ಆಲಮಟ್ಟಿ: ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ನಡೆದ ಅಂತರರಾಜ್ಯ ಟಗರಿನ ಕಾಳಗ ಮೈರೋಮಾಂಚನಗೊಳಿಸಿತು.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ದಾವಣಗೆರೆ, ಯಾದಗೀರ ಸೇರಿದಂತೆ ನಾನಾ ಕಡೆಯಿಂದ ಸುಮಾರು ೧೮೦ ಕ್ಕೂ ಅಧಿಕ ಟಗರುಗಳು ಸ್ಪರ್ಧೆಗೆ ಬಂದಿದ್ದವು.
ಕೇಸಾಪುರದ ಗಿಡ್ಡ ಪ್ರಥಮ ಸ್ಥಾನ:
ಮುದ್ದೇಬಿಹಾಳ ತಾಲ್ಲೂಕಿನ ಕೇಸಾಪುರದ ಗಿಡ್ಡ ಹೆಸರಿನ ಟಗರು ಪ್ರಥಮ ಸ್ಥಾನ ಪಡೆಯಿತು. ಅದರ ಮಾಲೀಕ ಪ್ರವೀಣ ಬುಲೆಟ್ ರಾಯಲ್ ಎನ್ ಫೀಲ್ಡ್ ಬೈಕ್ ತಮ್ಮದಾಗಿಸಿಕೊಂಡ. ಬಾಗಲಕೋಟೆ ಬಳಿಯ ಗದ್ದನಕೇರಿಯ ಕಿರಣ ಅವರ ಗರುಡಾ ಟಗರು ದ್ವಿತೀಯ ಸ್ಥಾನ ಪಡೆಯಿತು. ಅವರಿಗೆ ೧.೩೦ ಲಕ್ಷ ರೂ ಮೌಲ್ಯದ ಹೋಂಡಾ ಶೈನ್ ಬೈಕ್ ಬಹುಮಾನ ನೀಡಲಾಯಿತು. ತೃತೀಯ ಸ್ಥಾನ ಹಾಗೂ ಚತುರ್ಥ ಸ್ಥಾನ ಮುದ್ದೇಬಿಹಾಳ ತಾಲ್ಲೂಕಿನ ಕಿಲ್ಲಾರಹಟ್ಟಿಯ ಅಮರಪ್ಪ ಮದರಿ ಅವರಿಗೆ ಸೇರಿದ ಎರಡು ಟಗರುಗಳು ಪಡೆದವು. ತೃತೀಯ ಬಹುಮಾನ ಒಂದು ಲಕ್ಷ ರೂ ಮೌಲ್ಯ ಹಿರೋ ಎಚ್ ಎಫ್ ಡಿಲಕ್ಸ್ ಬೈಕ್ ಹಾಗೂ ಚತುರ್ಥ ಬಹುಮಾನ ೧೦ ಸಾವಿರ ರೂ ಇತ್ತು.
ಇನ್ನುಳಿದಂತೆ ೨ ಹಲ್ಲು, ೪ ಹಲ್ಲು, ೬ ಹಲ್ಲು ಹಾಗೂ ೮ ಹಲ್ಲಿನ ವಿಭಾಗದ ಟಗರಿನ ಕಾಳಗವೂ ಪ್ರತ್ಯೇಕವಾಗಿ ನಡೆಯಿತು. ಅಲ್ಲಿನ ವಿಜೇತರಿಗೆ ನಗದು ರೂಪದ ಬಹುಮಾನ ನೀಡಲಾಯಿತು.
ಈ ಸ್ಪರ್ಧೆಯ ಮೊದಲ ಬಹುಮಾನ ೩ ಲಕ್ಷ ರೂ ಬುಲೆಟ್ ಹಾಗೂ ದ್ವಿತೀಯ ೧.೫ ಲಕ್ಷ ರೂ ಹೋಂಡಾ ಶೈನ್ ಬೈಕ್ ಬಹುಮಾನದ ಪ್ರಾಯೋಜಕತ್ವ ನೀಡಿದ ಸುರಪುರದ ಬಬ್ಲುಗೌಡ ನಾಯಕ ಅವರನ್ನು ಬೇನಾಳ ಗ್ರಾಮಸ್ಥರು ೬೦ ಸಾವಿರ ರೂ ಮೌಲ್ಯದ ಆಕಳನ್ನು ಗೌರವಪೂರ್ವಕವಾಗಿ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲರ ಪುತ್ರ ಸತ್ಯಜೀತಗೌಡ ಪಾಟೀಲ, ಬಬ್ಲುಗೌಡ ನಾಯಕ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಜಿ.ಸಿ. ಮುತ್ತಲದಿನ್ನಿ, ಬಿ.ಎಚ್. ಗಣಿ, ಬುಡ್ಡೇಸಾಬ್ ಬಾಗವಾನ, ಸಂಗಪ್ಪ ಹಂಡರಗಲ್ಲ, ಟಿ.ಎಸ್. ಬಿರಾದಾರ, ಶಿವಾನಂದ ಅಲ್ಲೂರ, ರಮೇಶ ಆಲಮಟ್ಟಿ, ಮುದಕಣ್ಣ ಹೂಗಾರ, ಪರಶುರಾಮ ವಾಲೀಕಾರ, ಬಾಬುಗೌಡ ಮಸೂತಿ, ಮಹೇಶ ಗಾಳಪ್ಪಗೋಳ, ರವಿ ಕಾಳಗಿ, ಚಂದ್ರಶೇಖರ ನಕ್ಕರಗುಂದಿ, ಲಕ್ಷ್ಮಣ ಚನಗೊಂಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment