ದೇವರಹಿಪ್ಪರಗಿ: ಸಂತ ಸೇವಾಲಾಲರ ಆದರ್ಶಗಳು ಹಾಗೂ ಅವರು ಬೆಳೆದು ಬಂದ ಸರಳತೆಯ ಹಾದಿ ಇಂದಿಗೂ ಕೂಡ ನಮ್ಮೇಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎಂದು ಮುಳಸಾವಳಗಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ಸಂತ ಸೇವಾಲಾಲರ ೨೮೫ನೇ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಶರಣ ಸಂಗಮ ಸೇವಾ ಸಮೀತಿಯ ತಾಲ್ಲೂಕಾಧ್ಯಕ್ಷ ಸಂಗಣ್ಣ ತಡವಲ್, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ಸಂತ ಸೇವಾಲಾಲರು ಉಪದೇಶಿಸಿದ ಜೀವನದ ವಿಶಿಷ್ಟ ತತ್ವಗಳು ಎಲ್ಲರಿಗೂ ದಾರಿದೀಪವಾಗಿವೆ ಇವುಗಳನ್ನು ನಾವೆಲ್ಲ ಪಾಲಿಸೋಣ ಎಂದರು.
ಮುಖ್ಯಗುರು ಎ.ಕೆ.ಜಾಲವಾದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಹೀರು ಲಮಾಣಿ, ಸಮುದಾಯದ ಮುಖಂಡ ಸುರೇಶ ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ರಾಠೋಡ, ಪಿಕೆಪಿಎಸ್ ನಿರ್ದೇಶಕ ರಮೇಶ ರಾಠೋಡ, ಲಕ್ಷö್ಮಣ ಜಾಧವ, ಎಸ್.ಜಿ.ತಾವರಖೇಡ, ಗೊಲ್ಲಾಳ ಬಿರಾದಾರ, ಎಸ್.ಆರ್.ನಂದ್ಯಾಳ, ಬಸವರಾಜ ಶಿವಣಗಿ, ಬಿ.ಡಿ.ಪಾಟೀಲ ಸೇರಿದಂತೆ ತಾಂಡಾದ ಪ್ರಮುಖರು ಹಾಗೂ ಶಾಲಾ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

