Author: editor.udayarashmi@gmail.com

ಜಾನಕಿ ರಾವ್ “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ”ಒಂದು ಪರಿಪೂರ್ಣ ವ್ಯಕ್ತಿತ್ವ ಹೇಗಿರಬೇಕೆನ್ನೋ ವಿವರಣೆ ಇಲ್ಲಿದೆ. ಈ ಮೇಲಿನ ಡಿ. ವಿ. ಜಿ ಯವರ ಹೊನ್ನುಡಿಗೆ ತಕ್ಕಂತೆ ಬದುಕುತ್ತಿರುವ ಒಬ್ಬ ಅದ್ಭುತ ವ್ಯಕ್ತಿಯ ಪರಿಚಯವನ್ನು ಮಾಡಿಕೊಳ್ಳೋಣ. ” ಒಲವಧಾರೆ ” ಎನ್ನುವ ಕಾವ್ಯನಾಮದೊಂದಿಗೆ ಜನಮಾನಸದಲ್ಲಿ ನೆಲೆನಿಂತ ಡಾ. ರಾಜಶೇಖರ ನಾಗೂರರು ಹವ್ಯಾಸಿ ಬರಹಗಾರರಾಗಿದ್ದು, ವೃತ್ತಿಯಲ್ಲಿ ವೈದ್ಯರು.ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದರೂ ಕೂಡ ಇವರ ಕನ್ನಡ ಭಾಷಾ ಜ್ಞಾನ ಹಾಗು ಅಭಿಮಾನ ಅಪಾರ. ಬದುಕಿನಲ್ಲಿ ಒಂದು ಹಂತದ ಯುದ್ಧ ಗೆದ್ದ ಮೇಲೆ, ತಾವು ನಡೆದುಬಂದ ಹಾದಿ, ಬಾಲ್ಯವನ್ನು ಕಳೆದ ಗ್ರಾಮೀಣ ಪರಿಸರ ಅಲ್ಲಿನ ಪ್ರಾದೇಶಿಕ ಭಾಷೆ, ಎಲ್ಲವನ್ನೂ ಮರೆತು ಪಕ್ಕಾ ಇಂಗ್ಲೀಷ ರಂತೆ ನಡೆದುಕೊಳ್ಳುವ ಅದೆಷ್ಟೋ ಮಂದಿಯನ್ನು ನಾವು ನೀವು ನಿತ್ಯವೂ ನೋಡುತ್ತಲೇ ಇದ್ದೇವೆ. ಇಂಥವರ ನಡುವೆ ಇಂದಿಗೂ ತನ್ನವರ ನಡುವೆ ಇದ್ದಾಗ…

Read More

ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ ತನ್ನಿಮಿತ್ತ ವಿಶೇಷ ಲೇಖನ ಸಂತೋಷ ಬಿ. ನವಲಗುಂದ(ಮಳ್ಳಿ), ಪತ್ರಕರ್ತ-ಸಾಹಿತಿ೮೧೩೯೯೭೮೮೭೩ ಕಾವೇರಿಯಿಂದ ಗೋದಾವರಿಯುವರೆಗೂ ಹಬ್ಬಿದ ನಾಡು ಕನ್ನಡ ಎಂದು ಹೇಳಿದ್ದನ್ನು ಗಮನಿಸಿದರೆ, ಈಗಿನ ಕಲ್ಯಾಣ ಕರ್ನಾಟಕದ (ಹೈದರಾಬಾದ್ ಕರ್ನಾಟಕ) ಆ ಕಾಲದ ಹಿರಿಮೆ ಕಣ್ಣ ಮುಂದೆ ಕಟ್ಟುತ್ತದೆ. ಅಲ್ಲದೇ,“ಪದನರಿದು ನುಡಿಯಲುಂ ನುಡಿದುದನರಿಯಲುಮಾರ್ಪರಾ ನಾಡವರ್ಗಳ್ಚದುರರ್ ನಿಜದಿಂ ಕುರಿತೋದದೆಯುಂಕಾವ್ಯಪ್ರಯೋಗ ಪರಿಣತಮತಿಗಳ್”ಈ ಕಾವ್ಯದ ಸಾಲುಗಳು ಕನ್ನಡಿಗನ ಕಾವ್ಯದ ಕನ್ನಡತನ ಶಿಖರದೆಡೆಗೆ ಮುಖಮಾಡುವಂತಿದೆ. ಕನ್ನಡನಾಡು ಪ್ರಾಚೀನ. ನುಡಿ ಸುಲಿದ ರಸಬಾಳೆ. ಕನ್ನಡಿಗನ ಬದುಕು ಸುಲಿದ ರಸಬಾಳೆಯ ಪ್ರತಿಬಿಂಬ. ಇಷ್ಟು ರಸಮಯ, ಸರಳ, ಉದಾರಭಾಷೆ ನಮ್ಮ ಕನ್ನಡ. ಅಗಣಿತ ಸಿರಿವಂತಿಕೆ ಹೊಂದಿದ ಕನ್ನಡ ನಾಡು-ನುಡಿಯ ವ್ಯಾಪ್ತಿ ಬಹುವಿಶಾಲ. ಕನ್ನಡಿಗರಿಗೆ ಕಾವಿರಾಜಮಾರ್ಗಕಾರನ ಕಾವ್ಯ ದಿಕ್ಸೂಚಿಯಂತೆ ತೋರುತ್ತದೆ. ಪ್ರಾಚೀನರು ಇಂತಹ ದಿವ್ಯ ದಿಕ್ಸೂಚಿ ನೀಡಿದ್ದರೂ, ನಮ್ಮ ಕನ್ನಡದ ನಡಿಗೆ ನಿರ್ದಿಷ್ಟ ದಿಕ್ಕಿನೆಡೆಗೆ ಸಾಗದೇ ದಾರಿ ಕಾಣದ ಪಯಣಿಗರಾಗಿದ್ದೇವೆ ಎಂಬುದು ಅಷ್ಟೇ ಸತ್ಯವೆನಿಸುತ್ತದೆ.ಸಾಮ್ರಾಜ್ಯಶಾಹಿಗಳ ಆಡಳಿತ ಕೊನೆಯಾಗಿ, ವಿದೇಶಿಗರ ದಬ್ಬಾಳಿಕೆಯ ಆಳ್ವಿಕೆಯಿಂದ ಮುಕ್ತಿಹೊಂದಿದ ಭಾರತ, ತನ್ನನ್ನು ತಾನು ಗಟ್ಟಿಯಾಗಿ ಎದ್ದು…

Read More

ವಿಜಯಪುರ: ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ ವಿಜಯಪುರ ವಲಯ ಕಚೇರಿಯಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ತಾಂಡಾಗಳಲ್ಲಿನ ನಿರುದ್ಯೋಗಿ ಮಹಿಳೆಯರಿಗೆ ಸಾಂಪ್ರಾದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕಾರ್ಯಕ್ರಮದಡಿ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಸೂಕ್ತ ದಾಖಲೆಗಳೊಂದಿಗೆ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಬಂಜಾರಾ ಭವನ, ಕ್ರೀಡಾ ವಸತಿ ನಿಲಯದ ಹಿಂದುಗಡೆ, ಬಂಜಾರಾ ಕ್ರಾಸ್ ಹತ್ತಿರ, ರಾಜೇಂದ್ರ ನಗರ ವಿಜಯಪುರ ಕಚೇರಿಗೆ ದಿನಾಂಕ : ೦೪-೧೧-೨೦೨೩ ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: ೦೮೩೫೨-೨೬೦೯೯೮ ಸಂಖ್ಯೆಗೆ ಸಂಪರ್ಕಿಸುವಂತೆ ನಿಗಮದ ಅಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ ೨೦ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ನವೆಂಬರ್ ೦೧ರಂದು ಜರುಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಸಂಗಮೇಶ ಭೀಮಣ್ಣ ಕೆರೆಪ್ಪಗೋಳ, ಸಮಾಜ ಸೇವೆ-ಕನ್ನಡ ಸೇವೆ ಕ್ಷೇತ್ರದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಬಾಳಿ ಹಾಗೂ ಸಿದ್ರಾಮಪ್ಪಾ ದುಂಡಪ್ಪಾ ಕುಮಾನಿ, ಸಂಗೀತ ಕ್ಷೇತ್ರದಲ್ಲಿ ಶ್ರೀಧರ ರಾಮಯ್ಯ ಹರಿದಾಸ, ಜಾನಪದ ಕ್ಷೇತ್ರದಲ್ಲಿ ಮೌಲಾಸಾಬ ನಾನಾಸಾಬ ಜಾಹಗೀರದಾರ, ಚಿನ್ನಪ್ಪ ಗಿರಿಮಲ್ಲಪ್ಪ ಪೂಜಾರಿ ಹಾಗೂ ಶ್ರೀಮತಿ ಶೇಖವ್ವಾ ಭೀಮಣ್ಣ ಫರನಾಕರ ಇವರನ್ನು ಆಯ್ಕೆ ಮಾಡಲಾಗಿದೆ.ರಂಗಭೂಮಿ ಕ್ಷೇತ್ರದಲ್ಲಿ ಯಮನಪ್ಪ ಹುಪನಪ್ಪ ಅಂಗಡಗೇರಿ ಹಾಗೂ ಶ್ರೀಮತಿ ಉಮಾ ಹಣಮಂತಪ್ಪ ರಾಣೆಬೆನ್ನೂರು, ಬಯಲಾಟ ಕ್ಷೇತ್ರದಲ್ಲಿ ಶಿವಣ್ಣ ಮಾಧುರಾಯ ಬಿರಾದಾರ, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ವೀನಾಕ್ಷಿ ಪಾಟೀಲ (ಕಲ್ಯಾಣಿ), ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಲ್ಲಮಪ್ರಭು ಮಲ್ಲಿಕಾರ್ಜುನ ಮಠ, ಸೀತಾರಾಮ ಚಿದಂಬರ ಕುಲಕರ್ಣಿ ಹಾಗೂ ಕೆ.ಎನ್.ರಮೇಶ ಅವರನ್ನು ಆಯ್ಕೆ ಮಾಡಲಾಗಿದೆ.ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶ್ರೀಕಾಂತ ಬಾಬುರಾವ್ ಮಿರಜಕರ,…

