Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕರ್ನಾಟಕ ರಾಜ್ಯೋತ್ಸವ ದಿನದಂದು ನಗರದ ಕೇಂದ್ರ ಕಾರಾಗೃಹದಲ್ಲಿ ಮೈಸೂರು ಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಬಂಧಿಗಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್ಗಳ ಅಧ್ಯಯನ ಕೇಂದ್ರಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಾರಾಗೃಹದ ಬಂಧಿಗಳು ಬಿಡುಗಡೆಯ ನಂತರದ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಲು ಉನ್ನತ ಶಿಕ್ಷಣ ಕೇಂದ್ರಗಳು ಅತೀ ಅಗತ್ಯವಾಗಿವೆ. ಬಂದಿಗಳ ಭವಿಷ್ಯದ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದ ಅವರು, ಕನ್ನಡ ಭಾಷೆ, ನೆಲ, ಜಲದ ಕುರಿತಾದ ಗ್ರಂಥಗಳನ್ನು ಕಾರಾಗೃಹದ ಗ್ರಂಥಾಲಯಕ್ಕೆ ಒದಗಿಸುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಮಾತನಾಡಿ, ಕಾರಾಗೃಹದ ಕೈದಿಗಳಿಗೆ ಇದೊಂದು ಸದಾವಕಾಶ ದೊರೆತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಡಾ|| ಐ.ಜೆ.ಮ್ಯಾಗೇರಿ ಅವರು ಮಾತನಾಡಿ, ಹೆತ್ತತಾಯಿ ಹೊತ್ತ ನಾಡು ಸ್ವರ್ಗ ಸಮಾನ. ಒಳ್ಳೆಯ ಮನುಷ್ಯರಾಗಿ ಬದುಕುವ…
ವಿಜಯಪುರ: ಮಹಾರಾಷ್ಟ್ರತ್ ಜತ್ತ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ನವೆಂಬರ್ ೯ ರಿಂದ ೧೫ರವರೆಗೆ ಜರುಗುವ ಶ್ರೀ ಮಾಳಿಂಗರಾಯ ದೇವರ ಜಾತ್ರೆ ಅಂಗವಾಗಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಚಡಚಣ, ಸಿಂದಗಿ, ಮುದ್ದೇಬಿಹಾಳ, ತಾಳಿಕೊಟೆ ಹಾಗೂ ಬಸವನಬಾಗೇವಾಡಿ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು.ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ಮೊ: ೭೭೬೦೯೯೨೨೫೨, ಘಟಕ ವ್ಯವಸ್ಥಾಪಕರು ವಿಜಯಪುರ-೧: ಮೊ: ೭೭೬೦೯೯೨೨೬೩, ವಿಜಯಪುರ-೨ ಮೊ: ೭೭೬೦೯೯೨೨೬೪, ಇಂಡಿ ಮೊ: ೭೭೬೦೯೯೨೨೬೫, ಸಿಂದಗಿ ಮೊ: ೭೭೬೦೯೯೨೨೬೬, ಮುದ್ದೇಬಿಹಾಳ ಮೊ: ೭೭೬೦೯೯೨೨೬೭, ತಾಳಿಕೋಟ ಮೊ: ೭೭೬೦೯೯೨೨೬೮, ಬಸವನಬಾಗೇವಾಡಿ ಮೊ: ೭೭೬೦೯೯೨೨೬೯, ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂ: ೦೮೩೫೨-೨೫೧೩೪೪ ಹಾಗೂ ಮೊ: ೭೭೬೦೯೯೨೨೫೮ ಸಂಖ್ಯೆಗೆ…
