ಮುದ್ದೇಬಿಹಾಳ: ರಾಜ್ಯ ಸರ್ಕಾರದ ಆದೇಶದಂತೆ ಭಾರತದ ಸಂವಿಧಾನ ಜಾರಿಗೆ ಬಂದು ೭೫ ನೇ ವರ್ಷಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಸಂವಿಧಾನದ ಆಶಯ ಮತ್ತು ಮಹತ್ವಗಳನ್ನು ಸರ್ವರಿಗೂ ತಿಳಿಸುವ ಉದ್ದೇಶದಿಂದ ಒಂದು ಸ್ಥಬ್ಧಚಿತ್ರವು ತಾಲೂಕಿಗೆ ಫೆ.೧೪ ರಿಂದ ಫೆ.೧೯ ರವರೆಗೆ ೨೧ ಗ್ರಾಮ ಪಂಚಾಯತಗಳು, ೧ ಪುರಸಭೆ, ೧ಪಟ್ಟಣ ಪಂಚಾಯತಿ ಹೀಗೆ ಒಟ್ಟು ೨೩ ಗ್ರಾಮಗಳಲ್ಲಿ ಸಂಚರಿಸಲಿದೆ. ಫೆ.೧೪ ರಂದು ಮಧ್ಯಾಹ್ನ ೧೨:೩೦ ಕ್ಕೆ ರೂಢಗಿ ಗ್ರಾಮಕ್ಕೆ ಆಗಮಿಸಲಿದ್ದು, ಬಸರಕೋಡ ಮಾರ್ಗವಾಗಿ ಢವಳಗಿ ಗ್ರಾಮದಲ್ಲಿ ಸಂಜೆ ೭:೩೦ ಕ್ಕೆ ಬಹಿರಂಗ ಕಾರ್ಯಕ್ರಮದ ಮೂಲಕ ವಾಸ್ತವ್ಯ ಹೂಡಲಿದೆ. ಫೆ.೧೫ ರಂದು ಮಡಿಕೇಶ್ವರ, ಇಂಗಳಗೇರಿ, ಕುಂಟೋಜಿ ಗ್ರಾಮಗಳ ಮಾರ್ಗವಾಗಿ ಮಧ್ಯಾಹ್ನ ೩ ಗಂಟೆಗೆ ಮುದ್ದೇಬಿಹಾಳ ತಲುಪಲಿದ್ದು, ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಸಂಜೆ ೭:೩೦ ಬಹಿರಂಗ ಕಾರ್ಯಕ್ರಮ ಜರುಗುವದಾಗಿ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment