Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಮೊಬೈಲ್, ಟಿವಿ ಧಾರವಾಹಿಗಳನ್ನು ವೀಕ್ಷಣೆ ಮಾಡುವದನ್ನು ಬಿಟ್ಟು ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಿದರೆ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿಯ ಅಧ್ಯಕ್ಷ ಎನ್.ಎಂ. ಬಿರಾದಾರ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ. ತಾವುಗಳು ನಮ್ಮ ಅಕಾಡೆಮಿ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಒಳ್ಳೆಯ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಮಾತನಾಡಿ, ಇಲಾಖೆಯ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ನಿರಂತರ ಅಧ್ಯಯನದೊಂದಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ವಕೀಲ ವಿ.ಬಿ.ಮರ್ತುರ, ಪ್ರಾಚಾರ್ಯ ಎಂ.ಬಿ.ವಗ್ಗರ ಮಾತನಾಡಿದರು. ಉಪನಿರ್ದೇಶಕರ ಕಚೇರಿ ಶಾಖಾಧಿಕಾರಿ ಪ್ರಕಾಶ…
ವಿಜಯಪುರ: ವಿವೇಕಾನಂದ ಡಬ್ಬಿ ಅವರನ್ನು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರನ್ನಾಗಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಆರ್. ರಘು (ಕೌಟಿಲ್ಯ) ಅವರು ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಲೋಕಸಭಾ ಚುನಾವಣೆಗಳೂ ಸೇರಿದಂತೆ ಇತರ ಚುನಾವಣೆಗಳಲ್ಲಿ ಪಕ್ಷವು ಜಯಭೇಟಿ ಬಾರಿಸಲು ಸಮರ್ಪಣಾ ಮನೋಭಾವದಿಂದ ಶ್ರಮಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲಮಟ್ಟಿ: ಉದ್ಯಾನದ ಕೂಲಿ ಕಾರ್ಮಿಕರ ಸಮಸ್ಯೆಗೆ ಸಚಿವ ಶಿವಾನಂದ ಪಾಟೀಲ ಸ್ಪಂದಿಸಿದ್ದು, ದೂರವಾಣಿಯ ಮೂಲಕ ಕೆಬಿಜೆಎನ್ ಎಲ್ ಎಂಡಿ ಅವರಿಗೆ ಉದ್ಯಾನ ನಿರ್ಹಣೆಯ ಟೆಂಡರ್ ಮುಂದೂಡಲು ಸೂಚಿಸಿದ್ದು, ವಿಧಾನ ಮಂಡಲ ಅಧಿವೇಶನದ ನಂತರ ಕಾರ್ಮಿಕರ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸಲಾಗುವ ಭರವಸೆ ನೀಡಿದ್ದಾರೆ.ಬೆಂಗಳೂರಿಗೆ ತೆರಳಿ ಸಚಿವರಿಗೂ ಧರಣಿನಿರತರು ಗುರುವಾರ ಮನವಿ ಸಲ್ಲಿಸಿದರು.ಟೆಂಡರ್ ಮುಂದೂಡಿದ ಬಗ್ಗೆ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ತಿಳಿಸಿ, ಧರಣಿ ಹಿಂಪಡೆಯಲು ಕೋರಿದರು. ನಿಡಗುಂದಿ ಸಿಪಿಐ ಶರಣಗೌಡ ಗೌಡರ ಇದ್ದರು.ಉದ್ಯಾನದ ನಿರ್ವಹಣೆ ಕಾಮಗಾರಿಯನ್ನು ಟೆಂಡರ್ ಕರೆದಿದ್ದರಿಂದ ಕಳೆದ 22 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 300 ಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿತ್ತು. ಹೀಗಾಗಿ ಅವರು ಫೆ. 12 ರಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.ಹೀಗಾಗಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ…
ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದ ಮಹಾರಾಷ್ಟ್ರ ಸ್ಪೀಕರ್ ಮುಂಬಯಿ: ಕಳೆದ ವರ್ಷ ಜೂನ್‌ನಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯವೆದ್ದಿದ್ದ 41 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಅಜಿತ್ ಪವಾರ್ ಬಣವನ್ನು ‘ನೈಜ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ’ ಎಂದು ಹೇಳಿದೆ.