Read More

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭದಲ್ಲಿ ಸಚಿವ ಎಚ್.ಕೆ.ಪಾಟೀಲ ಕರೆ ವಿಜಯಪುರ: ಉದ್ಯಮಿಯಾಗಿ ಹೆಚ್ಚೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ಕರೆ ನೀಡಿದ್ದಾರೆ.ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭ ಮತ್ತು ವಿಜಯಪುರ ನಗರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ ಆಂಗ್ಲ ಮಾಧ್ಯಮ ಶಾಲೆಯ ಕಟ್ಡಡ ಮತ್ತು ವಿದ್ಯಾರ್ಥಿ ವಸತಿ ನಿಲಯದ ಕಟ್ಡಡದ ಅಡಿಗಲ್ಲು ಹಾಗೂ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ರಚನಾತ್ಮಕ ಕಾರ್ಯಕ್ರಮ ಮಾಡುವ ಜನ ಕಡಿಮೆ ಅಭಿವೃದ್ಧಿಗೆ ಪೂರಕವಾಗಿರುವ ಇಂಥ ಕಾರ್ಯಗಳನ್ನು ಮಾಡಲು ಸಾಧ್ಯ. ಆಡಳಿತ ಮಂಡಳಿ ಸಮಾಜದ ಆಸ್ತಿ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇವರ ಕಾಯಕಕ್ಕೆ ಸದಸ್ಯರ ಬೆಂಬಲ ಅಗತ್ಯ.…

Read More

ಕರ್ನಾಟಕಕ್ಕೆ ಮುಂದುವರಿದ ಸಂಕಷ್ಟ | ನಿತ್ಯ 2,600 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಬೆಂಗಳೂರು: ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನ.1ರಿಂದ 15ರವರೆಗೆ ಪ್ರತಿದಿನ 2,600 ಕ್ಯೂಸೆಕ್‌ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ.ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಆದೇಶವನ್ನು ನೀಡಲಾಗಿದೆ. ಸಮಿತಿಯ ಶಿಫಾರಸಿನಿಂದ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್‌ ಆದೇಶದಂತೆ ರಚಿಸಲಾದ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಿ ನೀರು ಬಿಡುವ ವಿಚಾರಕ್ಕೆ ಕರ್ನಾಟಕಕ್ಕೆ ಆದೇಶ ನೀಡುತ್ತಿದೆ. ಈ ಹಿಂದೆ ಅಕ್ಟೋಬರ್‌ 15ರಿಂದ 31ರ ವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಹೊರಡಿಸಿತ್ತು.ಅದಕ್ಕೂ ಮೊದಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ…

