ಹಿರೇಮಠ, ಕಾರ್ಯದರ್ಶಿ ಶಂಕರ ಅಗಸರ, ಕೃಷ್ಣಾ ಮುತ್ತಗಿ, ಮುತ್ತು ಸಗರಿ, ರಮೇಶ ಕುಂಬಾರ, ಸಂತೋಷ ಬಜಂತ್ರಿ, ಗುರುಬಸು ಖೇಡಗಿ, ಇಸ್ಮಾಯಿಲ್ ಪೀರಾಪುರ,ಶ್ರೀಮತಿ ಸುಶಿಲಾ ಪ್ರಧಾನಿ, ಮುಕ್ತಾಬಾಯಿ ಹೆಗಡೆ, ಶಾರದಾಬಾಯಿ ಯತ್ನಾಳ, ಮೀರಾಬಾಯಿ ಪವಾರ, ಎ.ವಾಯ್.ಬನಸೋಡೆ, ಎಸ್.ಎಸ್.ಅಂಗಡಿ (ಹಿಟ್ನಳ್ಳಿ) ಶಂಕ್ರೆಮ್ಮ ಲೋಕುರೆ, ಶಿಲ್ಪಾ ಗೊಳಸಂಗಿ ಸೇರಿದಂತೆ ಜಿಲ್ಲೆಯ ನೂರಾರು ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