ಇಂಡಿಯ ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆ ನಿಧನ ಪ್ರಕರಣ ವಿಜಯಪುರ: ಇಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನ.೦೧ ರಂದು ನಿಧನ ಹೊಂದಿದ ಮಹಿಳೆ ಸಾವಿನ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.ಇಂಡಿ ಆಸ್ಪತ್ರೆಯಲ್ಲಿ ಡಯಾಲಸಿಸ್ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿದ್ದ ೩೫ ವರ್ಷ ವಯಸ್ಸಿನ ಶ್ರೀಮತಿ ಬಿಸ್ಮಿಲ್ಲಾ ಸೈಪನಸಾಬ ನದಾಫ್ ಸಾವಿನ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ನೇತೃತ್ವದಲ್ಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ, ನೆಪ್ರೋಲಾಜಿಸ್ಟ್ ಫಿಜಿಶಿಯನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದು, ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸವನಬಾಗೇವಾಡಿಯಲ್ಲಿ ಬಿಎಲ್‌ಡಿ ಸೌಹಾರ್ದ ಶಾಖೆ ಉದ್ಘಾಟಿಸಿ ಎಂಎಲ್‌ಸಿ ಸುನೀಲಗೌಡ ಸ್ಪಷ್ಠನೆ ಬಸವನಬಾಗೇವಾಡಿ: ಕಳೆದ ೨೦೨೨, ಅಕ್ಬೋಬರ್ ೭ ರಂದು ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡ ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್ ಸೌಹಾರ್ದ ಸಹಕಾರಿ ಸಂಘವು ಆರು ತಿಂಗಳಲ್ಲಿಯೇ ಜನರ ವಿಶ್ವಾಸ, ಸಹಕಾರದಿಂದಾಗಿ ರೂ. ೧೦೦ ಕೋಟಿ ವ್ಯವಹಾರ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ನಮ್ಮ ಸೌಹಾರ್ದ ಶಾಖೆಯನ್ನು ಇಡೀ ಉತ್ತರ ಕರ್ನಾಟಕ ವ್ಯಾಪ್ತಿಗೆ ವಿಸ್ತರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಬಿಎಲ್‌ಡಿ ಸೌಹಾರ್ದ ಅಧ್ಯಕ್ಷ ಸುನೀಲಗೌಡ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದ ಸಂಕೀರ್ಣದ ಎಸ್‌ಬಿಐ ಬ್ಯಾಂಕ್ ಮೇಲ್ಮಹಡಿ ಕಟ್ಟಡದಲ್ಲಿ ಬುಧವಾರ ಬಿಎಲ್‌ಡಿ ಸೌಹಾರ್ದದ ಶಾಖೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸೌಹಾರ್ದ ಮೇಲೆ ಜನರು ವಿಶ್ವಾಸವಿಟ್ಟು ಪಿಗ್ಮಿ, ಠೇವಣಿ ಇಡುತ್ತಿದ್ದಾರೆ. ನಾವು ಜನರ ವಿಶ್ವಾಸ ಕಳೆದುಕೊಳ್ಳದೇ ಉತ್ತಮವಾಗಿ ಸೌಹಾರ್ದವನ್ನು ನಡೆಸಿಕೊಂಡು ಹೋಗುತ್ತೇವೆ. ಸೌಹಾರ್ದಗಳು ಉತ್ತಮವಾಗಿ ನಡೆಯಲು ಆಯಾ ಆಡಳಿತ ಮಂಡಳಿಯಿಂದ ಮಾತ್ರ ಸಾಧ್ಯ ಎಂಬುವದನ್ನು…
ಬಸವನಬಾಗೇವಾಡಿ: ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಂಗವಾಗಿ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಯಾವುದೇ ವಾದ್ಯಮೇಳವಿಲ್ಲದೇ ಕೇವಲ ಟ್ಯಾಕ್ಟರ್ಗಳಲ್ಲಿ ವಿವಿಧ ಶಾಲಾ ಮಕ್ಕಳು ವಿವಿಧ ಮಹನೀಯರ ವೇಷಭೂಷಣ ಧರಿಸಿದ ಮೆರವಣಿಗೆ ಹೊರತು ಪಡಿಸಿ ಯಾವುದೇ ಇಲಾಖೆಯ ಸ್ತಬ್ಧ ಚಿತ್ರಗಳು ಕಂಡುಬರದೇ ಕಾಟಾಚಾರಕ್ಕೆ ಎಂಬಂತೆ ತಾಲೂಕಾಡಳಿತದಿಂದ ರಾಜ್ಯೋತ್ಸವ ಜರುಗಿತು.ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ಧ್ವಜಾರೋಹಣ ನೆರವೇರಿದ ನಂತರ ಮೆರವಣಿಗೆಯು ಸಪ್ಪಾಗಿ ಸಾಗಿತು. ಮೆರವಣಿಗೆಯು ಬೆಳಗ್ಗೆ ೯.