ತಾಂಬಾ: ಕನ್ನಡ ಜಾನಪದ ಸಾಹಿತ್ಯ ಕುರಿತು ಉಪನ್ಯಾಸವನ್ನು ಮಾಡುವ ಅದೃಷ್ಟ ನನಗೆ ದೊರೆತಿರುವದು ಅತ್ಯಂತ ಸಂತಸ ಉಂಟಾಗಿದೆ. ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡುವ ಅದೃಷ್ಟ ನನಗೆ ಒದಗಿಬಂದಿದೆ, ಉತ್ತರ ಕರ್ನಾಟಕ ಜಾನಪದದ ತವರೂರು ನಮ್ಮೆಲ್ಲ ಹಿರಿಯರು ಪೋಷಿಸಿ ಬೆಳೆಸಿದ ಸಾಹಿತ್ಯವನ್ನು ನಾವೆಲ್ಲರೂ ಉಳಿಸಬೇಕಾಗಿದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನ ಮಾಡುವುದರ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಇಂಡಿ ತಾಲ್ಲೂಕಿನ ಹರಳಯ್ಯನ ಹಟ್ಟಿ ಗ್ರಾಮದ ಪೋಲಿಸ ಅಧಿಕಾರಿ ಜ್ಯೋರ್ತಿಲಿಂಗ ಹೊನಕಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಮನ್ ದೇಶದ ಮಸ್ಕತ ಮಹಾನಗರದಲ್ಲಿ ಪತ್ನಿ ಹಾಗು ಎರಡು ಮಕ್ಕಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಮಹಿಳೆ ಎಂಬ ವಿಷಯ ಕುರಿತು ಉಪನ್ಯಾಸ ಹಾಗು ಸಂಗೀತ ಸೇವೆ ಸಲ್ಲಿಸಿದ ಹೊನಕಟ್ಟಿ ಅವರಿಗೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸನ್ಮಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಜ್ಯೋತಿ೯ಲಿಂಗ ಹೊನಕಟ್ಟಿ ಪೋಲಿಸ ಇಲಾಖೆಯಲ್ಲಿದ್ದು ಕನ್ನಡ ಸೇವೆ ರಾಜ್ಯ ಹಾಗು ವಿದೇಶದಲ್ಲೂ ಮಾಡುತ್ತೀರುವದು ಅತ್ಯಂತ ಸಂತೋಷದ ವಿಚಾರ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡುವ ಹಾಗು ಅವರನ್ನು ಗೌರವಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದು ಜಿಲ್ಲೆಗೆ ಹೆಮ್ಮೆಯ ವಿಷಯ. ಜಾನಪದ ಸಾಹಿತ್ಯ ಎಲ್ಲ ಸಾಹಿತ್ಯದ ಬುನಾದಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ತಿಕೋಟಾ ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ ಮಾತನಾಡಿದರು. ಡಾ. ಆನಂದ ಕುಲಕರ್ಣಿ, ಅನ್ನಪೂರ್ಣ ಬೆಳ್ಳನ್ನವರ, ಸುಭಾಸಚಂದ್ರ ಕನ್ನೂರ, ಆರ್.ವಾಯ್. ಕೊಣ್ಣೂರ, ವಿಜಯಲಕ್ಷ್ಮಿ ಹಳಕಟ್ಟಿ, ಮಹಾದೇವಿ ತೆಲಗಿ, ಬಸವರಾಜ ಕೋನರಡ್ಡಿ, ಸೈನಾಬಿ ಮಸಳಿ, ರಾಜೇಸಾಬ ಶಿವನಗುತ್ತಿ, ಪ್ರದೀಪ ಕುಲಕರ್ಣಿ, ಶೋಭಾ ಚಿಗರಿ, ಸುನಂದಾ ಯಂಪೋರೆ, ಅಲಿಸಾಬ ಕಡಕೆ, ರವಿ ಕಿತ್ತೂರ, ಅಬ್ದುಲರಜಾಕ ಮುಲ್ಲಾ, ಶೋಭಾ ಬಡಿಗೇರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