ಅಜಿತ್ ಪವಾರ್ ಅವರ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದಿರುವ ಮತ್ತು ಬಿಜೆಪಿ-ಶಿವಸೇನೆಯ ಇದೇ ರೀತಿಯ ಒಡೆದುಹೋದ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಹೊಸ ರಾಜ್ಯ ಸರ್ಕಾರ ರಚಿಸಲು ಅಜಿತ್ ಪವಾರ್ ಜೊತೆಗೂಡಿದ್ದರು. ‘ಶಾಸಕರು ಪಕ್ಷದ ಇಚ್ಛೆಯಂತೆ ತೀರ್ಮಾನ ತಗೆದುಕೊಂಡಿರುವ ಕಾರಣ ಅವರನ್ನು ಅನರ್ಹಗೊಳಿಸಲಾಗುವುದಿಲ್ಲ’ ಎಂದು ನಾರ್ವೇಕರ್ ಹೇಳಿದರು.‘ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಿಜವಾದ ರಾಜಕೀಯ ಪಕ್ಷ ಎಂದು ನಾನು ಭಾವಿಸುತ್ತೇನೆ. ಅಜಿತ್ ಪವಾರ್ 41 ಶಾಸಕರೊಂದಿಗೆ ಶಾಸಕಾಂಗ ಬಹುಮತವನ್ನು ಹೊಂದಿದ್ದಾರೆ. ಇದು ನಿರ್ವಿವಾದವಾಗಿದೆ’ ಎಂದು ಸ್ಪೀಕರ್ ಗುರುವಾರ ಸಂಜೆ ಹೇಳಿದರು.*53 ಶಾಸಕರನ್ನು ಹೊಂದಿದ್ದ ಎನ್‌ಸಿಪಿ*53 ಶಾಸಕರನ್ನು ಹೊಂದಿದ್ದ ಎನ್‌ಸಿಪಿಯ 41 ಮಂದಿ ಅಜಿತ್ ಪವಾರ್ ಪರವಾಗಿ…
ಸಿಂದಗಿ: ಸಮಾಜದ ಓರೆ ಕೋರೆಗಳನ್ನು ಬಲ್ಲವರಾಗಿದ್ದ ಸೇವಾಲಾಲ್ ಅವರು ಪ್ರತಿಯೊಂದು ವಿಚಾರವನ್ನು ಸಮರ್ಥವಾಗಿ ವಿಶ್ಲೇಷಣೆ ಮಾಡಿ ಅದರಿಂದಾಗುವ ಅಪಾಯವನ್ನು ಜನರಿಗೆ ತಿಳಿಹೇಳುತ್ತಿದ್ದರು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಹಮ್ಮಿಕೊಂಡ ಸಂತ ಸೇವಾಲಾಲ್ ಜಯಂತಿ ಅಚರಣೆ ಮಾಡಲಾಯಿತು. ಈ ವೇಳೆ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಡಾ.ಅನಿಲ ನಾಯಕ್, ಮಾಜಿ ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ನಿಖಿಲ ಖಾನಾಪೂರ, ಸುನಂದಾ ಯಂಪುರೆ, ಸೇರಿದಂತೆ ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಸೇರಿದಂತೆ ಅನೇಕರು ಇದ್ದರು.ತಾಲೂಕು ಸಾರ್ವಜನಿಕ ಆಸ್ಪತ್ರೆ: ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ೨೮೫ನೆಯ ಶ್ರೀ ಸಂತ ಸೇವಾಲಾಲರ ಜಯಂತಿ ಆಚರಿಸಲಾಯಿತು.ಈ ವೇಳೆ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ್ ನರಗೋದಿ ಮಾತನಾಡಿದರು.ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ರಮೇಶ್ ರಾಠೋಡ ಆಪ್ತಸಮಾಲೋಚಕ ಎಂ.ಪಿ.ಸಾಗರ್ ಶುಶ್ರೂಷಕಿ ಅಧಿಕಾರಿ ವಿದ್ಯಾ ಹಿರೇಪಟ್, ದೇವಮ್ಮ…
ವಿಜಯಪುರ: ಮದ್ರಾಸ್ ರೆಜಿಮೆಂಟ್‌ನ ಎಲ್ಲಾ ಮಾಜಿ ಸೈನಿಕರು ಮತ್ತು ವೀರನಾರಿಯರ ಜೊತೆ ಪರಸ್ಪರ ಭೇಟಿ ಹಾಗೂ ಕುಂದು ಕೊರತೆ ನಿವಾರಿಸಲು ಮದ್ರಾಸ್ ರೆಜಿಮೆಂಟ್‌ನಿಂದ ಒಂದು ತಂಡ ದಿನಾಂಕ : ೨೨-೦೨-೨೦೨೪ರಂದು ಸೈನಿಕ್ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆ ವಿಜಯಪುರ ಕಾರ್ಯಾಲಯಕ್ಕೆ ಭೇಟಿ ನೀಡಲಿದ್ದು, ಮಾಜಿ ಸೈನಿಕರು, ವೀರ ನಾರಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರದ ಭೈರವ ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರ‍್ಯಾಂಕ್ ಪಡೆದಿರುವುದಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಸತಿ ನಿಲಯದ ವಿದ್ಯಾರ್ಥಿಯಾದ ಕುಮಾರ ಅಬೂಬಕರ್ ಕೊಲ್ಹಾರ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ನ್ಯೂಟ್ರಿಶಿಯನ್‌ನಲ್ಲಿ ೩ನೇ ರ‍್ಯಾಂಕ್, ಮನಶಾಸ್ತ್ರ ವಿಷಯದಲ್ಲಿ ೮ನೇ ರ‍್ಯಾಂಕ್ ಪಡೆದಿದ್ದಾರೆ. ಕುಮಾರ ನಬೀಸಾ ಬಾವಾಸಾ ವಾಲಿಕಾರ ನರ್ಸಿಂಗ್ ಫೌಂಡೇಶನ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ೮ನೇ ರ‍್ಯಾಂಕ್ ಹಾಗೂ ಕುಮಾರ ವಸೀಮ ಶೇಖ ಇವರು ನರ್ಸಿಂಗ್ ಫೌಂಡೇಶನ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ೧೦ನೇ ರ‍್ಯಾಂಕ್ ಪಡೆದು, ಸಾಧನೆ ಮಾಡಿದ್ದು, ಇವರ ಸಾಧನೆಗೆ ತಾಲೂಕಾ ವಿಸ್ತರಣಾಧಿಕಾರಿ ಎಸ್.