Read More

ಬಸ್ ಗ್ಯಾರೇಜ್ ನಲ್ಲಿ ಭೀಕರ ಅಗ್ನಿ ದುರಂತ | ಇದ್ದ 35 ಬಸ್‌ಗಳಲ್ಲಿ 20ಕ್ಕೂ ಅಧಿಕ ಬಸ್ ಗಳಿಗೆ ಹಾನಿ ಬೆಂಗಳೂರು: ಮಹಾನಗರದ ಬಸ್ ಗ್ಯಾರೇಜ್ ನಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೯ ಬಸ್ ಗಳು ಬೆಂಕಿಗಾಹುತಿಯಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದ ಸಮೀಪದಲ್ಲಿರುವ ಎಸ್.ವಿ ಕೋಚ್ ಬಸ್ ಬಾಡಿಬಿಲ್ಡರ್ಸ್ ಮತ್ತು ಗ್ಯಾರೇಜ್ ನಲ್ಲಿ ಸೋಮವಾರ ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡು ನಿಂತಿದ್ದ ೧೯ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್‌ನಲ್ಲಿ ನಿಂತಿದ್ದ ಬಸ್‌ ಒಂದರ ಭಾಗಕ್ಕೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ವೆಲ್ಡಿಂಗ್ ಯಂತ್ರದಿಂದ ಕಿಡಿ ಹಾರಿದ್ದು ಇದು ಬೆಂಕಿ ಅವಘಡಕ್ಕೆ ಕಾರಣವಾಯಿತು. ಬಳಿಕ ಒಂದರನಂತರ ಒಂದು ಬಸ್ ಗೆ ಬೆಂಕಿ ವ್ಯಾಪಿಸಿದೆ ಎಂದು ನಾವು ಶಂಕಿಸಿದ್ದೇವೆ. ಬೆಂಕಿ ನಂತರ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಇತರ…

Read More

ವಿಜಯಪರ: ಜಿಲ್ಲಾ ಹಾಲುಮತ ಸಮಾಜದ ವತಿಯಿಂದ ನೂತನವಾಗಿ ಸಹಕಾರಿ ಬ್ಯಾಂಕ್ ಪ್ರಾರಂಭಿಸಲು ಇಚ್ಚಿಸಿದ್ದು, ಈ ಕುರಿತು ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಮುಖಂಡರ ಒಮ್ಮತವನ್ನು ಪಡೆಯಲು ದಿ.೦೧-೧೧-೨೦೨೩ ರಂದು ನಗರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ, ಶಿಖಾರಖಾನೆಯಲ್ಲಿ ಈ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.ಆದ್ದರಿಂದ ಈ ಸಭೆಯಲ್ಲಿ ಹಾಲುಮತ ಸಮಾಜದ ಹಿರಿಯ ಮುಖಂಡರು, ಸಂಘಟನೆಗಳ ಗಣ್ಯರು, ಮುಖಂಡರು, ಯುವ ಧುರೀಣರು, ರಾಜಕೀಯ ಮುತ್ಸದ್ಧಿಗಳು,ಜಿಲ್ಲಾ ಹಾಲುಮತ ನೌಕರರು, ಹಾಲುಮತ ಸಮಾಜದ ಪದಾಧಿಕಾರಿಗಳು ಹಾಜರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿಜಯಪುರ ನಗರ ಘಟಕ ಕುರುಬರ ಸಂಘದ ಅಧ್ಯಕ್ಷ ರಾಜು ಕಗ್ಗೋಡ, ಹಾಗೂ ಕಾರ್ಯದರ್ಶಿ ರಮೇಶ ಕಾಲೇಬಾಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಹೊನವಾಡ: ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ನಿವೃತ್ತ ಶಿಕ್ಷಕ ಎಸ್ ಎನ್ ಮಂಗೊಂಡ ಕರೆ ನೀಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 2001,2004,2006ನೇ ಸಾಲಿನ ವಿದ್ಯಾರ್ಥಿಗಳ ಬಳಗ ವತಿಯಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಅಮರೇಶ್ವರ ಮಹಾರಾಜರು ಮಾತನಾಡಿ, ಏನೂ ತಿಳಿಯದ ಸಾಮಾನ್ಯನನ್ನು ಜೀವನದ ಮೌಲ್ಯದ ಮೂಲಕ ಗುರಿ ಸಾಧನೆಗೆ ಮಾರ್ಗ ತೋರುವವನೇ ಗುರು, ಶಿಕ್ಷಣದ ಯಜ್ಞದ ಸ್ವತ್ತು ಗುರು ತಾನು ಉರಿದು ವಿದ್ಯಾರ್ಥಿಗಳ ಮೂಲಕ ಜಗತ್ತಿಗೆ ಬೆಳಕು ನೀಡುವ ಗುರುವಿಗೆ ಎಷ್ಟು ನಮಿಸಿದರೂ ಸಾಲದು ಎಂದರು.ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿ. ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಶಿವಯೋಗಿಶ್ವರ ಸ್ವಾಮಿಗಳು ಹೇಳಿದರು.ವಿಜಯಪುರದ…

Read More