ವಿಜಯಪುರ: ತ್ಯಾಗಮೂರ್ತಿ ರಮಾಬಾಯಿ ಅಂಬೇಡ್ಕರ್ ಅವರ ೧೨೬ನೇ ಜನ್ಮದಿನಾಚರಣೆ ಸಮಾರಂಭವನ್ನು ನಗರದ ಜಲನಗರದಲ್ಲಿರುವ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಬುಧವಾರ ದಿ.೭ ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ದಿವ್ಯಸಾನಿಧ್ಯವನ್ನು ಕಲಬುರಗಿ ಜೇತವನ ಬುದ್ಧವಿಹಾರದ ಪೂಜ್ಯ ಬಿಕ್ಖುಣಿ ಡಾ.ಸುಮನಾ ಅವರು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಕೆ. ತುಳಸಿಮಾಲಾ ನೆರವೇರಿಸಲಿದ್ದಾರೆ.
ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಯ ಕುರಿತು ತಾಳಿಕೋಟೆಯ ಎಸ್.ಕೆ. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಜಾತಾ ಚಲವಾದಿ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಬೌದ್ಧ ಉಪಾಸಕಿ ಸುಲೋಚನಾ ಚಲವಾದಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೌದ್ಧ ಉಪಾಸಕಿ ಆಶಾ ಯಡಹಳ್ಳಿ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ತತ್ವ ಜ್ಞಾನ ದಲ್ಲಿ ಎಂ.ಎ. ಪದವಿ ಪಡೆದ ಅನ್ನಪೂರ್ಣ ಬೆಳ್ಳೆನವರ ಭಾಗವಹಿಸಲಿದ್ದಾರೆ.
ಕಾರಣ ಜಿಲ್ಲೆಯ ಎಲ್ಲ ಬೌದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅನುಯಾಯಿಗಳು, ಪ್ರಗತಿಪರ ಚಿಂತಕರು, ಭಾರತೀಯ ಬೌದ್ಧ ಮಹಾಸಭಾ ಪದಾಧಿಕಾರಿಗಳು, ಬೌದ್ಧವಿಹಾರ ನಿರ್ಮಾಣ ಸಮಿತಿಯ ನಿದೇರ್ಶಕರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವರಾಜ ಚಲವಾದಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

