ಚಿಮ್ಮಡ: ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಬಕವಿ-ಬನಹಟ್ಟಿ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಮ್ಮಡ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಚಿಮ್ಮಡ ಗ್ರಾಮದ ವಿರಕ್ತಮಠದಲ್ಲಿ ಸೋಮವಾರ ಸಂಜೆ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಸಮ್ಮೇಳನ ದಿನಾಂಕ ಪ್ರಕಟಿಸುವ ಕುರಿತು ತಿಳಿಸಲಾಯಿತು.
ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮ್ಮೇಳನ ಹಮ್ಮಿಕೊಳ್ಳುವ ಬಗ್ಗೆ, ಅದರಸಿದ್ಧತೆಗಳು, ರೂಪುರೇಷೆಗಳು, ಸಂಪನ್ಮೂಲ ಕ್ರೋಢೀಕರಣದಬಗ್ಗೆ ಗ್ರಾಮದ ಹಿರಿಯರು ಹಾಗೂ ಪ್ರಮುಖರ ಸಭೆ ನಡೆಸಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಹಿರಿಯರಾದ ಆರ್.ವೈ.ಮುಗಳಖೋಡ, ಪ್ರಭು ಪಾಲಭಾವಿ, ಹಿರಿಯ ಸಾಹಿತಿ ಎಂ.ಎಸ್.ಬದಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಮಾತನಾಡಿದರು.
ಪುಂಡಲೀಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಬಿ.ಎಸ್.ಪಾಟೀಲ, ರಾಮಣ್ಣ ಬಗನಾಳ,ಪ್ರಕಾಶ ಪಾಟೀಲ,ಪ್ರಭು ಮುಧೋಳ, ಮನೋಜ ಹಟ್ಟಿ, ಅವ್ವನಪ್ಪ ಮುಗಳಖೋಡ, ಜಿ.ಎಸ್.ವಡಗಾಂವಿ, ಮೃತ್ಯುಂಜಯರಾಮದುರ್ಗ, ಈರಣ್ಣಗಣಮುಖಿ, ಬಿ.ಎಂ.ಮಟ್ಟಿಕಲ್ಲಿ, ಜಿ.ಎಸ್.ಗೊಂಬಿ, ಶರತ್‌ಜಂಬಗಿ, ಮಲ್ಲು ತುಂಗಳ, ಇಲಾಹಿ ಜಮಖಂಡಿ, ಬಸವರಾಜ ಮೇಟಿ, ಗಂಗಾಧರ ಮೋಪಗಾರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