೩೦ ಗಂಟೆಗೆ ತಡವಾಗಿ ಸಾಗಿದ ನಂತರ ಡೊಳ್ಳು ಮೇಳ, ಯಾವುದೇ ವಾದ್ಯ ಮೇಳ ಇಲ್ಲ ಎಂದು ಕರವೇ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ತಹಸೀಲ್ದಾರ ಜಿ.ಎಸ್.ನಾಯಕ ಅವರ ಗಮನಕ್ಕೆ ತಂದಾಗ ಅವರು ಬಿಇಓ ಅವರಿಗೆ ಹೇಳಿದ್ದೆ. ಅವರು ವ್ಯವಸ್ಥೆ ಮಾಡಿಲ್ಲ ಎಂದಾಗ ಅವರು ಆಕ್ರೋಶಗೊಂಡಾಗ ಬಿಇಓ ವಸಂತ ರಾಠೋಡ ಅವರು ಸ್ಥಳೀಯ ಹೆಣ್ಣುಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಂದ ಬ್ಯಾಂಡ್ ಸೆಟ್ ತರಿಸಿ ಅವರಿಂದ ಮೆರವಣಿಗೆ ಕೊಂಚ ಮೆರಗು ಬಂತು.…
ಮುದ್ದೇಬಿಹಾಳ: ಇಲ್ಲಿನ ತಾಲೂಕಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಾಣಾಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸದೇ ಇಂಗ್ಲೀಷ್ ನಾಮಫಲಕಗಳನ್ನು ಹೊಂದಿದ ಶಾಲೆಗಳ ಸ್ಥಬ್ಧ ಚಿತ್ರವನ್ನು ಊರೆಲ್ಲ ಮೆರವಣಿಗೆ ಮಾಡಿ, ಕನ್ನಡ ಪರ ಸಂಘಟನೆಗಳಿಗೆ ಮತ್ತು ಕನ್ನಡಾಭಿಮಾನಿಗಳ ಮನಸ್ಸಿಗೆ ನೋವು ತಂದಿದ್ದು ಜಿಲ್ಲಾಧಿಕಾರಿಗಳು ಈ ಕೂಡಲೇ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.ಜಯ ಕರ್ನಾಟಕ ಸಂಘಟನೆಯ ತಾಲೂಕು ಮುಖಂಡ ಹುಸೇನ ಮುಲ್ಲಾ, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಕೊಪ್ಪ ಸೇರಿದಂತೆ ಮತ್ತೀತರರು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಬಳಸಿ ಕನ್ನಡ ಉಳಿಸಿ ಎಂದು ಅಧಿಕಾರಿಗಳು ಭಾಷಣ ಮಾಡುತ್ತಾರೆ. ಆದರೆ ಸ್ಥಬ್ಧ ಚಿತ್ರಗಳ ಸಂಪೂರ್ಣ ಜವಾಬ್ದಾರಿ ಹೊತ್ತ ಬಿಇಓ ಯು.ಬಿ.ಧರಿಕಾರ ಶಾಲೆಯವರಿಗೆ ಸೂಕ್ತ ಮಾರ್ಗದರ್ಶನ ನೀಡದೇ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿದ್ದರಿಂದ ಇಂಗ್ಲೀಷ್ ನಾಮಫಲಕಗಳುಳ್ಳ ಶಾಲೆಗಳ ಸ್ಥಬ್ಧ ಚಿತ್ರಗಳನ್ನು ತಾನೇ ಮುಂದೆ ನಿಂತು ಊರೆಲ್ಲ ಮೆರವಣಿಗೆಯ ಮೂಲಕ ಪ್ರದರ್ಶಿಸಿ…
ತಾಜಪುರ (ಎಚ್)ದಲ್ಲಿ ಟಿಪ್ಪು ಸುಲ್ತಾನ್ ಸರ್ಕಲ್ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಪ್ರತಿಯೊಂದು ಗ್ರಾಮಗಳು ಬಸವಣ್ಣನವರ ಅನುಭವ ಮಂಟಪದ ರೀತಿ ಇರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬುಧವಾರ ರಾತ್ರಿ ತಿಕೋಟಾ ತಾಲೂಕಿನ ತಾಜಪುರ ಎಚ್. ಗ್ರಾಮದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ಉದ್ಘಾಟಿಸಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.ಬಸವತತ್ವದಡಿ ಗ್ರಾಮಗಳಲ್ಲಿ ಎಲ್ಲ ಜಾತಿ ಮತ್ತು ಧರ್ಮದ ಜನರು ಸುಖ, ಸಂತೋಷದಿಂದ ಬದುಕಬೇಕು. ರಾಜಕೀಯದವರು ಬಂದು ಜಗಳ ಹಚ್ಚುತ್ತಾರೆ. ಆದರೆ, ತಾವು ಪ್ರತಿದಿನ ಒಬ್ಬರ ಮುಖವನ್ನೊಬ್ಬರು ನೋಡಲೇಬೇಕು. ಈ ಹಿನ್ನೆಲೆಯಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಜೀವನ ಸಾಗಿಸಬೇಕು ಎಂದು ಅವರು ಹೇಳಿದರು.ತಾಜಪುರ ಎಚ್. ಗ್ರಾಮದಲ್ಲಿ ಬಹಳ ದಿನಗಳ ಬೇಡಿಕೆ ಈಗ ಸುಸಜ್ಜಿತ ಟಿಪ್ಪು ಸುಲ್ತಾನ್ ಸರ್ಕಲ್ ನಿರ್ಮಾಣದೊಂದಿಗೆ ಈಡೇರಿದೆ. ಕನ್ನಡ ರಾಜ್ಯೋತ್ಸವ ದಿನದಂದು ಸರ್ಕಲ್ ಉದ್ಘಾಟಿಸಿದ್ದೇವೆ. ಟಿಪ್ಪು ಸುಲ್ತಾನ ಬಗ್ಗೆ…
