Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 26, 2026

ಅಥಣಿ: ಮತ್ತಷ್ಟು 4 ಎಐ ಕ್ಯಾಮೆರಾಗಳ ಕಾರ್ಯಾರಂಭ

ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗಬಾರದು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ತಿಕೋಟಾ: ವಿವಿಧೆಡೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ-ಪರಿಶೀಲನೆ
(ರಾಜ್ಯ ) ಜಿಲ್ಲೆ

ತಿಕೋಟಾ: ವಿವಿಧೆಡೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ-ಪರಿಶೀಲನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಗುರುವಾರ ತಿಕೋಟಾ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್, ಸರ್ಕಾರಿ ಗ್ರಂಥಾಲಯ, ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿದ್ಧಾಪುರ(ಕೆ) ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತಿಗೆ ಭೇಟಿ ನೀಡಿದ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಮಿಷನ್(ಗ್ರಾ), ೧೫ನೇ ಹಣಕಾಸು, ತೆರಿಗೆ ವಸೂಲಾತಿ ಸೇರಿ ವಿವಿಧ ಅನುದಾನಗಳು, ಹಾಗೂ ಕುಡಿಯುವ ನೀರಿನ ಕುರಿತು, ಬೀದಿ ದೀಪಗಳ ನಿರ್ವಹಣೆ ಸೇರಿ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದಾಖಲಾತಿಗಳನ್ನು ಹಾಗೂ ಕಾಮಗಾರಿ ಕಡತಗಳು ಸೇರಿದಂತೆ ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು.
ಗ್ರಾಮದಲ್ಲಿರುವ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಡಿಜಿಟಲ್ ವ್ಯವಸ್ಥೆಯನ್ನು ವೀಕ್ಷಿಸಿದರು. ನಂತರ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಆಟದ ಮೈದಾನ ಹಾಗೂ ಭೋಜನಾಲಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಶಾಲಾ ಕಂಪೌಂಡ, ಆಟದ ಮೈದಾನದಲ್ಲಿ ವೀಕ್ಷಕರ ಗ್ಯಾಲರಿ ಹಾಗೂ ತಾರಾಲಯ ನಿರ್ಮಿಸಲು ಅನುದಾನ ಒದಗಿಸಲು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇದಕ್ಕೆ ಸ್ಪಂದಿಸಿದ ಅವರು ಕಂಪೌಂಡ ನಿರ್ಮಿಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿಯಮಾನುಸಾರ ಕ್ರಿಯಾ ಯೋಜನೆಯನ್ನು ತಯಾರಿಸಿ ಸಲ್ಲಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಉಳಿದಂತೆ ವೀಕ್ಷಕರ ಗ್ಯಾಲರಿ ಹಾಗೂ ತಾರಾಲಯ ಅನುಷ್ಠಾನಗೊಳಿಸಲು ನುರಿತ ತಾಂತ್ರಿಕ ಸಹಾಯಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅನುಷ್ಠಾನ ಮಾಡಲು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ವರ್ಷ ಮಳೆಯ ಅಭಾವವಿರುವದರಿಂದ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಹಾಯ ಸಹಕಾರ ಅವಶ್ಯವಿದ್ದಲ್ಲಿ ನೇರವಾಗಿ ನನಗೆ ಸಂಪರ್ಕಿಸಿ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿಲ್ಪಾ ಮಚೇಂದ್ರ ಹೊಸಮನಿ, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು(ಪಂ.ರಾ) ಶೋಭಕ್ಕ ಶೀಳಿನ, ಸಿದ್ದಾಪುರ(ಕೆ) ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಬಿ.ಮನಗೂಳಿ, ಜಿ.ವಾಯ್.ಮಸಳಿ,(ಈ ಹಿಂದೆ ಕಾರ್ಯನಿರ್ವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ), ಕಾರ್ಯದರ್ಶಿ ಸೋಮಸಿಂಗ್ ಕೋಳಿ, ತಾಂತ್ರಿಕ ಸಂಯೋಜಕರಾದ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯತಿಯ ತಾಂತ್ರಿಕ ಸಹಾಯಕ ಅಭಿಯಂತರರಾದ ಶ್ರೀಧರ ಸಾವಳಗಿ, ಗ್ರಾಮ ಕಾಯಕ ಮಿತ್ರ ಸಂಗೀತಾ ಸುರೇಶ ಸಪ್ತಾಳಕರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 26, 2026

ಅಥಣಿ: ಮತ್ತಷ್ಟು 4 ಎಐ ಕ್ಯಾಮೆರಾಗಳ ಕಾರ್ಯಾರಂಭ

ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗಬಾರದು

ಜು.೨೭ರಂದು ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆ ಉದ್ಘಾಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 26, 2026
    In ದಿನಪತ್ರಿಕೆ
  • ಅಥಣಿ: ಮತ್ತಷ್ಟು 4 ಎಐ ಕ್ಯಾಮೆರಾಗಳ ಕಾರ್ಯಾರಂಭ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗಬಾರದು
    In (ರಾಜ್ಯ ) ಜಿಲ್ಲೆ
  • ಜು.೨೭ರಂದು ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ ಬಿ ಪಾಟೀಲ ಜಿಲ್ಲಾ ಪ್ರವಾಸ ಇಂದು
    In (ರಾಜ್ಯ ) ಜಿಲ್ಲೆ
  • ನೀಟ್ ಪರೀಕ್ಷೆಯಲ್ಲಿ ಮಹಮ್ಮದ್ ಯಾಸೀನ್ 3226ನೇ ರ‍್ಯಾಂಕ್
    In (ರಾಜ್ಯ ) ಜಿಲ್ಲೆ
  • ಮತದಾರರ ಪಟ್ಟಿ ಪರಿಷ್ಕರಣೆ: 15.24 ಲಕ್ಷ ಗಣತಿ ಫಾರಂ ಡಿಜಿಟಲೀಕರಣ
    In (ರಾಜ್ಯ ) ಜಿಲ್ಲೆ
  • ಇಂಡಿಯಲ್ಲಿ ಸಂಚಲನ: ಎರಡೂವರೆ ತಿಂಗಳ ಬಳಿಕ ಕೊಲೆ ಆರೋಪದ ತಿರುವು
    In (ರಾಜ್ಯ ) ಜಿಲ್ಲೆ
  • ಸಿಂದಗಿಯಲ್ಲಿ ಜು.೨೭ ರಂದು ಪತ್ರಿಕಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಶ್ರೀ ಖಾಸ್ಗತರ ಗದ್ದುಗೆ ದರ್ಶನ ಪಡೆದ ಶಾಸಕ ರಾಜುಗೌಡ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.