ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಅಬೀದ್ ಗದ್ಯಾಳ ಮಾಹಿತಿ
ಇಂಡಿ: ತಾಲೂಕಿನ ೨೨ ಗ್ರಾ.ಪಂ ನ ೨೫ ಗ್ರಾಮಗಳಿಗೆ ಪ್ರತಿದಿನ ೫೦ ಟ್ಯಾಂಕರ ಮೂಲಕ ಪ್ರತಿದಿನ ೧೦೬ ಟ್ರೀಪ್ ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
ಅವರು ಗುರುವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಸಬಾಭವನದಲ್ಲಿ ಟಾಸ್ಕ ಫೋರ್ಸ ಸಮಿತಿಯಿಂದ ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮಳೆಗಾಲದಲ್ಲಿ ಸಮರ್ಪಕ ಕೊರತೆಯ ಕೊರತೆಯಿಂದ ಈಗ ಬರಗಾಲ ಬಿದ್ದಿದ್ದು ನೀರಿನ ದುಸ್ತರವಾಗುತ್ತಿದೆ. ನೀರಿನ ಬಗ್ಗೆ ತಾತ್ಸಾರ ಬೇಡ. ಹಿರೇಬೇವನೂರ, ಅಥರ್ಗಾ ಮತ್ತು ಹೋರ್ತಿ ಸೇರಿದಂತೆ ತಾಲೂಕಿನಲ್ಲಿರುವ ವಸತಿಗಳಿಗೆ ಬೇಡಿಕೆಯ ಅನುಗುಣವಾಗಿ ನೀರನ್ನು ಪೂರೈಸಲಾಗುತ್ತಿದೆ. ನೀರು ಪೂರೈಸುವ ಆಪ್ ಬಳಸಬೇಕು. ಕಿ.ಮಿ ತಿಳಿಸಬೇಕು. ಅಂದರೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಟ್ಯಾಂಕರಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜನ್ಸಿ ಜಿ.ಪಿ.ಎಸ್ ನಲ್ಲಿ ಗುರುತಿಸಬೇಕು. ಮತ್ತು ಮುಂದಿನ ದಿನಗಳಲ್ಲಿ ಟ್ಯಾಂಕರ್ ಆಪ್ ಉಪಯೋಗಿಸುವ ಕುರಿತು ಮಾಹಿತಿ ನೀಡಿದರು.
ಅಧಿಕ್ಷಕ ಅಭಿಯಂತರ ಕೆಬಿಜೆಎನ್ ಎಲ್ ರಾಂಪೂರದ ಮನೋಜಕುಮಾರ ಗಡಬಳ್ಳಿ ಮಾತನಾಡಿದರು.
ತಹಸೀಲ್ದಾರ ಮಂಜುಳಾ ನಾಯಕ, ಇಒ ಬಾಬು ರಾಠೋಡ, ಎಸ್.ಆರ್.ರುದ್ರವಾಡಿ, ಟಿ.ಎಸ್.ಅಲಗೂರ, ಪಿಡಿಒ ಸಿ.ಜಿ.ಪಾರೆ, ಬಸವರಾಜ ಬಿರಾದಾರ ಮಾತನಾಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಮಹಾದೇವಪ್ಪ ಏವೂರ, ಹೆಸ್ಕಾಂನ ಎಸ್.ಆರ್.ಮೆಂಡೆಗಾರ, ತೋಟಗಾರಿಕೆಯ ಎಚ್.ಎಸ್.ಪಾಟೀಲ, ಪಶು ಇಲಾಖೆಯ ಬಿ.ಎಚ್. ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮತ್ತಿತತರರಿದ್ದರು.