ಎ.ಜಮಾದಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಮಿಷನ್ ಶಕ್ತಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಯೋಜನೆಯಡಿ ಜಿಲ್ಲಾ ಮಿಷನ್ ಸಂಯೋಜಕರು ಹಾಗೂ ಸ್ಪೆಷಲಿಸ್ಟ್ ಇನ್ ಫೈನಾನ್ಸಿಯಲ್ ಲಿಟರಸಿ & ಅಕೌಂಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ : ೨೬-೦೨-೨೦೨೪ರೊಳಗಾಗಿ ಸಲ್ಲಿಸಬೇಕು. ಹುದ್ದೆಗಳಿಗೆ ಸಲ್ಲಿಸಬೇಕಾದ ಅರ್ಹತೆ ನಿಗದಿತ ವಿದ್ಯಾರ್ಹತೆ ಹಾಗೂ ಅನುಭವ , ನಿಗದಿತ ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಚೇರಿ ದೂ:೦೮೩೫೨-೨೯೫೩೫೩ ಸಂಖ್ಯೆಗೆ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಗುರುವಾರ ತಿಕೋಟಾ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್, ಸರ್ಕಾರಿ ಗ್ರಂಥಾಲಯ, ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಿದ್ಧಾಪುರ(ಕೆ) ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತಿಗೆ ಭೇಟಿ ನೀಡಿದ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಮಿಷನ್(ಗ್ರಾ), ೧೫ನೇ ಹಣಕಾಸು, ತೆರಿಗೆ ವಸೂಲಾತಿ ಸೇರಿ ವಿವಿಧ ಅನುದಾನಗಳು, ಹಾಗೂ ಕುಡಿಯುವ ನೀರಿನ ಕುರಿತು, ಬೀದಿ ದೀಪಗಳ ನಿರ್ವಹಣೆ ಸೇರಿ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದಾಖಲಾತಿಗಳನ್ನು ಹಾಗೂ ಕಾಮಗಾರಿ ಕಡತಗಳು ಸೇರಿದಂತೆ ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು.ಗ್ರಾಮದಲ್ಲಿರುವ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಡಿಜಿಟಲ್ ವ್ಯವಸ್ಥೆಯನ್ನು ವೀಕ್ಷಿಸಿದರು. ನಂತರ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಆಟದ ಮೈದಾನ ಹಾಗೂ ಭೋಜನಾಲಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ…
ಬ್ರಹ್ಮದೇವನಮಡು: ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿನಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿ ರಾಜ್ಯದಲ್ಲಿ ಸುಮಾರು ೨೮೦೦ ಸರಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚುವ ಹಂತ ತಲುಪಿದೆ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಅನಧಿಕೃತ ಕೋಚಿಂಗ್ ಶಾಲೆಗಳನ್ನು ಮುಚ್ಚಿಸಲು ಮುಂದಾಗದೆ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ದಲಿತ ಯುವ ಮುಖಂಡ ಪಿಂಟು ಹೊಸಮನಿ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಸಾಬಾಳ ಎಚ್.ಎಸ್ .ಪಿ ಶಾಲೆಯಲ್ಲಿ ಸುಮಾರು ಎರಡು ನೂರು ವಿದ್ಯಾರ್ಥಿಗಳ ಹಾಜರಾತಿ ಇದ್ದು, ಅದರಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮದ ಅನಧಿಕೃತ ಕೋಚಿಂಗ್ ಸೆಂಟರೊಂದರಲ್ಲಿ ಓದುತ್ತಿದ್ದಾರೆ ವಿದ್ಯಾರ್ಥಿಗಳು ಸರಕಾರದ ಮೂಲ ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಕೋಚಿಂಗ್ ಸೆಂಟರ್ ಬಂದ ಮಾಡಿಸಿ ಸರಕಾರಿ ಶಾಲೆಗಳು ಬೆಳೆಯಲು ಕೈ ಜೋಡಿಸಿ ಎಂದು ತಾಲೂಕ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನೆಯಾಗಿಲ್ಲ. ಕೂಡಲೆ ಡಿ ಡಿ ಪಿ ಐ ಅವರು ಮುತುವರ್ಜಿ ವಹಿಸಿ ಅನಧಿಕೃತ ಕೋಚಿಂಗ್ ಸೆಂಟರಗಳನ್ನು ಬಂದ ಮಾಡಿಸಬೇಕು ಎಂದು…