ವಿಜಯಪುರ: ನಗರದ ಸಮಾಜ ಸೇವಕಿ, ಸಾಹಿತಿ ಡಾ.ಸುರೇಖಾ ರಾಠೋಡ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕವು ೨೦೨೩ನೇ ಸಾಲಿನ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿತು.ನಗರದ ಲಾಲಬಹದ್ದೂರ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣದಲ್ಲಿ ಬುಧವಾರ ಸಂಜೆ ಕರವೇ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಸುರೇಖಾ ರಾಠೋಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ಪ್ರ.ಕಾರ್ಯದರ್ಶಿ ಸುರೇಶ ಬಿಜಾಪುರ, ನಗರ ಘಟಕ ಅಧ್ಯಕ್ಷ ಫಯಾಜ ಕಲಾದಗಿ, ನ್ಯಾಯವಾದಿ ನಾಗರಾಜ ಲಂಬು, ಶ್ರೀಗಳು, ಮೌಲ್ವಿಗಳು, ಪಾದ್ರಿಗಳು ಸೇರಿದಂತೆ ಕರವೇ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಕರ್ನಾಟಕ ಏಕೀಕರಣಕ್ಕೆಪ್ರೇರಕ ಶಕ್ತಿಯಾದ ಮೂಲ ತೈಲವರ್ಣ ಚಿತ್ರವೇ ಕನ್ನಡ ತಾಯಿ ಭುವನೇಶ್ವರಿಯ ಅಧಿಕೃತ ಚಿತ್ರವಾಗಲಿ – ವೀಣಾ ಎಚ್. ಪಾಟೀಲ ಮುಂಡರಗಿ, ಗದಗ ಅದು 1973ರ ನವಂಬರ್ ಒಂದನೇ ದಿನ.ಕನ್ನಡ ನಾಡನ್ನು ಶತಮಾನಗಳ ಕಾಲ ಆಳಿದ ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವವಾದ ಹಂಪಿಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಕನ್ನಡ ನಾಡಿನ ಎಲ್ಲಾ ಹಿರಿಯ ಮುತ್ಸದ್ದಿಗಳು, ಕನ್ನಡ ಪರ ಹೋರಾಟಗಾರರು, ಜನರು ಮುಖ್ಯಮಂತ್ರಿಗಳ ಘೋಷಣೆಗಾಗಿ ಕಾಯುತ್ತಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯಿಂದ ತಂದ ನಾಡ ದೇವಿಯ ಚಿತ್ರಪಟಕ್ಕೆ ಪೂಜಿಸಿದ ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರುಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪಂಪಾ ವಿರುಪಾಕ್ಷದೇವರ ಸನ್ನಿಧಿಯಲ್ಲಿ ಅಧಿಕೃತವಾಗಿ ಘೋಷಿಸಿದರು.ಜೊತೆಗೆ ತಾವು ಪೂಜಿಸಿದ ನಾಡದೇವಿಯ ಚಿತ್ರವನ್ನು ಅಧಿಕೃತವಾಗಿ ಕನ್ನಡ ಭುವನೇಶ್ವರಿಯ ಚಿತ್ರವೆಂದು ಅಂಗೀಕರಿಸುವುದಾಗಿ ಹೇಳಿದರು. ಕರ್ನಾಟಕ ರಾಜ್ಯದ ಜನತೆಯ ನೆಚ್ಚಿನ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಅವರ ಆಶಯದಂತೆ ಕನ್ನಡಮ್ಮನ ಅಧಿಕೃತ ಭಾವಚಿತ್ರವಾಗಿ ಗದಗ ಜಿಲ್ಲೆಯ…
Udayarashmi kannada daily newspaper
