ದೇವರಹಿಪ್ಪರಗಿ: ತಾಲ್ಲೂಕು ನಿವೃತ್ತ ನೌಕರರ ಸಂಘದ ಕಾರ್ಯಚಟುವಟಿಕೆಗಳಿಗಾಗಿ ಸೂಕ್ತ ನಿವೇಶನ ನೀಡುವಂತೆ ಆಗ್ರಹಿಸಿ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸದಯ್ಯನಮಠದಲ್ಲಿ ಬುಧವಾರ ಜರುಗಿದ ಮಾಸಿಕಸಭೆಯಲ್ಲಿ ಸೇರಿದ ಸಂಘದ ಸದಸ್ಯರು ತಮ್ಮ ಸಂಘದ ಕಾರ್ಯಚಟುವಟಿಕೆಗಳಿಗಾಗಿ ಕಾರ್ಯಾಲಯದ ಅಗತ್ಯತೆಯನ್ನು ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ರಾಜ್ಯಮಟ್ಟದ ನಿವೃತ್ತ ನೌಕರರ ಸಂಘದ ಮಹಾಅಧಿವೇಶನ ಮಾರ್ಚ ೧೭ರಂದು ಬೆಂಗಳೂರಿನಲ್ಲಿ ಜರುಗಲಿದೆ. ಅಧಿವೇಶನದಲ್ಲಿ ಭಾಗವಹಿಸಲು ಪಟ್ಟಣದಿಂದ ೪೦ ಸದಸ್ಯರು ಭಾಗವಹಿಸುತ್ತಾರೆ ಎಂದು ತಿಳಿಸುತ್ತಾ, ಸಂಘದ ಕಾರ್ಯಾಲಯಕ್ಕೆ ಅಗತ್ಯವಾದ ನಿವೇಶನ ಒದಗಿಸಲು ಮುಖ್ಯಾಧಿಕಾರಿಗಳಿಗೆ ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಂತರ ಎಲ್ಲ ಸದಸ್ಯರೊಂದಿಗೆ ತೆರಳಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ರಾಂತ ಮುಖ್ಯಗುರು ಎಸ್.ಎನ್.ಬಸವರೆಡ್ಡಿ ಮಾತನಾಡಿದರು.
ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಕೆ.ಸಿ.ಮಠ, ಎಸ್.ವ್ಹಿ.ಆಲಾಳಮಠ, ಬಿ.ಎಸ್.ನಾಗೂರ, ಎಮ್.ಎಚ್.ಪಟೇಲ, ಎಚ್.ಎಚ್.ವಡಗೇರಿ, ಎ.ಸಿ.ಕನ್ನೋಳ್ಳಿ, ಕೆ.ಎನ್.ಮಣೂರ, ಎಸ್.ಬಿ.ರೂಗಿ, ಎಸ್.ಟಿ.ಲಮಾಣಿ, ಎಸ್.ಎಮ್.ಇಂಡಿ, ಜಿ.ಎ.ಪಾಟೀಲ, ಎಸ್.ಎನ್.ಹರಳಯ್ಯ, ಎ.ಸಿ.ಲೋಗಾವಿ, ಎಸ್.ಜಿ.ತಾವರಖೇಡ, ಬಿ.ಎಸ್.ಉತ್ನಾಳ, ಕೆ.ಎ.ಮುಲ್ಲಾ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

